Sonu Sood: ಡಿಲೆವರಿ ಬಾಯ್ ಪರ ದನಿ ಎತ್ತಿದ ಸೋನು ಸೂದ್ ಮೇಲೆ ಆಕ್ರೋಶಗೊಂಡ ನೆಟ್ಟಿಗರ ವಾಗ್ದಾಳಿ

Written by Soma Shekar

Published on:

---Join Our Channel---

Sonu Sood: ನಟ ಸೋನು ಸೂದ್ (Sonu Sood) ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ದೊಡ್ಡ ಅಭಿಮಾನಿಗಳ ಬಳಗವೇ ಇದೆ ಅನ್ನೋದನ್ನ ಪ್ರತ್ಯೇಕವಾಗಿ ಹೇಳೋ ಅವಶ್ಯಕತೆ ಇಲ್ಲ. ಸೋನು ಸೂದ್ ಕಷ್ಟದಲ್ಲಿ ಇರೋರಿಗೆ ಮಾಡಿದ ಸಹಾಯಗಳು ಅಪಾರ ಜನ ಮೆಚ್ಚುಗೆಗೆ ಕಾರಣವಾಗಿದೆ. ಸೋನು ಸೂದ್ ಕುರಿತಾಗಿ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ (Social Media) ಆಗಾಗ ಮೆಚ್ಚುಗೆಯ ಮಾತುಗಳನ್ನ ಆಡುತ್ತಲೇ ಇರುತ್ತಾರೆ. ಆದರೆ ಈಗ ನೆಟ್ಟಿಗರು ಒಂದು ವಿಷಯವಾಗಿ ಸೋನು ಸೂದ್ ಮೇಲೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಗುರುಗ್ರಾಮ್ ನಲ್ಲಿ (Gurugram) ಸ್ವಿಗ್ಗಿ ಫುಡ್ ಡಿಲೆವರಿ ಬಾಯ್ ಒಬ್ಬ ಫುಡ್ ಡಿಲೆವರಿ ಮಾಡಲು ಹೋದ ಸಮಯದಲ್ಲಿ ಡಿಲೆವರಿ ಕೊಟ್ಟು ಬರುವಾಗ ಮನೆಯ ಹೊರಗಡೆ ಇದ್ದ ಒಂದು ಜೊತೆ ಶೂವನ್ನು ಎಗರಿಸಿದ್ದ, ಈ ವೀಡಿಯೋವನ್ನು ಎಕ್ಸ್ ನಲ್ಲಿ (former Twitter) ರೋಹಿತ್ ಅರೋರ ಎನ್ನುವವರು ಶೇರ್ ಮಾಡಿದ್ದರು ಹಾಗೂ ಈ ವೀಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಸಹಾ ಆಗಿತ್ತು. ವೈರಲ್ ವೀಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಪ್ರತಿಕ್ರಿಯೆ ನೀಡಿ ಡಿಲೆವರಿ ಬಾಯ್ ಮಾಡಿದ್ದು ತಪ್ಪು ಎಂದಿದ್ದರು.

ಈ ವಿಚಾರವಾಗಿ ನಟ ಸೋನು ಸೂದ್ ಅವರು ಟ್ವೀಟ್ ಒಂದನ್ನು ಮಾಡಿದ್ದು, ಡಿಲೆವರಿ ಬಾಯ್ ಪರವಾಗಿ ನಟಿ ಮಾತನಾಡಿರುವುದನ್ನು ನೋಡಿ ಅನೇಕರು ಅಸಮಾಧಾನಗೊಂಡಿದ್ದಾರೆ. ಸೋನು ಅವರ ಮಾತು ತಪ್ಪು ಎಂದು ಹೇಳುತ್ತಿದ್ದಾರೆ. ಇಷ್ಟಕ್ಕೂ ನಟ ಹೇಳಿದ್ದೇನು? ಅನ್ನೋದಾದ್ರೆ, ನಟ ತಮ್ಮ ಪೋಸ್ಟ್ ನಲ್ಲಿ, ಅವನ ಮೇಲೆ ಕ್ರಮ ತಗೋಬೇಡಿ, ಬದಲಿಗೆ ಒಂದು ಜೊತೆ ಶೂ ಕೊಡಿಸಿ. ಅವನು ಬಡವ, ಅವನಿಗೆ ಶೂ ಅಗತ್ಯ ಇರಬಹುದು ಅಂತ ಹೇಳಿದ್ದಾರೆ.‌

ಸೋನು ಸೂದ್ ಅವರ ಪೋಸ್ಟ್ ನ ನೋಡಿದ ಮೇಲೆ ನೆಟ್ಟಿಗರು, ನಟ ಪರೋಕ್ಷವಾಗಿ ಕಳ್ಳತನ ಮಾಡೋರಿಗೆ ಪ್ರೋತ್ಸಾಹ ಕೊಡ್ತಾ ಇದ್ದಾರೆ ಅಂತ ಟೀಕೆ ಮಾಡಿದ್ದಾರೆ. ಇನ್ನೂ ಕೆಲವರು ಸೋನು ಸೂದ್ ನೀಡಿರೋ ಹೇಳಿಕೆ ವಿಚಿತ್ರವಾಗಿದೆ ಎಂದಿದ್ದಾರೆ. ಆದ್ರೆ ಇದೇ ವೇಳೆ ಕೆಲವರು ನಟನ ಪರವಾಗಿ ಮಾತನಾಡ್ತಾ ದೊಡ್ಡ ದೊಡ್ಡ ಲೂಟಿಕೋರರ ಬಗ್ಗೆ ಜನ ದನಿ ಎತ್ತಲ್ಲ ಇಂತದ್ದಕ್ಕೆ ಎಲ್ಲರೂ ಮುಂದೆ ಇರ್ತಾರೆ ಎಂದಿದ್ದಾರೆ.

Leave a Comment