Shanti Williams: ಗರ್ಭಿಣಿ ಆಗಿದ್ರೂ ಹಣ ಕೊಟ್ಟಿದ್ದೆ: ನಟ ಮೋಹನ್ ಲಾಲ್ ಇನ್ನೊಂದು ಮುಖ ತೋರಿಸಿದ ಹಿರಿಯ ನಟಿ

Written by Soma Shekar

Published on:

---Join Our Channel---

Shanti Williams: ಮಲೆಯಾಳಂ ಸಿನಿಮಾ ರಂಗದ ಹಿರಿಯ ನಟಿ, ಪ್ರಸ್ತುತ ಸಿನಿಮಾ ರಂಗದಿಂದ ದೂರವೇ ಉಳಿದಿರುವ ನಟಿ ಶಾಂತಿ ವಿಲಿಯಮ್ಸ್ (Shanti William) ಅವರು ಮಲೆಯಾಳಂ ಸಿನಿಮಾ ರಂಗದ ಸ್ಟಾರ್ ನಟ ಮೋಹನ್ ಲಾಲ್ (Mohanlal) ಅವರ ಬಗ್ಗೆ ಆಡಿದ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದು ಮಾತ್ರವೇ ಅಲ್ಲದೇ ಮೋಹನ್ ಲಾಲ್ ಅವರು ಇಂತಹ ವ್ಯಕ್ತಿಯಾ ಎಂದು ಅಚ್ಚರಿ ಪಡುವಂತಾಗಿದೆ.

ಶಾಂತಿ ವಿಲಿಯಮ್ಸ್ ಅವರ ಪತಿ ವಿಲಿಯಮ್ಸ್ ಅವರು ಖ್ಯಾತ ಛಾಯಾಗ್ರಾಹಕನಾಗಿದ್ದವರು (Photographer). ಅವರಿ ಬಹಳ ಅಡ್ವೆಂಚರ್ಸ್ ಮತ್ತು ಕ್ಯಾಮರಾ ಹಿಡಿದು ಎಷ್ಟು ಎತ್ತರಕ್ಕೆ ಬೇಕಾದ್ರು ಹೋಗ್ತಾ ಇದ್ರು, ಈಗಿನವರೂ ಅದನ್ನು ಊಹೆ ಮಾಡೋಕು ಸಾಧ್ಯ ಇಲ್ಲ ಎಂದಿದ್ದಾರೆ ಶಾಂತಿ ಅವರು. ಅಲ್ಲದೇ ವಿಲಿಯಮ್ಸ್ ಮತ್ತು ಮೋಹನ್ ಲಾಲ್ ನಡುವೆ ಒಂದು ಉತ್ತಮ ಬಾಂಧವ್ಯವಿತ್ತು ಎಂದಿದ್ದಾರೆ ಹಿರಿಯ ನಟಿ.

ಹೆಲ್ಲೋ ಮದ್ರಾಸ್ ಗರ್ಲ್ (Hello Madras Girl) ಸಿನಿಮಾದಲ್ಲಿ ನಟಿಸುವಾಗ ಮೋಹನ್ ಲಾಲ್ ನಮ್ಮ ಮನೆಗೆ ಬರ್ತಾ ಇದ್ರು. ತಮ್ಮ ತಾಯಿಯನ್ನ ಮಾತನಾಡಿಸಿ , ಶ್ರಿಂಪ್ ಮೀ‌ನಿನ ಕರ್ರಿ ಮಾಡಿಸಿಕೊಂಡು ತಿಂತಾ ಇದ್ದರು. ಅಲ್ಲದೇ ನಮ್ಮ ಮನೆ ಸಮೀಪ ಶೂಟಿಂಗ್ ಇದ್ದ ವೇಳೆಯಲ್ಲಿ ನೇರವಾಗಿ ನಮ್ಮ ಮನೆಗೆ ಬರ್ತಾ ಇದ್ರು. ಅಲ್ಲದೇ ಮಧ್ಯಾಹ್ನ ಲಂಚ್ ಗೆ ಲಂಚ್ ಬಾಕ್ಸ್ ಸಹಾ ನಮ್ಮ ಮನೆಗೆ ಬರ್ತಾ ಇತ್ತು. ಮೋಹನ್ ಲಾಲ್ ಜೊತೆ ನನ್ನ ಪತಿ ನಾಲ್ಕು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

ಮೋಹನ್ ಲಾಲ್ ಗೆ ನಾವು ತುಂಬಾ ಸಹಾಯ ಮಾಡಿದ್ದೀವಿ. ನಾನು ಗರ್ಭಿಣಿ ಆಗಿದ್ದಾಗ್ಲೂ ಮೋಹನ್ ಲಾಲ್ ಹಣ ಹೊಂದಿಸಲು ಅರವತ್ತು ಸಾವಿರ ಅವರಿಗೆ ಕೊಡೋದಕ್ಕೆ ನನ್ನ ಚಿನ್ನದ ಒಡವೆಗಳನ್ನು ಅಡ ಇಟ್ಟಿದ್ದೆ. ಆದರೆ ನನ್ನ ಪತಿ ತೀರಿಕೊಂಡಾಗಲೂ ಮೋಹನ್ ಲಾಲ್ ಈ ಕಡೆಗೆ ಬರಲಿಲ್ಲ. ಅವರಿಗೆ ನಮ್ಮ ಮನೆಗೆ ಬರೋದಕ್ಕೆ ಸಮಯವೇ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಒಮ್ಮೆ ವಿಮಾನ ನಿಲ್ಧಾಣದಲ್ಲಿ ಸಹಾ ಇದೇ ಮೋಹನ್ ಲಾಲ್ ಅವರು ನನ್ನನ್ನ ನೋಡಿದರೂ ನೋಡದ ಹಾಗೆ ಹೋದ್ರು ಎಂದಿದ್ದಾರೆ. ಈ ಮೂಲಕ ಶಾಂತಿ ವಿಲಿಯಮ್ಸ್ ಅವರು ನಟ ಮೋಹನ್ ಲಾಲ್ ಗೆ ಕೃತಜ್ಞತೆ ಅನ್ನೋದೇ ಇಲ್ಲ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದು , ಅವರ ಈ ಮಾತುಗಳು ಈಗ ವೈರಲ್ ಆಗಿ ಮಿಶ್ರ ಪ್ರತಿಕ್ರಿಯೆ ಹರಿದು ಬರ್ತಿದೆ.

Leave a Comment