Sonu Gowda: ರೇಣುಕಾ ಸ್ವಾಮಿ ಪ್ರಕರಣ ಬಿಗ್ ಬಾಸ್ ಖ್ಯಾತಿಯ ಸೋನು ಗೌಡಗೂ ನೋಟೀಸ್

Written by Soma Shekar

Published on:

---Join Our Channel---

Sonu Gowda: ಚಿತ್ರದುರ್ಗದ ರೇಣುಕಾಸ್ವಾಮಿ (Renuka Swamy) ಕೊ ಲೆ ಪ್ರಕರಣ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಈ ಪ್ರಕರಣದಲ್ಲಿ ಆರೋಪಿಗಳಾಗಿ ನಟ ದರ್ಶನ್ (Actor Darshan) ಮತ್ತು ಗ್ಯಾಂಗ್ ನ್ಯಾಯಾಂಗ ಬಂಧನದಲ್ಲಿದೆ. ಇದರ ನಡುವೆ ಇತ್ತೀಚಿಗೆ ಕೆಲವು ಮಹಿಳಾ ಸೆಲೆಬ್ರಿಟಿಗಳು ರೇಣುಕಾಸ್ವಾಮಿ ತಮಗೂ ಮೆಸೆಜ್ ಮಾಡಿದ್ದ ಎನ್ನುವ ಮಾತುಗಳನ್ನು ಹೇಳುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಅದರಲ್ಲಿ ಬಿಗ್ ಬಾಸ್ ಖ್ಯಾತಿಯ ಸೋನು ಗೌಡ ಸಹಾ ಒಬ್ಬರು.

ರೇಣುಕಾಸ್ವಾಮಿ ಮೇಲೆ‌ ಮಾಡಿದ ಆರೋಪದ ಬೆನ್ನಲ್ಲೇ ಸೋನು ಗೌಡ (Sonu Gowda) ಅವರಿಗೆ ಪೋಲಿಸರು ನೋಟೀಸ್ ನೀಡಿದ್ದಾರೆ ಎನ್ನಲಾಗಿದೆ. ಈ ವಿಷಯವನ್ನು ಸೋನು ಸ್ವತಃ ತಾವೇ ಹೇಳಿಕೊಂಡಿದ್ದಾರೆ. ರೇಣುಕಾ ಸ್ವಾಮಿ ನನಗೂ ಮೆಸೇಜ್ ಮಾಡಿದ್ದರು ಎಂದು ಹೇಳಿದ್ದೆ, ಆ ವಿಚಾರವಾಗಿ ಮಾತನಾಡಿದ್ದಕ್ಕೆ ನನಗೆ ಪೊಲೀಸರಿಂದ ನೋಟೀಸ್ ಬಂದಿದೆ.

ಹುಡುಗಿ ಅಂದ ಮೇಲೆ ನೂರಾರು ಜನ ಕಾಮೆಂಟ್ ಪಾಸ್ ಮಾಡುತ್ತಾರೆ. ನನಗೂ ಈಗಾಗಲೇ ನೊಟೀಸ್ ಬಂದಿದೆ ಹೋಗಿ ಮಾತನಾಡಬೇಕು. ಯಾವ ಅಕೌಂಟ್ ರೇಣುಕಾಸ್ವಾಮಿ ಅವರದ್ದೇ ಆದರೆ ಅವರಿಂದ ಮೆಸೆಜ್ ಬಂದಿದೆ. ಒಂದು ವೇಳೆ ಅವರಲ್ಲ ಎಂದರೆ ಬೇರೆ ಅಕೌಂಟ್.‌ ನಾನು ಸ್ಪಷ್ಟತೆ ಇಲ್ಲದೇ ಮಾತನಾಡಿರಬಹುದು. ಅವರದ್ದೇ ಅಂತ ಕೇಸ್ ದಾಖಲಾಗಿದೆಯಂತೆ.

ನೋಟೀಸ್ ಬಂದಿರುವ ಕಾರಣ ನಾನು ಹೋಗಬೇಕು, ಏನು, ಎತ್ತ ಮಾತನಾಡಬೇಕು. ಅದು ಅವರ ಅಕೌಂಟೇನಾ ಅಂತೆಲ್ಲಾ ಮಾತನಾಡಬೇಕಿದೆ. ನಾನು ದೂರು ಕೊಟ್ಟಿಲ್ಲ, ಆ ವಿಷಯದ ಬಗ್ಗೆ ಮಾತನಾಡಿದ್ದಕ್ಕೆ ನನಗೆ ನೋಟೀಸ್ ಬಂದಿದೆ. ಇದ್ದಾಗ ಯಾಕೆ ಯಾರೂ ದನಿ ಎತ್ತಿಲ್ಲ? ಸತ್ತ ಮೇಲೆ ಯಾಕೆ ಹೇಳ್ತೀದ್ದೀರಾ? ನಿಮಗೆ ಸರಿಯಾಗಿ ಗೊತ್ತಾ? ಸಾಕ್ಷಿ ಇದ್ಯಾ? ಎನ್ನುವ ಪ್ರಶ್ನೆಗಳಿಗೆ ನೋಟೀಸ್ ನೀಡಿದ್ದಾರೆ.

ನಾನಂತ ಮಾತ್ರವಲ್ಲ ಈ ವಿಷಯದ ಬಗ್ಗೆ ಮಾತನಾಡಿರುವ ಎಲ್ಲರಿಗೂ ನೋಟೀಸ್ ಹೋಗುತ್ತೆ. ಪೋಲಿಸ್ ಅಧಿಕಾರಿ ಯಾರಿದ್ದಾರೆ ಅವರು ಸರಿಯಾಗಿ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ಇದರಿಂದಲೇ ಗೊತ್ತಾಗುತ್ತೆ, ನಾವು ಮಾತನಾಡಿರುವುದಕ್ಕೆ ನಮ್ಮನ್ನೂ ವಿಚಾರಣೆಗೊಳಪಡಿಸುತ್ತಾರೆ ಎಂದು ಹೇಳಿದ್ದಾರೆ.

Leave a Comment