Lakshmi Nivasa: ಹೆಂಡ್ತಿ ಮನೇಲಿಲ್ಲ, ಕಂಗಾಲಾದ ಜಯಂತ್, ಮುಂದೆ ಪಕ್ಕಾ ಹೀಗೇ ಮಾಡ್ತಾನೆ ಅಂದ್ರು ನೆಟ್ಟಿಗರು

Written by Soma Shekar

Published on:

---Join Our Channel---

Lakshmi Nivasa: ಲಕ್ಷ್ಮೀ ನಿವಾಸ (Lakshmi Nivasa) ಸದ್ಯಕ್ಕಂತೂ ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದಾಗಿದೆ. ಈ ಸೀರಿಯಲ್ ಎಲ್ಲಾ ಪಾತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆಯಾದರೂ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಚರ್ಚಿತವಾಗುತ್ತಿರುವ ಎರಡು ಪಾತ್ರಗಳು ಎಂದರೆ ಅವು ಜಯಂತ್ ಮತ್ತು ಜಾಹ್ನವಿ ಪಾತ್ರಗಳಾಗಿದೆ. ಎಪಿಸೋಡ್ ನ ಪ್ರಸಾರದ ಅವಧಿಯಲ್ಲಿ ಅನೇಕ ಸಲ ಈ ಪಾತ್ರಗಳಿಗೆ ಹೆಚ್ಚಿನ ಸಮಯ ಮೀಸಲಾಗಿದೆ ಎನ್ನುವುದು ಸಹಾ ಸತ್ಯ.

ಮಾನಸಿಕ ಸಮಸ್ಯೆ ಇರುವ ಜಯಂತ್ (Jayanth) ತನ್ನ ಹೆಂಡತಿ ಜಾಹ್ನವಿ (Jahnavi) ತನಗೆ ಮಾತ್ರ ಸ್ವಂತ, ಅವಳ ಜಗತ್ತು ತಾನು ಮಾತ್ರ ಆಗಿರಬೇಕು ಅಂತ ಅವಳನ್ನು ಹೊರ ಜಗತ್ತಿನ ಸಂಪರ್ಕದಿಂದ ದೂರ ಇರಿಸಿದ್ದಾನೆ‌. ಪ್ರೀತಿ ಅನ್ನೋ ಹೆಸರಲ್ಲಿ ಜಾಹ್ನವಿಯನ್ನು ಮನೆಯಿಂದ ಹೊರಗೆ ಬರದಂತೆ, ಮನೆಯವರ ಜೊತೆ ಮಾತನಾಡದಂತೆ, ಟಿವಿ ನೋಡದಂತೆ ಮಾಡಿದ್ದು, ಅವಳ ಪ್ರತಿ ಚಲನ ವಲನವನ್ನು ಸಿಸಿಟಿವಿ ಮೂಲಕ ಆಫೀಸ್ ನಲ್ಲಿದ್ದರೂ ಗಮನಿಸುತ್ತಿರುತ್ತಾನೆ ಜಯಂತ್.

ಈಗ ಜಾಹ್ನವಿ ಮನೆಯಲ್ಲಿ ತರಕಾರಿ ಇಲ್ಲ ಅಂತ ಮನೆಯ ಹಿಂದಿನ ಬಾಗಿಲಿನಿಂದ ಹೊರಗೆ ಬಂದಿದ್ದಾಳೆ. ಗೂಡಿನಿಂದ ಹೊರಗೆ ಬಂದ ಹಕ್ಕಿಯ ಹಾಗೆ ಉಲ್ಲಾಸದಿಂದ ಇದ್ದಾಳೆ. ಮನೆಯಲ್ಲಿ ಜಾಹ್ನವಿ ಕಾಣ್ತಿಲ್ಲ ಅನ್ನೋದನ್ನ ಮೊಬೈಲ್ ಗಮನಿಸಿದ ಜಯಂತ್ ಅದನ್ನ ಸರಿಯಾಗಿ ಗಮನಿಸಿದಾಗ ಜಾನು ಹೊರಗೆ ಬಂದಿದ್ದು ನೋಡಿ ಕಂಗಾಲಾಗಿದ್ದು, ಅವನ ಮನಸ್ಸು ತಳಮಳಗೊಂಡಿದೆ.

ಇದನ್ನ ನೋಡಿದ ಪ್ರೇಕ್ಷಕರು ಈಗ ಜಯಂತ್ ಮೊದಲ ಕೆಲಸ ಆ ಹಿಂದಿನ ಬಾಗಿಲನ್ನು ಬಂದ್ ಮಾಡಿಸೋದಾಗಿರುತ್ತೆ, ಇಷ್ಟು ಅನುಮಾನ ಇದ್ರೆ ಜೀವನ ಮಾಡೋದು ಖಂಡಿತ ಕಷ್ಟ ಎಂದಿದ್ದಾರೆ. ಈಗ ನಿಜವಾಗಿಯೂ ನೆಟ್ಟಿಗರು ಹೇಳಿದಂತೆ ಜಯಂತ್ ಜಾನು ಹೊರಗೆ ಹೋಗೋದಕ್ಕೆ ಬಳಸಿಕೊಂಡ ಬಾಗಿಲನ್ನು ಮುಚ್ಚಿಸ್ತಾನಾ, ಅದನ್ನ ಪರ್ಮನೆಂಟ್ ಆಗಿ ಲಾಕ್ ಮಾಡಿಸ್ತಾನಾ? ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment