Kannada Serial TRP: ಹೊಸ ಸೀರಿಯಲ್ ಗಳನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ; ನಿಮ್ಮ ನೆಚ್ಚಿನ ಸೀರಿಯಲ್ ಗೆ ಯಾವ ಸ್ಥಾನ ?

Written by Soma Shekar

Published on:

---Join Our Channel---

Kannada Serial TRP : ಟಿ ಆರ್ ಪಿ ಎನ್ನುವ ವಿಚಾರದಲ್ಲಿ ಪ್ರತಿ ವಾರ ಧಾರಾವಾಹಿಗಳ ಸ್ಥಾನಗಳಲ್ಲಿ (Kannada Serial TRP) ಬದಲಾವಣೆಗಳು ಆಗುತ್ತಲೇ ಇರುತ್ತೆ. ನಾವು ಮುಂದಿನ ವಾರದಲ್ಲಿ ಯಾವ ಸೀರಿಯಲ್ ಯಾವ ಸ್ಥಾನದಲ್ಲಿ ಇರುತ್ತೆ ಅನ್ನೋದನ್ನ ಊಹೆ ಮಾಡೋದು ಕಷ್ಟ. ಆದರೆ ವಾರಾಂತ್ಯದಲ್ಲಿ ಈ ವಾರ ಯಾವ ಸೀರಿಯಲ್ ಜನರ ಮೆಚ್ಚುಗೆ ಪಡೆದು ಮುಂದಿನ ಸ್ಥಾನಕ್ಕೆ ತಲುಪಿದೆ, ಯಾವ ಸೀರಿಯಲ್ ಗೆ ಜನರ ಮನ್ನಣೆ ಕಡಿಮೆಯಾಗಿ ಹಿಂದಕ್ಕೆ ಸರಿದಿದೆ ಎನ್ನುವುದು ತಿಳಿಯುತ್ತದೆ. ಈ ವಾರ ಯಾವ ಸೀರಿಯಲ್ ಗೆ ಯಾವ ಸ್ಥಾನ ನೋಡೋಣ ಬನ್ನಿ.‌

ಎಂದಿನಂತೆ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ಈ ವಾರ ಸಹಾ ನಂಬರ್ ಒನ್ ಸ್ಥಾನದಲ್ಲಿ ಮುಂದುವರೆದಿದೆ. ಹೊಸ ಸೀರಿಯಲ್ ಗಳ ಪೈಪೋಟಿಯ ನಡುವೆಯೂ ಕೂಡಾ ಪುಟ್ಟಕ್ಕನ ಮಕ್ಕಳು ಸೀರಿಯಲ್ ಉತ್ತಮ ಟಿ ಆರ್ ಪಿ ಯನ್ನು ಪಡೆದುಕೊಂಡು ಹೊಸ ಸೀರಿಯಲ್ ಗಳನ್ನು ಹಿಂದಿಕ್ಕಿ ತಾನೇ ನಂಬರ್ ಒನ್ ಸ್ಥಾನದಲ್ಲಿ ಮಿಂಚಿದೆ.

ಎರಡನೇ ಸ್ಥಾನದ ವಿಚಾರಕ್ಕೆ ಬಂದರೆ ಇಲ್ಲಿ ಲಕ್ಷ್ಮೀ ನಿವಾಸ (Lakshmi Nivasa) ಸ್ಥಾನವನ್ನು ಪಡೆದುಕೊಂಡಿದೆ. ಒಂದೆರಡು ವಾರಗಳಲ್ಲಿ ಪುಟ್ಟಕ್ಕಮ ಮಕ್ಕಳಿಗೆ ಸವಾಲು ಹಾಕಿದ್ದ ಲಕ್ಷ್ಮೀ ನಿವಾಸ ಅನಂತರ ಪುಟ್ಟಕ್ಕನ ಮಕ್ಕಳನ್ನು ಹಿಂದೆ ಹಾಕಲು ಸಾಧ್ಯವಾಗಿಲ್ಲ. ಎರಡನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ ತನ್ನ ಪಯಣವನ್ನು ಮುಂದುವರೆಸಿದೆ.

ಇತ್ತೀಚಿಗಷ್ಟೇ ಆರಂಭವಾದಂತಹ ಹೊಸ ಸೀರಿಯಲ್ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಬಹಳ ಬೇಗ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನ ಮೋಡಿ ಮಾಡಿ ಟಾಪ್ ಸೀರಿಯಲ್ ಗಳ ರೇಸ್ ಗೆ ಎಂಟ್ರಿಯನ್ನು ಕೊಟ್ಟಿದೆ. ಈ ವಾರ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಅಪ್ಪನ ಪ್ರೀತಿಗಾಗಿ ಹಂಬಲಿಸುವ ಶ್ರಾವಣಿ, ಕೆಲಸದಲ್ಲಿ ನಿಷ್ಠಾವಂತನಾದ ಸುಬ್ಬು ಕಥೆ ಇದಾಗಿದೆ.

ವೈಷ್ಣವಿ ಗೌಡ ಮತ್ತು ಗಗನ್ ಚಿನ್ನಪ್ಪ ಪ್ರಮುಖ ಪಾತ್ರಗಳಲ್ಲಿರುವ ಸೀತಾ ರಾಮ (SeethaRama) ಸೀರಿಯಲ್ ಈ ವಾರ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಆರಂಭದಲ್ಲಿ ಬಹಳಷ್ಟು ಆಸಕ್ತಿಕರವಾಗಿದ್ದ ಸೀತಾ ರಾಮ ಟಾಪ್ ಎರಡನೇ ಸ್ಥಾನದವರೆಗೆ ತಲುಪಿತ್ತು. ಆದರೆ ಅನಂತರ ಅದರ ಸ್ಥಾನದಲ್ಲಿ ಹಿನ್ನಡೆ ಉಂಟಾಗಿದೆ.

ರಾಜೇಶ್ ನಟರಂಗ ಮತ್ತು ಛಾಯಾ ಸಿಂಗ್ ಪ್ರಮುಖ ಪಾತ್ರಗಳಲ್ಲಿರುವ ಅಮೃತಧಾರೆ (Amruthadhaare) ಸೀರಿಯಲ್ ಟಿ ಆರ್ ಪಿ ಯಲ್ಲಿ ಏರಿಳಿತಗಳೊಂದಿಗೆ ಸ್ಥಾನಗಳಲ್ಲಿ ಬದಲಾವಣೆ ಕಾಣುತ್ತಲೇ ಬರುತ್ತಿದ್ದು, ಈ ವಾರ ಅಮೃತಧಾರೆಗೆ ಐದನೇ ಸ್ಥಾನ ಸಿಕ್ಕಿದೆ. ಗೌತಮ್ ದೀವಾನ್ ಮತ್ತು ಭೂಮಿಕಾ ನಡುವಿನ ಸುಂದರ ಬಾಂಧವ್ಯ ಈ ಸೀರಿಯಲ್ ನ ಕಥಾವಸ್ತುವಾಗಿದೆ.

Leave a Comment