Srirastu Shubhamastu: ಶಾರ್ವರಿ ಪಾತ್ರಕ್ಕೆ ಗುಡ್ ಬೈ ಹೇಳಿದ ನಟಿ ನೇತ್ರ ಜಾಧವ್; ಹೊಸ ನಟಿಯ ಎಂಟ್ರಿ

Written by Soma Shekar

Published on:

---Join Our Channel---

Srirastu Shubhamastu: ಶ್ರೀರಸ್ತು ಶುಭಮಸ್ತು (Srirastu Shubhamastu) ಸೀರಿಯಲ್ ನಲ್ಲಿ ಮಾಧವನ‌ ಮನೆಯಲ್ಲಿದ್ದುಕೊಂಡೇ ಕುತಂತ್ರಗಳನ್ನು ಹೆಣೆಯುವ ಪಾತ್ರ ಶಾರ್ವರಿಯ (Sharvari) ಪಾತ್ರವಾಗಿದೆ. ಮಾಧವನ ಕುಟುಂಬವನ್ನು ಸರ್ವನಾಶ ಮಾಡಬೇಕೆಂದು ಪಣ ತೊಟ್ಟ ಮಾಧವನ ಸಹೋದರ ಮಹೇಶನ ಪತ್ನಿ ಮಾಡೋ ಪ್ಲಾನ್ ಗಳು ಒಂದೆರಡಲ್ಲ, ದಿನಕ್ಕೊಂದು ಸಂಚು ಹೂಡುವ ಶಾರ್ವರಿಯ ಪಾತ್ರಕ್ಕೆ ಒಂದು ವಿಶೇಷವಾದ ಪ್ರಾಮುಖ್ಯತೆ ಇದೆ. ನೆಗೆಟಿವ್ ಶೇಡ್ ಇರುವ ಈ ಪಾತ್ರ ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಸಹಾ ಪಡೆದುಕೊಂಡಿದೆ.

ಶ್ರೀರಸ್ತು ಶುಭಮಸ್ತು ಆರಂಭವಾದಾಗಿನಿಂದಲೂ ಸಹಾ ಶಾರ್ವರಿ ಪಾತ್ರವನ್ನು ನಿರ್ವಹಿಸುತ್ತಾ ಬಂದವರು ನಟಿ ನೇತ್ರಾ ಜಾಧವ್ (Nethra Jadhav) ಅವರು. ಮನೆಯವರೆಲ್ಲರ ಮನಸ್ಸನ್ನು ಗೆದ್ದು, ಮುಖದಲ್ಲೊಂದು ಮಂದಹಾಸದೊಂದಿಗೆ ಯಾವುದೇ ನೆಗೆಟಿವ್ ಭಾವ ವ್ಯಕ್ತವಾಗದಂತೆ ನಾಜೂಕಾಗಿ ಕುತಂತ್ರಗಳನ್ನು ಮಾಡುವ ಪಾತ್ರ ವಿಶೇಷ ಗಮನ ಸೆಳೆದಿತ್ತು ಮತ್ತು ನೇತ್ರ ಅವರ ಶಾರ್ವರಿ ಪಾತ್ರ ಬೇರೆಲ್ಲಾ ಖಳ ಪಾತ್ರ ಗಳಿಗಿಂತ ಭಿನ್ನವಾಗಿತ್ತು.

ಕಳೆದ ವರ್ಷ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಖಳನಾಯಕಿಯ ಪಾತ್ರಕ್ಕೆ ನೇತ್ರ ಜಾಧವ್ ಅವರು ಪ್ರಶಸ್ತಿಯನ್ನು ಸಹಾ ಪಡೆದಿದ್ದರು. ಆದರೆ ಈಗ ಸೀರಿಯಲ್ ನಲ್ಲಿ ಮಹತ್ವದ ಬದಲಾವಣೆ ಆಗಿದೆ. ಶಾರ್ವರಿ ಪಾತ್ರದಿಂದ ನೇತ್ರಾ ಅವರು ಹೊರ ಬಂದಿದ್ದಾರೆ. ನೇತ್ರಾ ಅವರು ಸೀರಿಯಲ್ ನಿಂದ ಹೊರಗೆ ಬಂದಿರುವ ಕಾರಣ ಇನ್ನೂ ಗೊತ್ತಿಲ್ಲವಾದರೂ ಈಗಾಗಲೇ ಶಾರ್ವರಿ ಪಾತ್ರಕ್ಕೆ ಬೇರೊಬ್ಬ ನಟಿಯ ಎಂಟ್ರಿಯಾಗಿದ್ದು, ನಿನ್ನೆಯ ಎಪಿಸೋಡ್ ನಲ್ಲಿ ಅದು ಪ್ರೇಕ್ಷಕರ ಮುಂದೆ ಬಂದಾಗಿದೆ.

ನೇತ್ರಾ ಜಾಧವ್ ಅವರು ನಿರ್ವಹಿಸುತ್ತಿದ್ದ ಶಾರ್ವರಿ ಪಾತ್ರಕ್ಕೆ ಈಗ ಸ್ವಪ್ನಾ ದೀಕ್ಷಿತ್ (Swapna Deekshit) ಅವರು ಎಂಟ್ರಿ ನೀಡಿದ್ದಾರೆ. ಸ್ವಪ್ನ ಅವರು ಈಗಾಗಲೇ ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಸಹಾ ಜನಪ್ರಿಯತೆ ಪಡೆದಿರುವ ನಟಿಯಾಗಿದ್ದಾರೆ. ಈ ಹಿಂದೆ ಅವರು ಜೀ ವಾಹಿನಿಯಲ್ಲಿ ಪ್ರಸಾರ ಆಗ್ತಿದ್ದ ಕಮಲಿ ಸೀರಿಯಲ್ ನಲ್ಲಿ ನಾಯಕ ರಿಷಿ ಅವರ ತಾಯಿಯ ಪಾತ್ರದಲ್ಲಿ ನಟಿಸಿದ್ದರು. ಈಗ ಶಾರ್ವರಿ ಪಾತ್ರಕ್ಕೆ ಎಂಟ್ರಿ ನೀಡಿರುವ ಅವರನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment