Health: ಶ್ವಾಸಕೋಶ ಕ್ಯಾನ್ಸರ್ ಫಸ್ಟ್ ಸ್ಟೇಜ್ ನ ಲಕ್ಷಣಗಳಿವು, ಆರೋಗ್ಯ ಮೊದಲು, ಈ ವಿಷಯ ತಿಳಿದು ಜಾಗೂರಕರಾಗಿರಿ

Written by Soma Shekar

Published on:

---Join Our Channel---

Health Tips: ಆರೋಗ್ಯದ ಕುರಿತಾಗಿ ಇತ್ತೀಚಿನ ವರ್ಷಗಳಲ್ಲಿ ಜನರು ಹೆಚ್ಚಿನ ಗಮನವನ್ನು ನೀಡುತ್ತಿದ್ದಾರೆ. ವಿಶೇಷ‌ ಕಾಳಜಿಯನ್ನು ವಹಿಸುತ್ತಿರುವ ಜನರು ಆರೋಗ್ಯದ (Health Tips) ವಿಚಾರದಲ್ಲಿ ಸಾಕಷ್ಟು ಮುಂಜಾಗ್ರತೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈಗ ನಾವು ಶ್ವಾಸಕೋಶದ ಕ್ಯಾನ್ಸರ್ ಗೆ (Lungs Cancer) ಮುನ್ನ ಕಾಣಿಸಿಕೊಳ್ಳುವ ಪ್ರಮುಖ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ.

ನಿರಂತರವಾದ ಕೆಮ್ಮು (Cough) : ಇದು ಶ್ವಾಸಕೋಶ ಕ್ಯಾನ್ಸರ್ ನ ಮೊದಲ ಹಾಗೂ ಸಾಮಾನ್ಯ ಲಕ್ಷಣವಾಗಿರುತ್ತದೆ. ಒಂದು ವೇಳೆ ಮೂರು ವಾರಕ್ಕಿಂತಲೂ ಅಧಿಕ ಸಮಯದವರೆಗೆ ಕೆಮ್ಮು ವಾಸಿಯಾಗದೇ ಇದ್ದಲ್ಲಿ ಕೂಡಲೇ ನುರಿತ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಎದೆಯಲ್ಲಿ ನೋವು (Chest Pain) : ವಿಶೇಷವಾಗಿ ಕೆಮ್ಮುವ ಸಮಯದಲ್ಲಿ ಹಾಗೂ ಉಸಿರಾಡುವ ಸಮಯದಲ್ಲಿ ತೊಂದರೆಯಾಗುವುದರ ಜೊತೆಗೆ ಎದೆಯಲ್ಲಿ ನೋವು ಕಾಣಿಸಿಕೊಳ್ಳುವುದು ಶ್ವಾಸಕೋಶ ಕ್ಯಾನ್ಸರ್ ನ ಲಕ್ಷಣವಾಗಿರುತ್ತದೆ.

ಹಸಿವಾಗದೇ ಇರುವುದು : ಸಾಮಾನ್ಯವಾಗಿ ದೈಹಿಕ ಚಟುವಟಿಕೆ ಹಾಗೂ ಶಕ್ತಿಗೆ ಆಹಾರ ಸೇವನೆ ಅತಿ ಅವಶ್ಯಕ. ಆದರೆ ಯಾವುದೇ ಕಾರಣವಿಲ್ಲದೇ ಹಸಿವು ಆಗದೇ ಇರುವುದು ಸಹಾ ಶ್ವಾಸಕೋಶ ಕ್ಯಾನ್ಸರ್ ನ ಲಕ್ಷಣವಾಗಿರುತ್ತದೆ.

ಧ್ವನಿಯಲ್ಲಿ ಬದಲಾವಣೆ : ಮಾತನಾಡುವ ಧ್ವನಿಯಲ್ಲಿ ಇದ್ದಕ್ಕಿದ್ದ ಹಾಗೆ ಆಗುವ ಬದಲಾವಣೆ, ಗಂಟಲು ರಾಚಿಕೊಳ್ಳುವುದು ಸಹಾ ಶ್ವಾಸಕೋಶ ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಆದ್ದರಿಂದ ಎಚ್ಚರಿಕೆ ವಹಿಸುವುದು ಸೂಕ್ತ.

ಆಯಾಸ : ಯಾವುದೇ ದೈಹಿಕ ಶ್ರಮವನ್ನು ಹೂಡದೇ ಹೋದರೂ ಅನಾವಶ್ಯಕವಾಗಿ ಆಯಾಸಗೊಳ್ಳುವುದು ಸಹಾ ಶ್ವಾಸಕೋಶ ಕ್ಯಾನ್ಸರ್ ನ ಲಕ್ಷಣವಾಗಿರಬಹುದು.

ಊತ ಕಾಣಿಸಿಕೊಳ್ಳುವುದು : ಮುಖ, ಗಂಟಲು, ಕೈ ಅಥವಾ ಎದೆಯ ಭಾಗದಲ್ಲಿ ಊತ ಕಾಣಿಸಿಕೊಳ್ಳುವುದು ಸಹಾ ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣವಾಗಿರುವ ಸಾಧ್ಯತೆಗಳಿರುತ್ತವೆ.

ಕೆಮ್ಮುವಾಗ ರಕ್ತ ಬರುವುದು : ಕೆಲವೊಮ್ಮೆ ಕೆಮ್ಮಿದಾಗ ಅದರಿಂದ ರಕ್ತ ಬರುವುದು ಸಹಾ ಶ್ವಾಸಕೋಶ ಕ್ಯಾನ್ಸರ್ ನ ಮುನ್ನೆಚ್ಚರಿಕೆ ಆಗಬಹುದು. ಆದ್ದರಿಂದ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.

Lakshmi Nivasa: ಶೂಟಿಂಗ್ ಮಧ್ಯೆ ಬಿಡುವಿನ ಸಮಯದಲ್ಲಿ ಲಕ್ಷ್ಮೀ ನಿವಾಸ ಕಲಾವಿದರು ಹೇಗಿರ್ತಾರೆ? ಇಲ್ಲಿದೆ ಫೋಟೋಗಳು

Leave a Comment