Indian 2: ಇನ್ನು ಕೆಲವೇ ಗಂಟೆಗಳಲ್ಲಿ OTT ಯಲ್ಲಿ ಇಂಡಿಯನ್ 2; ಕಮಲ ಹಾಸನ್ ಫ್ಯಾನ್ಸ್ ಗೆ ಬಿಗ್ ಶಾಕ್

Written by Soma Shekar

Published on:

---Join Our Channel---

Indian 2 : ಹಿರಿಯ ನಟ ಕಮಲ ಹಾಸನ್ (Kamal Hassan) ಮುಖ್ಯ ಪಾತ್ರದಲ್ಲಿರುವ ‘ಇಂಡಿಯನ್ 2’ (Indian 2)ಸಿನಿಮಾ ಜುಲೈ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಆದರೆ ಈಗ ಈ ಸಿನಿಮಾ ಬಿಡುಗಡೆಯಾದ ಮೂರೇ ದಿನಕ್ಕೆ ಅಂದರೆ ಜುಲೈ 15 ಕ್ಕೆ ನೆಟ್​ ಫ್ಲಿಕ್ಸ್ ಒಟಿಟಿಗೆ ಎಂಟ್ರಿ ಕೊಡಲಿದೆ ಎನ್ನುವ ಸುದ್ದಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇಂಡಿಯನ್ 2 ಸಿನಿಮಾ ಬಿಡುಗಡೆಗೆ ಮೊದಲು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು.

ಇಂಡಿಯನ್ 1 ಸಿನಿಮಾ 1996 ರಲ್ಲಿ ಬಿಡುಗಡೆ ಆಗಿ, ದೇಶಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿದ ಸಿನಿಮಾ ಆಗಿತ್ತು. ಪ್ರೇಕ್ಷಕರ ಮೆಚ್ಚುಗೆಗಳನ್ನು ಪಡೆದು ಬ್ಲಾಕ್ ಬಸ್ಟರ್ ಆಗಿತ್ತು. ಅದೇ ಸಿನಿಮಾದ ಮುಂದುವರೆದ ಭಾಗ ‘ಇಂಡಿಯನ್ 2’ ಸಿನಿಮಾ ಎನ್ನುವ ಕಾರಣದಿಂದಲೇ ಸಿನಿಮಾ ಬಹಳಷ್ಟು ಕುತೂಹಲವನ್ನು ಮೂಡಿಸಿತ್ತು,ಸಿನಿ ಪ್ರೇಮಿಗಳ ನಿರೀಕ್ಷೆಗಳು ದುಪ್ಪಟ್ಟಾಗಿತ್ತು.

ಕಮಲ್ ಹಾಸನ್, ಕಾಜಲ್ ಅಗರ್ವಾಲ್, ಸಿದ್ಧಾರ್ಥ್, ರಕುಲ್ ಪ್ರೀತ್ (Rakul Preet) ಇನ್ನಿತರ ಸ್ಟಾರ್ ನಟರು ಸಿನಿಮಾದಲ್ಲಿ ನಟಿಸಿದ್ದು, ಸ್ಟಾರ್ ‌ನಿರ್ದೇಶಕ ಶಂಕರ್ (Shankar) ಸಿನಿಮಾ ನಿರ್ದೇಶನ ಮಾಡಿದ್ದು, ಸಿನಿಮಾ ಕುರಿತಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಈಗ ಬಿಡುಗಡೆ ನಂತರ ಎಲ್ಲರ ನಿರೀಕ್ಷೆಗಳು ಸುಳ್ಳಾಗಿದ್ದು, ಇಂಡಿಯನ್ 2 ಸೋಲಿನ‌ ಹಾದಿಯನ್ನು ತುಳಿದಿದೆ.

ಜುಲೈ 12 ರಂದು ಬಿಡುಗಡೆ ಆದ ‘ಇಂಡಿಯನ್ 2’ ಸಿನಿಮಾದ ಕಲೆಕ್ಷನ್ ಮೊದಲ ದಿನವೇ ಕಳಪೆಯಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗುವ ಸೂಚನೆಗಳು ಸಿಕ್ಕಿದೆ. ಅಲ್ಲದೇ ಸಿನಿಮಾ ಕುರಿತಾಗಿ ನೆಗೆಟಿವ್ ಮಾತುಗಳೇ ಕೇಳಿ ಬರುತ್ತಿದ್ದು, ಸಿನಿಮಾ ಫ್ಲಾಪ್ ಎನ್ನುವ ಸುದ್ದಿಗಳು ಹರಿದಾಡಿದೆ.‌ ಸಿನಿಮಾವನ್ನು ಜನರಿಗೆ ಹೇಗಾದರೂ ತಲುಪಿಸಬೇಕೆಂದು ಅನಗತ್ಯ ಎನಿಸಿದ್ದ 20 ನಿಮಿಷ ಭಾಗವನ್ನು ಕತ್ತರಿಸಿದ್ದರೂ ಜನರಿಗೆ ಸಿನಿಮಾ ಇಷ್ಟವಾಗ್ತಿಲ್ಲ.

ಈಗ ಇದೇ ಕಾರಣದಿಂದ ಸಿನಿಮಾ ಬಿಡುಗಡೆ ಆದ ಮೂರ ದಿನಕ್ಕೆ ಓಟಿಟಿಗೆ ಎಂಟ್ರಿ ಕೊಡ್ತಿದೆ.  ಅಸಲಿಗೆ ಸಿನಿಮಾ ಬಿಡುಗಡೆ ಮುಂಚೆಯೇ ನೆಟ್​ಫ್ಲಿಕ್ಸ್​ ಜೊತೆಗೆ ‘ಇಂಡಿಯನ್ 2’ ಸಿನಿಮಾ ತಂಡದ ಒಪ್ಪಂದ ಆಗಿತ್ತು ಎನ್ನಲಾಗಿದ್ದು, ಈಗ ಜುಲೈ 15 ರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗುತ್ತಿದೆ ಎಂದು ಹೇಳಲಾಗಿದೆ. ಇಂಡಿಯನ್ 2 ಗೆ ಸಿಕ್ಕ ನೀರಸ ಪ್ರತಿಕ್ರಿಯೆ ಈಗ ಇಂಡಿಯನ್ 3 ರ ಚಿತ್ರೀಕರಣಕ್ಕೆ ಬ್ರೇಕ್ ಆಗುತ್ತಾ ಕಾದು ನೋಡಬೇಕಾಗಿದೆ.

Leave a Comment