Ninagagi Serial: ಹೊಸ ಸೀರಿಯಲ್ ಘೋಷಣೆ, ದಿವ್ಯ ಉರುಡುಗ ಎಂಟ್ರಿ, ಬೃಂದಾವನ ಸೀರಿಯಲ್ ಎಕ್ಸಿಟ್? ಪ್ರೇಕ್ಷಕರಿಗೆ ಟೆನ್ಷನ್

Written by Soma Shekar

Published on:

---Join Our Channel---

Ninagagi Serial: ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಹೆಸರನ್ನು ಮಾಡಿರುವ ನಟಿಯರಲ್ಲಿ ದಿವ್ಯ ಉರುಡುಗ (Divya Uruduga) ಅವರು ಬಿಗ್ ಬಾಸ್ ಸ್ಪರ್ಧಿಯಾಗಿ (Bigg Boss Kannada) ಎರಡು ಸೀಸನ್ ಗಳಲ್ಲಿ ಕಾಣಿಸಿಕೊಂಡು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಈಗ ನಟಿ ದಿವ್ಯ ಉರುಡುಗ ಅವರು ಮತ್ತೆ ಕಿರುತೆರೆಗೆ ಮರಳಲು ಸಜ್ಜಾಗಿದ್ದು ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಹೊಸ ಸೀರಿಯಲ್ ನ ಪ್ರೊಮೋ ಕಳೆದ ತಿಂಗಳಲ್ಲೆ ಬಿಡುಗಡೆ ಆಗಿ ಎಲ್ಲರ ಗಮನವನ್ನು ಸೆಳೆದಿತ್ತು.

ಹೊಸ ಸೀರಿಯಲ್ ನಲ್ಲಿ ನಟಿಯು ಸಿನಿಮಾ ರಂಗದಲ್ಲಿ ಹೆಸರನ್ನ ಮಾಡಿರುವಂತರ ಸ್ಟಾರ್ ನಟಿ ರಚ್ಚು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಾಹಿನಿ ಶೇರ್ ಮಾಡಿರುವ ಪ್ರೊಮೋಗಳು ಈಗಾಗಲೇ ಸಾಕಷ್ಟು ಕುತೂಹಲವನ್ನು ಮೂಡಿಸಿದ್ದು ಸೀರಿಯಲ್ ಗೆ ನಿನಗಾಗಿ (Ninagagi Serial) ಅನ್ನೋ ಟೈಟಲ್ ಇಡಲಾಗಿದೆ. ಅಮ್ಮನ ಪ್ರೀತಿ ವಂಚಿತಳಾದ ಪುಟ್ಟ ಹುಡುಗಿ ಒಂದು ಕಡೆಯಾದರೆ, ಮತ್ತೊಂದು ಕಡೆ ಸ್ಟಾರ್ ನಟಿ ರಚ್ಚು. ಪುಟ್ಟ ಹುಡುಗಿಗೆ ರಚ್ಚು ಎಂದರೆ ಅಭಿಮಾನ ಅನ್ನೋದು ಪ್ರೊಮೊದಲ್ಲಿ ಕಂಡಿದೆ.

ಆದರೆ ಈಗ ಈ ಹೊಸ ಸೀರಿಯಲ್ ನ ಪ್ರಸಾರದ ದಿನಾಂಕ ಮತ್ತು ಸಮಯ ಘೋಷಣೆ ಆದ ನಂತರ ಕಿರುತೆರೆಯ ಪ್ರೇಕ್ಷಕರಿಗೆ ಹೊಸದೊಂದು ಅನುಮಾನ ಮೂಡಿದೆ, ಹೊಸದೊಂದು ಪ್ರಶ್ನೆ ಅವರನ್ನು ಕಾಡಿದೆ. ಹೌದು, ದಿವ್ಯ ಉರುಡುಗ ಅವರ ಹೊಸ ಸೀರಿಯಲ್ ಇದೇ ಮೇ 27 ರಿಂದ ರಾತ್ರಿ 8 ಗಂಟೆಗೆ ಪ್ರಸಾರವನ್ನು ಆರಂಭ ಮಾಡ್ತಿದೆ ಅಂತ ವಾಹಿನಿ ಮಾಹಿತಿ ನೀಡಿದೆ.

ಪ್ರಸ್ತುತ ಇದೇ ಸಮಯದಲ್ಲಿ ಬೃಂದಾವನ ಸೀರಿಯಲ್ ಪ್ರಸಾರ ಆಗ್ತಿದೆ. ಬೃಂದಾವನ (Brundavana Serial) ಸಹಾ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವಂತಹ ಸೀರಿಯಲ್ ಆಗಿದೆ. ಅದರ ಪ್ರಸಾರದ ಸಮಯ ರಾತ್ರಿ ಎಂಟು, ಈಗ ನಿನಗಾಗಿ ಸೀರಿಯಲ್ ನ ಪ್ರಸಾರದ ಸಮಯ ಸಹಾ ಅದೇ ಆಗಿರೋದ್ರಿಂದ ಎಲ್ಲರಿಗೂ ಸಂದೇಹ ಕಾಡುತ್ತಿದೆ. ಇನ್ಮುಂದೆ ಬೃಂದಾವನ ಸೀರಿಯಲ್ ನ ಸಮಯ ಬದಲಾಗುತ್ತಾ ಅಂತ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.

ಇದೇ ವೇಳೆ ಇನ್ನೂ ಕೆಲವರು ಬೃಂದಾವನ ಸೀರಿಯಲ್ ನ ಮುಗಿಸಿ, ನಿನಗಾಗಿ ಸೀರಿಯಲ್ ನ ಪ್ರಸಾರ ಮಾಡುವ ಸಾಧ್ಯತೆಗಳು ಇದೆ ಅಂತಾ ಹೇಳ್ತಿದ್ದಾರೆ. ಒಟ್ನಲ್ಲಿ ಹೊಸ ಸೀರಿಯಲ್ ಸಮಯ ಈಗ ಬೃಂದಾವನ ಸೀರಿಯಲ್ ನ ಇಷ್ಟ ಪಟ್ಟು ನೋಡೋ ಪ್ರೇಕ್ಷಕರಲ್ಲಿ ಒಂದಷ್ಟು ಸಂದೇಹಗಳನ್ನು ಹುಟ್ಟು ಹಾಕಿದ್ದು, ಇದಕ್ಕೆ ಉತ್ತರ ಯಾವಾಗ ಸಿಗುತ್ತೆ ಅನ್ನೋದರ ನಿರೀಕ್ಷೆಯಲ್ಲಿ ಇದ್ದಾರೆ.

Leave a Comment