Pooja Hegde: ಸತತ ಸೋಲಿನಿಂದ ಕಂಗೆಟ್ಟಿದ್ದ ಪೂಜಾ ಹೆಗ್ಡೆಗೆ ಸಿಕ್ತು ಬಂಪರ್ ಆಫರ್, ಸ್ಟಾರ್ ನಟನ ಸಿನಿಮಾಕ್ಕೆ ನಾಯಕಿ

Written by Soma Shekar

Published on:

---Join Our Channel---

Pooja Hegde: ಸಿನಿಮಾ ರಂಗದಲ್ಲಿ (Cinema Industry) ಸಕ್ಸಸ್ ಅನ್ನೋದು ಅದೃಷ್ಟದ ಆಟ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅದಕ್ಕೆ ಕೆಲವು ನಟ, ನಟಿಯರು ಒಂದೇ ಸಿ‌ನಿಮಾದಿಂದ ರಾತ್ರೋ ರಾತ್ರಿ ಸ್ಟಾರ್ ಗಳಾಗಿ ಬಿಡುತ್ತಾರೆ. ಆದರೆ ಸ್ಟಾರ್ ಗಿರಿಯನ್ನು ಹಾಗೆ ಮುಂದುವರೆಸಿಕೊಂಡು ಹೋಗೋದಕ್ಕೆ ಸಹಾ ಅದೃಷ್ಟ ಅನ್ನೋದು ಇರಲೇಬೇಕು ಇಲ್ಲವಾದರೆ ದೊರೆತ ಸಕ್ಸಸ್ ದೂರ ಆಗೋದಕ್ಕೆ ಹೆಚ್ಚು ಸಮಯವೇನೂ ಹಿಡಿಯಲ್ಲ.

ಈ ಮಾತು ನಟಿ ಪೂಜಾ ಹೆಗ್ಡೆ (Pooja Hegde) ವಿಷಯದಲ್ಲಿ ನಿಜವಾಗಿದೆ. ತೆಲುಗು ಇಂಡಸ್ಟ್ರಿಯಲ್ಲಿ ಸ್ಟಾರ್ ‌ನಟಿಯಾಗಿ ಒಂದೊಮ್ಮೆ ಗೋಲ್ಡನ್ ಲೆಗ್ ಎನಿಸಿಕೊಂಡ ಈ ನಟಿ ಈಗ ಐರನ್ ಲೆಗ್ ಅಂತ ಟೀಕೆಗೆ ಗುರಿಯಾಗಿದ್ದಾರೆ. ಈ ಕಡೆ ತೆಲುಗಿನಲ್ಲೂ, ಆ ಕಡೆ ಬಾಲಿವುಡ್ ನಲ್ಲೂ ಸತತ ಸೋಲುಗಳಿಂದಾಗಿ ನಟಿ ಬೇಡಿಕೆಯನ್ನು ಕಳೆದುಕೊಂಡಿದ್ದಾರೆ.

ಸೌತ್ ನಲ್ಲಿ ರಾಧೇ ಶ್ಯಾಮ್, ಆಚಾರ್ಯ, ಬೀಸ್ಟ್ ಸಿನಿಮಾಗಳ ಸೋಲಿನ ನಂತರ ನಟಿ ಯಾವುದೇ ಹೊಸ ಸಿನಿಮಾದಲ್ಲಿ ನಟಿಸಿಲ್ಲ. ಪೂಜಾ ಹೆಗ್ಡೆ ಬದಲಿಗೆ ನಿರ್ಮಾಪಕ ಮತ್ತು ನಿರ್ದೇಶಕರು ಬೇರೆ ನಟಿಯರ ಕಡೆಗೆ ಗಮನವನ್ನು ನೀಡಿದರು. ಪೂಜಾ ಹೆಗ್ಡೆ ಅಭಿಮಾನಿಗಳು ನಟಿ ಮತ್ತೆ ಯಾವಾಗ ಸಿನಿಮಾ ಮಾಡ್ತಾರೆ ಅನ್ನೋ ನಿರೀಕ್ಷೆಯಲ್ಲಿ ಇದ್ರೆ, ಕೆಲವರು ನಟಿಯ ಕೆರಿಯರ್ ಖತಂ ಅಂತ ಹೇಳಿದರು.

ಆದರೆ ಈಗ ನಟಿ ತಮಿಳಿನ ಸ್ಟಾರ್ ನಟ ಸೂರ್ಯ (Actor Surya) ಜೊತೆಗೆ ಹೊಸ ಸಿನಿಮಾದಲ್ಲಿ ನಾಯಕಿಯಾಗುವುದು ಖಚಿತವಾಗಿದೆ. ಈ ಮೂಲಕ ಕಾಲಿವುಡ್ ನಲ್ಲಿ ಪೂಜಾ ಹೆಗ್ಡೆ ಬಂಪರ್ ಆಫರನ್ನು ಪಡೆದಿದ್ದು, ಈ ಸುದ್ದಿ ಕೇಳಿ ನಟಿಯ ಅಭಿಮಾನಿಗಳು ಖುಷಿಯಾಗಿದ್ದಾರೆ. ಸೂರ್ಯ ಜೊತೆ ಮೊದಲ ಬಾರಿಗೆ ನಟಿಸುತ್ತಿರುವ ಪೂಜಾಗೆ ಈ ಸಿನಿಮಾ ಮತ್ತೆ ಅದೃಷ್ಟ ತರಲಿದೆಯಾ? ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment