Entertainment

Nora Fatehi: ಆ ಲಾಭಕ್ಕಾಗಿ ಬಾಲಿವುಡ್ ಸೆಲೆಬ್ರಿಟಿಗಳು ಮದ್ವೆ ಆಗೋದು; ನೋರಾ ಫತೇಹಿ ಸ್ಪೋಟಕ ಮಾತು

Nora Fatehi : ಬಾಲಿವುಡ್ ಸುಂದರಿ, ಅತ್ಯದ್ಭುತ ಡ್ಯಾನ್ಸರ್ ಮತ್ತು ನಟಿಯಾಗಿಯೂ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ನೋರಾ ಫತೇಹಿ (Nora Fatehi). ಬಾಲಿವುಡ್ ನಲ್ಲಿ ಈ ಬ್ಯೂಟಿ ಸಿಕ್ಕಾಪಟ್ಟೆ ಬ್ಯುಸಿ, ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ ನಟಿ. ಇದೇ ವೇಳೆ ಕಿರುತೆರೆಯಲ್ಲಿ ಡ್ಯಾನ್ಸ್ ಶೋ ಗಳಿಗೆ ಜಡ್ಜ್ ಆಗಿ, ಕೆಲವು ಶೋ ಗಳಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳೋ ನೋರಾ ಫತೇಹಿ ಡ್ಯಾನ್ಸಿಂಗ್ ಸ್ಟೈಲ್ ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ ಅನ್ನೋದು ಸಹಾ ನಿಜ. ಸಿನಿಮಾಗಳಲ್ಲಿ ವಿಶೇಷ ಹಾಡುಗಳು ಎಂದರೆ ಅಲ್ಲಿ ನೋರಾಗೆ ಮೊದಲ ಆದ್ಯತೆ ಅನ್ನೋ ಹಾಗೆ ಡಿಮ್ಯಾಂಡ್ ಇದೆ.

ಈಗ ಒಂದು ಸಂದರ್ಶನದಲ್ಲಿ ನೋರಾ ಫತೇಹಿ ಅವ್ರು ಬಾಲಿವುಡ್ ನ (Bollywood) ಕರಾಳ ಸತ್ಯವೊಂದನ್ನು ಬಾಯಿ ಬಿಟ್ಟಿದ್ದಾರೆ. ನೋರಾ ಮಾತು ಕೇಳಿ ಅನೇಕರು ಶಾಕ್ ಆಗಿದ್ದಾರೆ. ಬಾಲಿವುಡ್ ನಲ್ಲಿ ಸೆಲೆಬ್ರಿಟಿಗಳು ತಮ್ಮ ಸ್ವಂತ ಲಾಭಕ್ಕೋಸ್ಕರ ಮದ್ವೆ (Wedding) ಆಗ್ತಾರೆ ಅನ್ನೋ ಮಾತನ್ನ ಹೇಳಿದ್ದಾರೆ ನೋರಾ. ಜನಪ್ರಿಯತೆ ಪಡ್ಕೊಂಡಿರೋ ತಮ್ಮ ಗಂಡ ಅಥವಾ ಹೆಂಡತಿಯ ಹೆಸರನ್ನ ಅವರು ಬಳಸಿಕೊಳ್ತಾರೆ. ಅದ್ರಿಂದ ಸಿನಿಮಾ ರಂಗದಲ್ಲಿ ತಮ್ಮ ಸಂಪರ್ಕ ಹೆಚ್ಚಿಸಿಕೊಳ್ತಾರೆ.

ಹಣ ಮಾಡೋದಕ್ಕೆ ಮತ್ತು ಚಾಲ್ತಿಯಲ್ಲಿ ಇರೋದಕ್ಕೆ ಮದುವೆ ಆಗ್ತಾರೆ. ಯಾಕಂದ್ರೆ ಜನಪ್ರಿಯ ವ್ಯಕ್ತಿಯನ್ನು ಮದ್ವೆ ಆದ್ರೆ ಮುಂದಿನ ಮೂರು ವರ್ಷ ತಾನು ಚಾಲ್ತಿಯಲ್ಲಿ ಇರಬಹುದು ಅನ್ನೋದು ಅವರ ಲೆಕ್ಕಾಚಾರ ಆಗಿರುತ್ತೆ. ಆ ವ್ಯಕ್ತಿ ಬಳಿ ಸಿನಿಮಾಗಳಿವೆ, ಸಿನಿಮಾ ಸೂಪರ್ ಹಿಟ್ ಆಗುತ್ತೆ, ಆಗ ನಾವು ಕೂಡಾ ಫೇಮಸ್ ಆಗಬಹುದು ಅನ್ನೋ ಲೆಕ್ಕಾಚಾರ ಕೂಡಾ ಇರುತ್ತೆ ಅಂತ ನೋರಾ ಶಾಕಿಂಗ್ ವಿಚಾರಗಳನ್ನ ಶೇರ್ ಮಾಡಿದ್ದಾರೆ.

ದುಡ್ಡಿಗಾಗಿ ತಮಗೆ ಇಷ್ಟವೇ ಇಲ್ಲದ ವ್ಯಕ್ತಿಯನ್ನು ಮದ್ವೆ ಆಗ್ತಾರೆ. ಹಣಕ್ಕಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ತಾರೆ. ಹೀಗೆ ಇಷ್ಟವಿಲ್ಲದ ವ್ಯಕ್ತಿಯನ್ನ ಮದ್ವೆಯಾಗಿ ಜೀವನ ಮಾಡೋದಕ್ಕಿಂತ ಕೆಟ್ಟದ್ದು ಬೇರೆ ಯಾವುದೂ ಇಲ್ಲ. ನಮ್ಮ ವೈಯಕ್ತಿಕ ಜೀವನ, ಸಂತಸ ಮತ್ತು ಆರೋಗ್ಯವನ್ನು ತ್ಯಾಗ ಮಾಡೋದ್ರಲ್ಲಿ ಯಾವುದೇ ಅರ್ಥವಿಲ್ಲ ಎಂದು ಸಹಾ ನೋರಾ ಹೇಳಿದ್ದಾರೆ.

Soma Shekar

Recent Posts

Viral Video: ಸ್ಟಾರ್ ನಟಿ ಆದ್ರೆ ನಂಗೇನು? ಪಕ್ಕದಲ್ಲೇ ಇದ್ರು ಕೇರ್ ಮಾಡದ ಸ್ವಿಗ್ಗಿ ಡಿಲೆವರಿ ಬಾಯ್; ಹರಿದು ಬರ್ತಿದೆ ಮೆಚ್ಚುಗೆ

Viral Video: ಸಿನಿಮಾ ಸೆಲೆಬ್ರಿಟಿಗಳನ್ನು (Cinema Celebrities) ನೋಡಬೇಕು ಅವರ ಜೊತೆ ಮಾತನಾಡಬೇಕು ಮತ್ತು ಅವರ ಜೊತೆಗೆ ಒಂದು ಫೋಟೋ…

40 mins ago

Lakshmi Nivasa: ಜಾನು ಹೇಳಿದಿದ್ರು ಲಕ್ಷ್ಮೀಗೆ ಜಯಂತ್ ವಿಚಾರ ಗೊತ್ತಾಯ್ತು; ಮನಸ್ಸಲ್ಲೇ ಈಗ ಶುರುವಾಯ್ತು ಭಯ

Lakshmi Nivasa Serial: ಮಗಳು ಜಾಹ್ನವಿಗೆ ಎಷ್ಟು ಸಲ ಫೋನ್ ಮಾಡಿದ್ರು ಕನೆಕ್ಟ್ ಆಗ್ತಿಲ್ಲ ಅನ್ನೋ ಆತಂಕದಲ್ಲಿ ಲಕ್ಷ್ಮೀ ನಿವಾಸ…

3 hours ago

Hema Rave Party: ನಾನು ರೇವ್ ಪಾರ್ಟಿಲಿ ಇರಲಿಲ್ಲ ಅಂತ ವೀಡಿಯೋ ಮಾಡಿ ತಗ್ಲಾಕೊಂಡ್ರಾ ತೆಲುಗು ನಟಿ?

Rave Party : ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಂತಹ ರೇವ್ ಪಾರ್ಟಿ (Rave Party) ವಿಚಾರ ದೇಶದಾದ್ಯಂತ ಮಾದ್ಯಮಗಳಲ್ಲಿ ಪ್ರಮುಖ…

4 hours ago

Amruthadhaare: ಗೌತಮ್ ಹೇಳದ ಸತ್ಯ ಭೂಮಿಕಾಗೆ ಗೊತ್ತಾಗೋ ಸಮಯ ಬಂದಾಯ್ತು; ಗೌತಮ್ ಮೌನ ಮುರಿಲೇಬೇಕು

Amruthadhaare Serial : ಅಮೃತಧಾರೆ ಸೀರಿಯಲ್ ನ (Amruthadhaare Serial) ಇತ್ತೀಚಿನ ಎಪಿಸೋಡ್ ಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡಿದೆ.…

6 hours ago

Kasturi Shankar: ಐಶ್ವರ್ಯ ಅಂದ ಹಾಳಾಗಿದ್ದೇ ಅದರಿಂದ, ಕಾಲ ಯಾರನ್ನೂ ಬಿಡಲ್ಲ, ಕಸ್ತೂರಿ ಶಂಕರ್ ಶಾಕಿಂಗ್ ಹೇಳಿಕೆ

Kasturi Shankar: ಗ್ಲೋಬಲ್ ಸ್ಟಾರ್, ಮಾಜಿ ಮಿಸ್ ವರ್ಲ್ಡ್ ಮತ್ತು ಬಾಲಿವುಡ್ ನ ಒಂದು ಕಾಲದ ನಂಬರ್ ಒನ್ ನಟಿ…

19 hours ago

Hema Rave Party: ಬೆಂಗಳೂರು ರೇವ್ ಪಾರ್ಟಿ, ತೆಲುಗು ನಟಿ ಹೇಮಾ ಸಂಚಲನ ಹೇಳಿಕೆ; ನೆಟ್ಟಿಗರಿಂದ ಟೀಕೆ

Hema Rave Party: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿನ (Bengaluru Electronic City) ಜಿ ಆರ್ ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿದ್ದ…

21 hours ago

This website uses cookies.