Lakshmi Nivasa: ಜಾನುಗಾಗಿ ಜಯಂತ್ ಮನೆಗೆ ಬಂದ ಅಪ್ಪ ಅಮ್ಮ; ಮತ್ತೆ ಯಾವ ಹೊಸ ಪ್ಲಾನ್ ಮಾಡ್ತಾನೇ ಜಯಂತ್

Written by Soma Shekar

Published on:

---Join Our Channel---

Lakshmi Nivasa Serial: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಲಕ್ಷ್ಮೀ ನಿವಾಸದಲ್ಲಿ (Lakshmi Nivasa Serial) ಇತ್ತೀಚಿನ ದಿನಗಳಲ್ಲಿ ಜಯಂತ್ ಮತ್ತು ಜಾಹ್ನವಿ ಕಥೆಯು ಹೆಚ್ಚು ಪ್ರಾಧಾನ್ಯತೆಯನ್ನು ಪಡೆದುಕೊಂಡಿದೆ. ಸೀರಿಯಲ್ ನಲ್ಲಿ ಜಯಂತ್ ಪಾತ್ರದ ಅಸಲಿಯತ್ತು ಹೊರಬಂದ ಮೇಲೆ ಆ ಪಾತ್ರದ ಕುರಿತಾಗಿ ಪ್ರತಿದಿನವೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಹೆಂಡತಿ ಮೇಲಿನ ಅಪಾರವಾದ ಪ್ರೀತಿಯಿಂದ ಸೈಕೋ ತರ ವರ್ತಿಸುವ ಜಯಂತ್ ಪಾತ್ರ ಪ್ರೇಕ್ಷಕರಿಂದ ಪರ ಮತ್ತು ವಿರುದ್ಧ ಮಾತುಗಳನ್ನು ಕೇಳುತ್ತಿದೆ.

ತನ್ನ ಹೆಂಡತಿ ಜಾಹ್ನವಿ (Jahnavi) ತನ್ನನ್ನು ಮಾತ್ರ ಪ್ರೀತಿಸಬೇಕು, ಅವಳ ಜಗತ್ತು ತಾನು ಮಾತ್ರ ಆಗಿರಬೇಕು ಅಂತ ಬಯಸೋ ಜಯಂತ್ (Jayanth) ಅವಳನ್ನು ಅವಳ ಕುಟುಂಬದಿಂದಲೂ ದೂರ ಮಾಡೋ ಪ್ರಯತ್ನಕ್ಕೆ ಮುಂದಾಗಿದ್ದಾನೆ. ತಾನು ಆಫೀಸಿಗೆ ಬಂದ ಮೇಲೆ ಹೆಂಡತಿ ಮನೆಯಲ್ಲಿ ಏನೆಲ್ಲಾ ಮಾಡ್ತಾಳೆ ಅಂತ ಅವಳ ಪ್ರತಿ ಚಲನವಲನವನ್ನು ವೀಡಿಯೋದಲ್ಲಿ ಗಮನಿಸ್ತಿದ್ದಾನೆ.

ಪ್ರತಿದಿನ ಜಾಹ್ನವಿ ತನ್ನ ಮನೆಗೆ ಫೋನ್ ಮಾಡಿ ಹೆಚ್ಚು ಹೊತ್ತು ಮಾತಾಡ್ತಾ ಸಮಯ ಕಳೆಯೋದನ್ನ ನೋಡಿದ ಜಯಂತ್ ಸಿಟ್ಟಾಗಿದ್ದಾನೆ. ಅದೇ ಕಾರಣದಿಂದ ಮನೆಯಲ್ಲಿ ಮೊಬೈಲ್ ನೆಟ್ವರ್ಕ್ ಕೆಲಸ ಮಾಡದಂತೆ ವ್ಯವಸ್ಥೆ ಮಾಡಿದ್ದಾನೆ. ಇದರಿಂದಾಗಿ ಜಾನು ತನ್ನ ಮನೆಯವರ ಜೊತೆ ಮಾತನಾಡದೆ ದುಃಖ ಪಟ್ಟು ಕಣ್ಣೀರಿಟ್ಟಿದ್ದಾಳೆ. ಇನ್ನೊಂದು ಕಡೆ ಜಾಹ್ನವಿ ಅವರ ಮನೆಯವರು ಮಗಳ ಫೋನ್ ಕನೆಕ್ಟ್ ಆಗ್ತಿಲ್ಲ ಅಂತ ಚಿಂತೆಗೀಡಾಗಿದ್ದಾರೆ.

ಮಗಳು ಹೇಗಿದ್ದಾಳೆ, ಅವಳಿಗೆ ಏನಾಯ್ತು ಅನ್ನೋ ಆತಂಕದಿಂದ, ಜಾಹ್ನವಿ ಅವರ ಮನೆಯವರು ನೇರವಾಗಿ ಜಯಂತವರ ಮನೆಗೆ ಬಂದಿದ್ದಾರೆ. ಮಗಳನ್ನು ಹುಡುಕಿಕೊಂಡು ಜಾಹ್ನವಿ ಕುಟುಂಬದವರೂ ಬಂದಿದ್ದು ಜಯಂತ್ ಗೆ ಇಷ್ಟವಾಗಿಲ್ಲ. ಮನಸ್ಸಿನಲ್ಲಿ ಕುದಿಯುತ್ತಿರುವ ಅವನು ಮೇಲ್ನೋಟಕ್ಕೆ ಮುಗುಳ್ನಗೆ ತೋರಿಸ್ತಾ ಮೌನವಾಗಿ ನಿಂತು ಎಲ್ಲವನ್ನು ಗಮನಿಸುತ್ತಿದ್ದಾನೆ.

ಆಗ ಜಯಂತ್ ಅವ್ರ ಮಾವ ನಾವೆಲ್ಲ ಬಂದಿದ್ದು ನಿಮಗೆ ತೊಂದರೆ ಆಗ್ಲಿಲ್ಲಾ ತಾನೇ ಅಂತ ಕೇಳಿದಾಗ, ನಿಮ್ಮನ್ನೆಲ್ಲಾ ನೋಡಿ ಮಾತುಗಳು ಹೊರಳದೇ ತಟಸ್ಥವಾಗಿದ್ದೆ ಅಂತ ನಾಟಕೀಯ ಮಾತುಗಳನ್ನ ಜಯಂತ್ ಆಡಿದ್ದಾನೆ. ಹೀಗೆ ಫೋನ್ ಕನೆಕ್ಷನ್ ತೆಗೆದುಹಾಕಿದ್ದಕ್ಕೆ ಅವರ ಮನೆಯವರು ಹುಡುಕಿಕೊಂಡು ಬರ್ತಾರೆ ಅನ್ನೋ ಒಂದು ವಿಚಾರ ಈಗ ಜಯಂತ್ ಗೆ ಸ್ಪಷ್ಟವಾಗಿದೆ. ಹಾಗಾದ್ರೆ ಜಾಹ್ನವಿಯನ್ನ ಅವರ ಕುಟುಂಬದಿಂದ ದೂರ ಇಡೋದಕ್ಕೆ ಮತ್ತೆ ಯಾವ ಹೊಸ ಪ್ಲಾನ್ ಮಾಡ್ತಾನೆ ಅನ್ನೋದನ್ನ ಅದು ನೋಡಬೇಕಾಗಿದೆ.

Leave a Comment