Kannada Serial TRP: ಹಳೇ ಹೊಸ ಸೀರಿಯಲ್ ಗಳ ಪೈಪೋಟಿ, ಈ ವಾರ ಅಖಾಡದಲ್ಲಿ ಯಾವುದಕ್ಕೆ ಯಾವ ಸ್ಥಾನ?

Written by Soma Shekar

Published on:

---Join Our Channel---

Kannada Serial TRP : ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳ ನಡುವೆ ಟಿ ಆರ್ ಪಿ (Kannada Serial TRP) ವಿಚಾರದಲ್ಲಿ ಬಹಳ ಜೋರಾದ ಸ್ಪರ್ಧೆ ನಡೆಯುತ್ತಿದೆ. ಟಾಪ್ 5 ಸ್ಥಾನಗಳಲ್ಲಿ ಮೊದಲು ಪ್ರಸಾರ ಕಾಣುತ್ತಿರುವ ಸೀರಿಯಲ್ ಗಳ ಜೊತೆಗೆ ಹೊಸ ಸೀರಿಯಲ್ ಗಳು ಕೂಡಾ ಪೈಪೋಟಿಗೆ ಇಳಿದಂತೆ ಕಾಣುತ್ತಿದೆ. ಹಾಗಾದರೆ ಈ ವಾರದಲ್ಲಿ ಯಾವ ಸೀರಿಯಲ್ ಯಾವ ಸ್ಥಾನವನ್ನು ಪಡೆದುಕೊಂಡು ಟಿ ಆರ್ ಪಿ ರೇಸ್ ನಲ್ಲಿ ಮುಂದೆ ಇದೆ ಎನ್ನುವುದನ್ನು ತಿಳಿದುಕೊಳ್ಳೋಣ.

ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಈ ಹಿಂದೆ ಎರಡ್ ಅಂಕಿಯ ಟಿ ಆರ್ ಪಿ ಪಡೆದಿತ್ತು. ಪ್ರಸ್ತುತ ಇದೇ ಧಾರಾವಾಹಿ ಸಾಕಷ್ಟು ಜನಪ್ರಿಯ ಧಾರಾವಾಹಿಯಾಗಿದ್ದು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಇದನ್ನ ವೀಕ್ಷಿಸುತ್ತಿದ್ದಾರೆ. ಧಾರಾವಾಹಿಯ ಕಥೆಯಲ್ಲಿನ ಹೊಸ ತಿರುವುಗಳು ಇನ್ನಷ್ಟು ರೋಚಕತೆಯನ್ನು ಮೂಡಿಸಿದ್ದು, ಈ ವಾರವೂ ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಎಂದಿನಂತೆ ಎರಡನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿ ಇದ್ದು ಆರಂಭದ ದಿನಗಳಲ್ಲಿ ಭರ್ಜರಿ ವೇಗವನ್ನ ಪಡೆದುಕೊಂಡು ಮೊದಲ ಸ್ಥಾನಕ್ಕೆ ಕೂಡಾ ಲಗ್ಗೆ ಇಟ್ಟಿದ್ದ ಲಕ್ಷ್ಮಿ ನಿವಾಸ ಸೀರಿಯಲ್ ಈಗಲೂ ಅದೇ ಬೇಡಿಕೆಯನ್ನ ಉಳಿಸಿಕೊಂಡಿದೆಯಾದರೂ, ಪುಟ್ಟಕ್ಕನ ಮಕ್ಕಳ ಎದುರಲ್ಲಿ ಪೈಪೋಟಿ ನೀಡಲು ಸಾಧ್ಯವಾಗದೇ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಮೂರನೇ ಸ್ಥಾನದಲ್ಲಿ ಕಳೆದ ವಾರ ಇದ್ದ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಈ ವಾರವೂ ತನ್ನ ಅದೇ ಸ್ಥಾನವನ್ನು ಉಳಿಸಿಕೊಂಡಿದ್ದು, ಇತ್ತೀಚಿಗಷ್ಟೇ ಆರಂಭವಾದ ಈ ಧಾರಾವಾಹಿ ಸೀತಾರಾಮ ಮತ್ತು ಅಮೃತಧಾರೆ ಸೀರಿಯಲ್ ಗಳನ್ನ ಹಿಂದೆ ಹಾಕುವ ಮೂಲಕ ಬಹಳ ಬೇಗ ಟಾಪ್ ಐದರ ಸ್ಪರ್ಧೆಗೆ ಎಂಟ್ರಿ ನೀಡಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಇನ್ನು ನಾಲ್ಕನೇ ಸ್ಥಾನದ ವಿಚಾರಕ್ಕೆ ಬಂದರೆ ಸೀತಾರಾಮ (SeethaRama) ಧಾರಾವಾಹಿ ಈ ಸ್ಥಾನದಲ್ಲಿದ್ದು, ಆರಂಭದ ದಿನಗಳಲ್ಲಿ ಟಾಪ್ ಎರಡನೇ ಸ್ಥಾನದವರೆಗೆ ಬಂದಿದ್ದ ಈ ಧಾರಾವಾಹಿಯು ಈಗಲೂ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದರೂ ಅದರ ಸ್ಥಾನದಲ್ಲಿ ಮಾತ್ರ ಇಳಿಕೆಯನ್ನು ಕಂಡಿದ್ದು, ಸದ್ಯ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಐದನೇ ಸ್ಥಾನವನ್ನು ಅಮೃತಧಾರೆ (Amruthadhaare) ಸೀರಿಯಲ್ ಪಡೆದುಕೊಂಡಿದ್ದು, ಈ ಧಾರಾವಾಹಿಯ ಸ್ಥಾನದಲ್ಲಿ ಸಾಕಷ್ಟು ಏರಿಳಿತಗಳು ಕಾಣುತ್ತಲೇ ಇದೆ. ಕೆಲವೊಮ್ಮೆ ಮೂರನೇ ಸ್ಥಾನಕ್ಕೂ ಬರುವ ಈ ಧಾರಾವಾಹಿ ಇನ್ನು ಕೆಲವೊಮ್ಮೆ ನಾಲ್ಕು ಐದರಲ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಈ ವಾರ ಅಮೃತಧಾರೆಗೆ ಐದನೇ ಸ್ಥಾನ ದಕ್ಕಿದೆ.

ಇನ್ನು ಕೆಲವೇ ದಿನಗಳ ಹಿಂದೆಯಷ್ಟೇ ಆರಂಭವಾದ ಕಲರ್ಸ್ ಕನ್ನಡ ವಾಹಿನಿಯ ನಿನಗಾಗಿ (Ninagagi) ಸೀರಿಯಲ್ 6ನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಅಚ್ಚರಿಯನ್ನ ಮೂಡಿಸಿದ್ದು, ದಿವ್ಯ ಉರುಡುಗ ಈ ಸೀರಿಯಲ್ ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

Leave a Comment