Prabhas: ಅದೊಂದು ಕಾರಣಕ್ಕೆ ನಾನು ಮದ್ವೆ ಆಗಿಲ್ಲ; ಅಭಿಮಾನಿಗಳಿಗೆ ದೊಡ್ಡ ಶಾಕ್ ಕೊಟ್ಟ ಪ್ರಭಾಸ್

Written by Soma Shekar

Published on:

---Join Our Channel---

Prabhas: ಪ್ರಭಾಸ್ (Prabhas) ಅಭಿಮಾನಿಗಳೀಗ ಕಲ್ಕಿ 2898 AD (Kalki 2898 AD) ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿ ಇದ್ದಾರೆ. ಸುಮಾರು ಆರುನೂರು ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಈ ಅದ್ದೂರಿ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ವೈಜಯಂತಿ ಮೂವೀಸ್ ಬ್ಯಾನರ್ ನಲ್ಲಿ ನಿರ್ಮಾಣ ಆಗಿರುವ ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದು, ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದಲ್ಲಿ ಅದ್ದೂರಿ ತಾರಾಗಣವೇ ಇದ್ದು ಕಮಲಹಾಸನ್, ಅಮಿತಾಬ್ ಬಚ್ಚನ್ (Amitab Bacchan) ರಂತಹ ದಿಗ್ಗಜ ನಟರು ಸಹಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ. ಹಾಲಿವುಡ್ ರೇಂಜ್ ನಲ್ಲಿ ನಿರ್ಮಾಣ ಆಗಿರೋ ಸಿನಿಮಾದ ಟೀಸರ್ ನೋಡಿದ ಮೇಲಂತೂ ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ ಮತ್ತು ಸಿನಿಮಾ ಬಿಡುಗಡೆಗೆ ಕಾದಿದ್ದಾರೆ.

ಈಗ ಇವೆಲ್ಲವುಗಳ ನಡುವೆಯೇ ನಟ‌ ಪ್ರಭಾಸ್ ಅವರು ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ತಮ್ಮ ಮದುವೆಯ ವಿಚಾರವನ್ನು ಮಾತನಾಡಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕಲ್ಕಿ ಸಿನಿಮಾ ಕುರಿತಾಗಿ ಒಂದು ಅದ್ದೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಜೊತೆಗೆ ಸಣ್ಣ ಟೀಸರ್ ಒಂದನ್ನು ಸಹಾ ಬಿಡುಗಡೆ ಮಾಡಲಾಗಿದೆ.

ಕಲ್ಕಿಯ ಈ ಹೊಸ ಟೀಸರ್ ನಲ್ಲಿ ಸಿನಿಮಾದಲ್ಲಿ ನಾಯಕ ಭೈರವನಿಗೆ ಜೊತೆಯಾಗಿರುವ ಬುಜ್ಜಿ ರೊಬೊವನ್ನು ಪರಿಚಯಿಸಲಾಗಿದೆ. ಈ ಬುಜ್ಜಿ ರೊಬೊ ಪಾತ್ರಕ್ಕೆ ದನಿಯಾಗಿದ್ದಾರೆ ಮಹಾನಟಿ ಖ್ಯಾತಿಯ ನಟಿ ಕೀರ್ತಿ ಸುರೇಶ್ ಅವರು. ಸಿನಿಮಾದಲ್ಲಿ ಭೈರವ ಮತ್ತು ಬುಜ್ಜಿ ನಡುವಿನ ಬಾಂಧವ್ಯವನ್ನು ತೋರಿಸುವ ಟೀಸರ್ ಬಿಡುಗಡೆ ಆಗಿದ್ದು, ಈಗ ಅಭಿಮಾನಿಗಳು ಇನ್ನಷ್ಟು ಎಕ್ಸೈಟ್ ಆಗಿದ್ದಾರೆ.‌

ಬುಧವಾರ ಕಲ್ಕಿ ಸಿನಿಮಾ ಕಾರ್ಯಕ್ರಮಕ್ಕೆ ಸ್ಪೆಷಲ್ ಹೋಸ್ಟ್ ಬರಲಿದ್ದಾರೆ ಅಂತ ನಿರ್ಮಾಪಕರು ಹಾಕಿದ್ದ ಪೋಸ್ಟ್ ನೋಡಿ ಬಹಳಷ್ಟು ಜನ ಹುಡುಗಿಯರ ಹೃದಯ ಒಡೆದುಹೋಗಿದೆ. ಅವರಿಗಾಗಿಯೇ ನಾನು ಮದುವೆ ಆಗಿಲ್ಲ ಎನ್ನುವ ಮಾತನ್ನು ಪ್ರಭಾಸ್ ಹೇಳುವ ಮೂಲಕ ಮದುವೆ ವಿಚಾರವಾಗಿ ಪ್ರಭಾಸ್ ಹಾಸ್ಯಮಯವಾಗಿ ಉತ್ತರವನ್ನು ನೀಡಿದ್ದಾರೆ.

Leave a Comment