Lakshmi Nivasa: ಜಯಂತ್ ಅಸಲಿ ರೂಪಕ್ಕೆ ಬೆಚ್ಚಿದ ಜಾಹ್ನವಿ, ಸೈಕೋ ಆಟಕ್ಕೆ ಬ್ರೇಕ್ ಹಾಕಿ ಅಂದ ಪ್ರೇಕ್ಷಕರು

Written by Soma Shekar

Published on:

---Join Our Channel---

Lakshmi Nivasa: ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ (Lakshmi Nivasa) ಜಯಂತ್ ಏನು, ಅವನ ಅಸಲಿ ಬಣ್ಣ ಏನು ಅನ್ನೋದು ಜಾಹ್ನವಿಯ ಮುಂದೆ ಬರ್ತಿದೆ. ಜಾಹ್ನವಿಗೆ ಜಯಂತ್ ನ ಪ್ರೀತಿಯ ಜೊತೆಗೆ ಅವರ ವಿಚಿತ್ರ ಮನಸ್ತತ್ವ ಸಹಾ ಅರ್ಥ ಆಗೋಕೆ ಶುರುವಾಗಿದೆ. ಕಾಲೇಜಿನ ದಿನಗಳಲ್ಲಿ ಜಾಹ್ನವಿ ತನ್ನ ಸ್ನೇಹಿತರಿಗೆ ಅಡ್ಡ ಹೆಸರುಗಳನ್ನು ಇಟ್ಟು ಕರೀತಿದ್ಲು ಅನ್ನೋ ವಿಷಯ ಗೊತ್ತಾದ ನಂತ್ರ ಜಯಂತ್ ವಿಚಿತ್ರವಾಗಿ ಆಡೋಕದಕ್ಕೆ ಶುರು ಮಾಡಿದ್ದಾನೆ. ಬೇರೆ ಅವರ ಮುಂದೆ ಜಾಹ್ನವಿ ಹಾಡಿದ್ದಕ್ಕೆ ಇಡೀ ರಾತ್ರಿ ಅವಳ ಕೈಯಲ್ಲಿ ಹಾಡಿಸಿ ಹಿಂಸೆಯನ್ನು ಕೊಟ್ಟಿದ್ದ ಜಯಂತ್ ಈಗ ಮತ್ತೊಮ್ಮೆ ತನ್ನ ಸೈಕೋ ರೂಪವನ್ನು ತೋರಿಸಿದ್ದಾನೆ.

ಜಾಹ್ನವಿಯ ಜೊತೆಗೆ ಹೊರಗಡೆ ಬಂದಿರೋ ಸಮಯದಲ್ಲಿ ಜಯಂತ್ ಗೆ (Jayanth) ಐಸ್ ಕ್ರೀಂ ಶಾಪ್ ನಲ್ಲಿ ಸಿಕ್ಕ ಜಾಹ್ನವಿಯ ಸ್ನೇಹಿತ ಜಯಂತ್ ಹತ್ರ ಜಾಹ್ನವಿ ಕಾಲೇಜಲ್ಲಿ ಒಬ್ಬನಿಗೆ ಗೂಬೆ ಅಂತ ಕರೀತಿದ್ಲು, ಎಲ್ಲರೂ ಅವನನ್ನ ಹಾಗೇ ಕರೆಯೋಕೆ ಶುರು ಮಾಡಿದ್ರು, ಅವನ ಜೊತೆ ಜಾಹ್ನವಿ ಬಹಳ ಕ್ಲೋಸ್ ಅಂತೆಲ್ಲಾ ಒಂದಷ್ಟು ವಿಚಾರಗಳನ್ನ ಹೇಳಿದ್ದಾನೆ. ಇದೆಲ್ಲವನ್ನು ಕೇಳಿ ಜಯಂತ್ ಕೆರಳಿದ್ದಾನೆ. ಜಾಹ್ನವಿ ಮೇಲೆ ಅನುಮಾನ ಪಡೋಕೆ ಶುರು ಮಾಡಿದ್ದಾನೆ.

ಮನೆಗೆ ಬಂದ ಮೇಲೆ, ಬೇರೆ ಅವ್ರಿಗೆ ಅಡ್ಡ ಹೆಸರು ಇಟ್ಟಿದ್ದೀರಿ, ನನಗೆ ಯಾಕೆ ಹೆಸರಿಟ್ಟಿಲ್ಲ ಇಡಿ ಅಂತ ಪೀಡಿಸಿದ್ದಾನೆ. ಜಾಹ್ನವಿಗೆ (Jahnavi) ತಾನು ಬೇರೆ ಅವ್ರ ಜೊತೆ ಮಾತಾಡೋದು, ಬೇರೆ ಅವ್ರು ತನ್ನ ಜೊತೆ ಮಾತಾಡೋದು ಎರಡೂ ಕೂಡಾ ಜಯಂತ್ ಗೆ ಇಷ್ಟ ಆಗ್ತಿಲ್ಲ ಅನ್ನೋದನ್ನ ಈಗ ಅರ್ಥ ಮಾಡ್ಕೊಂಡಿದ್ದಾಳೆ. ಆದ್ರೆ ಜಯಂತ್ ಮಾತ್ರ ಜಾಹ್ನವಿಯ ಹತ್ರ ಕ್ಲೋಸ್ ಫ್ರೆಂಡ್ ಮದ್ಯೆ ಏನಾದ್ರೂ ಇರಲೇಬೇಕು, ಏನಿತ್ತು ಹೇಳಿ ಅಂತ ಜಾಹ್ನವಿಯನ್ನ ಕಾಡಿದ್ದಾನೆ.

ಅಲ್ಲದೇ ಜಾಹ್ನವಿಗೆ, ನೀವು ತಪ್ಪು ಮಾಡಿದ್ರಿ, ಯಾಕೆ ಅವರಿಗೆಲ್ಲಾ ಅಡ್ಡ ಹೆಸರನ್ನ ಇಟ್ರಿ, ಅಂತ ಅಸಮಾಧಾನ ಹೊರ ಹಾಕಿದ್ದಾನೆ. ಅಲ್ಲದೇ ಜಾಹ್ನವಿ ಎರಡು ಕೈ ಮೇಲೆ ಎತ್ತಿ ಮಂಡಿಕಾಲಲ್ಲಿ ನಿಂತುಕೊಳ್ಳುವ ಶಿಕ್ಷೆಯನ್ನ ನೀಡಿದ್ದಾನೆ. ಜಾಹ್ನವಿ ಬೇಡಿಕೊಂಡ್ರೂ ದಯೆ ತೋರಿಸಿಲ್ಲ ಜಯಂತ್. ಅವನು ಕೊಟ್ಟ ಶಿಕ್ಷೆಯಿಂದ ಜಾಹ್ನವಿ ತಲೆ ಸುತ್ತಿ ಬಿದ್ದಿದ್ದಾಳೆ. ಗಂಡನ ಇಂತಹ ಒಂದು ರೂಪ ಅವಳಿಗೆ ಭಯ ಹುಟ್ಟಿಸಿದೆ. ಜಯಂತ್ ಮುಂದೆ ಇನ್ನೂ ಏನೇನು ಮಾಡ್ತಾನೋ ಅಂತ ಪ್ರೇಕ್ಷಕರು ಶಾಕ್ ಆಗಿದ್ದಾರೆ.

Leave a Comment