Raja Mouli : ಸ್ಟಾರ್ ನಿರ್ದೇಶಕ ರಾಜಮೌಳಿಗೆ (Raja Mouli) ಇಂದು ಪರಿಚಯದ ಅಗತ್ಯ ಖಂಡಿತ ಇಲ್ಲ. ಬಾಹುಬಲಿ (Bahubali) ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ ಇವರು ತ್ರಿಬಲ್ ಆರ್ (RRR) ಸಿನಿಮಾದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಪಡೆದಿರುವಂತಹ ನಿರ್ದೇಶಕನಾಗಿದ್ದಾರೆ. ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ತೆರೆಯ ಮೇಲೆ ತಂದು ತನಗೆ ತಾನೇ ಸಾಟಿ ಎನ್ನುವುದನ್ನು ಪ್ರತಿ ಸಿನಿಮಾದ ಮೂಲಕ ಸಾಬೀತು ಮಾಡಿದ್ದಾರೆ ರಾಜಮೌಳಿ.
ಇಂತಹ ಹೆಸರಾಂತ ನಿರ್ದೇಶಕ ರಾಜಮೌಳಿ ರಿಮೇಕ್ ಸಿನಿಮಾ ಮಾಡಿದ್ದಾರೆ ಎನ್ನುವ ವಿಷಯವೊಂದು ಈಗ ಹರಿದಾಡಿದೆ. ಇಂತಹ ಸುದ್ದಿಯೊಂದು ಹರಿದಾಡಲು ಪ್ರಮುಖ ಕಾರಣ ಏನು ಅನ್ನೋದಾದ್ರೆ ಸುಮಾರು 111 ವರ್ಷಗಳ ಹಿಂದೆ ಹಾಲಿವುಡ್ ನಲ್ಲಿ ಬಿಡುಗಡೆಯಾದ ಒಂದು ಸಿನಿಮಾದ ಕಥೆ ರಾಜಮೌಳಿ ಅವರ ಸೂಪರ್ ಹಿಟ್ ಸಿನಿಮಾವೊಂದರ ಕಥೆ ಒಂದೇ ರೀತಿಯಲ್ಲಿ ಇರೋದಾಗಿದೆ.
ಹೌದು, 1923 ರಲ್ಲಿ ಬಂದಿರುವಂತಹ ಹಾಲಿವುಡ್ ಸಿನಿಮಾ ಅವರ್ ಹಾಸ್ಪಿಟಾಲಿಟಿ (Our Hospitality) ಸಿನಿಮಾದ ಕಥೆಗೂ ನಿರ್ದೇಶಕ ರಾಜಮೌಳಿ ಅವರ ನಿರ್ದೇಶನದ ಮರ್ಯಾದ ರಾಮನ್ನ (Maryada Ramanna) ಸಿನಿಮಾದ ಕಥೆಗೆ ತೀರಾ ನಿಕಟವಾದ ಸಾಮ್ಯತೆ ಇದೆ.ಎರಡೂ ಸಿನಿಮಾದಲ್ಲೂ ನಾಯಕ ತನ್ನ ತಂದೆ ಕಡೆ ಆಸ್ತಿಗಾಗಿ ಊರಿಗೆ ಹೋಗಿ ವಿಲನ್ ಮನೆಯಲ್ಲಿ ಸಿಕ್ಕಿಹಾಕಿಕೊಳ್ತಾನೆ.
ಹೀಗೆ ಊರಿಗೆ ಹೋಗೋ ಹೀರೋಗೆ ಮಾರ್ಗದಲ್ಲಿ ನಾಯಕಿ ಸಿಕ್ತಾಳೆ. ಆಕೆ ವಿಲನ್ ಮಗಳು, ಆದರೆ ಅವರ ಮನೆಯಲ್ಲಿ ಗೆಸ್ಟ್ ಗೆ ಸಿಗೋ ಗೌರವದಿಂದ ಹೀರೋ ಪ್ರಾಣ ಉಳಿದಿರುತ್ತೆ. ಇದನ್ನ ನೋಡಿದಾಗ ರಾಜಮೌಳಿ ಹಾಲಿವುಡ್ ನ ಅವರ್ ಹಾಸ್ಪಿಟಾಲಿಟಿಯನ್ನೆ ತೆಲುಗಿನಲ್ಲಿ ಮರ್ಯಾದ ರಾಮನ್ನ ಹೆಸರಿನಲ್ಲಿ ರಿಮೇಕ್ ಮಾಡಿದ್ದಾರಾ ಅನಿಸೋದು ಸುಳ್ಳಲ್ಲ.