Kajal Aggarwal: ಆ ವಿಷಯದಲ್ಲಿ ಬಾಲಿವುಡ್ ಬೆಟರ್, ಸ್ಟಾರ್ ಮಾಡಿದ ಸೌತ್ ಸಿನಿಮಾ ಬಗ್ಗೆ ಕಾಜಲ್ ಹೀಗಾ ಅನ್ನೋದು?

Written by Soma Shekar

Published on:

---Join Our Channel---

Kajal Aggarwal: ತೆಲುಗು ಮತ್ತು ತಮಿಳು ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ, ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಕಾಜಲ್ ಅಗರ್ವಾಲ್ (Kajal Aggarwal). ತಮಿಳು ಮತ್ತು ತೆಲುಗಿನಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರಿಗೆ ನಾಯಕಿಯಾಗಿ ಕಾಣಿಸಿಕೊಂಡು ಅಪಾರ ಜನಪ್ರಿಯತೆಯನ್ನು ಈ ನಟಿ ಪಡೆದುಕೊಂಡಿದ್ದಾರೆ. ವಿಶೇಷವಾಗಿ ತೆಲುಗು ಸಿನಿಮಾ ರಂಗದಲ್ಲಿ ನಟಿ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಇತ್ತೀಚಿಗೆ ನಟಿ ಸಂದರ್ಶನವೊಂದರಲ್ಲಿ ದಕ್ಷಿಣ ಸಿನಿಮಾ ರಂಗವನ್ನು ಬಾಲಿವುಡ್ ಗೆ (Bollywood) ಹೋಲಿಸಿ ಮಾತನಾಡಿರುವುದು ಸಿನಿ ಪ್ರಿಯರಿಗೆ ಬೇಸರವನ್ನು ಉಂಟು ಮಾಡಿದೆ. ತನ್ನನ್ನ ಸ್ಟಾರ್ ಮಾಡಿದ ದಕ್ಷಿಣ ಸಿನಿಮಾ ರಂಗದ ಬಗ್ಗೆ ಈ ರೀತಿ ಹೇಳುವುದು ಸರಿಯಲ್ಲ ಎನ್ನುವುದು ಅನೇಕರ ಅಭಿಪ್ರಾಯ ಸಹಾ ಆಗಿದೆ. ಇಷ್ಟಕ್ಕೂ ಕಾಜಲ್ ಅಗರ್ವಾಲ್ ಹೇಳಿದ್ದೇನು? ಯಾವ ವಿಚಾರಕ್ಕೆ ಸೌತ್ ಸಿನಿಮಾವನ್ನು (South Cinema) ಬಾಲಿವುಡ್ ಗೆ ಹೋಲಿಕೆ ಮಾಡಿದ್ದಾರೆ.

ಬಾಲಿವುಡ್ ನಲ್ಲಿ ನಟಿಯರಿಗೆ ಮದುವೆಯಾದ ನಂತರ, ಮಕ್ಕಳಾದ ನಂತರವೂ ಸಿನಿಮಾಗಳಲ್ಲಿ ಉತ್ತಮವಾದ ಪಾತ್ರಗಳು ಸಿಗುತ್ತವೆ. ದೀಪಿಕಾ ಪಡುಕೋಣೆ (Deepika Padukone) ಫೈಟರ್ ಸಿನಿಮಾದಲ್ಲಿ ಆ್ಯಕ್ಷನ್ ಪಾತ್ರ, ರಾಜಾ ಔರ್ ರಾಣಿಕಿ ಪ್ರೇಮ್ ಕಹಾನಿಯಲ್ಲಿ ಆಲಿಯಾ ಭಟ್ ಗೆ ರೋಮ್ಯಾಂಟಿಕ್ ಪಾತ್ರ ದೊರೆತಿದೆ. ಆದರೆ ದಕ್ಷಿಣದ ಸಿನಿಮಾಗಳಲ್ಲಿ ಹೀಗೆ ಅವಕಾಶ ಸಿಗುವುದಿಲ್ಲ.

ದಕ್ಷಿಣ ಸಿನಿಮಾ ರಂಗದಲ್ಲಿ ನಟಿಯರಿಗೆ ಮದುವೆಯ ನಂತರ ಹಾಗೂ ಮಕ್ಕಳಾದ ನಂತರ ಸಿನಿಮಾಗಳಲ್ಲಿ ಪ್ರಮುಖವಾದ ಪಾತ್ರ ಸಿಗದೇ ಶ್ರಮಿಸುತ್ತಿದ್ದಾರೆ. ಈಗ ಇಲ್ಲೂ ಬದಲಾವಣೆಗಳು ಆಗುತ್ತಿವೆ. ನಮ್ಮಲ್ಲಿ ಸ್ಟೀರಿಯೋಟೈಪ್ ಸಂಪ್ರದಾಯ ಇನ್ನೂ ಇದ್ದು, ಅದನ್ನ ಶೀಘ್ರದಲ್ಲೇ ತೊಡೆದು ಹಾಕಲಿದ್ದೇವೆ ಎನ್ನುವ ಮಾತನ್ನು ಕಾಜಲ್ ಅಗರ್ವಾಲ್ ಹೇಳಿದ್ದಾರೆ.

Leave a Comment