Weird Culture: ಈ ಹಳ್ಳೀಲಿ ಗಂಡಸರು 2 ಮದ್ವೆ ಆಗೋದು ಕಡ್ಡಾಯ; ಬೇಡ ಅಂದ್ರೆ ಒದ್ದು ಊರಿಂದ ಹೊರಗೆ ಹಾಕ್ತಾರೆ

Written by Soma Shekar

Published on:

---Join Our Channel---

Weird Culture: ನಮ್ಮ ಭಾರತ (India) ದೇಶದಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋದಾಗ ಹಾಲಿನ ಜನರ ಸಂಸ್ಕೃತಿ, ಆಚಾರ, ವಿಚಾರ ಮತ್ತು ಸಂಪ್ರದಾಯಗಳು ವಿಭಿನ್ನವಾಗಿರುತ್ತವೆ. ಕೆಲವೊಂದು ಸಂಪ್ರದಾಯಗಳಂತೂ ಬಹಳ ಅಪರೂಪ ಹಾಗೂ ವಿಚಿತ್ರ (Weird Culture) ಎನಿಸುತ್ತದೆ. ಈಗ ಅಂತಹದ್ದೇ ಒಂದು ವಿಚಿತ್ರ ಪದ್ಧತಿಯ ಬಗ್ಗೆ ನಾವು ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಭಾರತದ ಈ ಹಳ್ಳಿಯಲ್ಲಿ ಪ್ರತಿಯೊಬ್ಬ ಪುರುಷನೂ ಎರಡು ಮದುವೆಗಳನ್ನು ಮಾಡಿಕೊಳ್ಳಬೇಕೆಂಬ ಸಂಪ್ರದಾಯವಿದೆ ಎಂದರೆ ನಿಮಗೆ ಆಶ್ಚರ್ಯ ಆಗಬಹುದು. ಆದರೆ ಇದು ಆ ಗ್ರಾಮದ ಸಂಪ್ರದಾಯವಾಗಿದ್ದು ಅದನ್ನು ಯಾರು ಕೂಡಾ ನಿರಕರಿಸುವುದಿಲ್ಲ.

ಅಲ್ಲದೇ ಮೊದಲ ಹೆಂಡತಿಯು ತನ್ನ ಸವತಿಯನ್ನು ಬಹಳ ಸಂತೋಷದಿಂದ ತನ್ನ ಮತ್ತು ಪತಿಯ ಜೀವನಕ್ಕೆ ಆಹ್ವಾನಿಸುತ್ತಾಳೆ. ಹಾಗಾದರೆ ಇದಕ್ಕೇನು ಕಾರಣ ? ಇಂತಹ ಸಂಪ್ರದಾಯ ಇರುವುದೆಲ್ಲಿ ? ಎನ್ನುವ ವಿಚಾರವನ್ನು ತಿಳಿದುಕೊಳ್ಳೋಣ ಬನ್ನಿ. ಪಾಕಿಸ್ತಾನ ಗಡಿಯಲ್ಲಿ ಈ ಹಳ್ಳಿಯಿದೆ. ರಾಜಸ್ಥಾನದ (Rajasthan) ಬರ್ಮಾರ್ ಜಿಲ್ಲೆಯ ಒಂದು ಹಳ್ಳಿ ಇದಾಗಿದ್ದು, ಸ್ಥಳೀಯ ಸಂಪ್ರದಾಯದ ಪ್ರಕಾರ ಇಲ್ಲಿ ಒಬ್ಬ ಪುರುಷನಿಗೆ ಇಬ್ಬರು ಹೆಂಡತಿಯರು ಇರಬೇಕು. ಒಂದು ವೇಳೆ ಎರಡನೇ ಮದುವೆ ಆಗುವುದಿಲ್ಲ ಎಂದರೆ ಅವರನ್ನು ಊರಿಂದ ಹೊರಗೆ ಹಾಕುತ್ತಾರೆ.

ತೆರಾಸರ್ ಹೆಸರಿನ ಈ ಗ್ರಾಮದ ನಿವಾಸಿಗಳು ಮೊದಲ ಹೆಂಡತಿಗೆ ಮಕ್ಕಳಾಗುವುದಿಲ್ಲ ಎನ್ನುವ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಆದ್ದರಿಂದ ಮಕ್ಕಳನ್ನು ಹೊಂದಲು ಬಯಸಿದರೆ ಅವರು ಎರಡನೇ ಮದುವೆ ಯಾಗಬೇಕು. ಇಂತಹದೊಂದು ವಿಚಿತ್ರವಾದ ನಂಬಿಕೆಯ ಕಾರಣದಿಂದಾಗಿ ಹಳ್ಳಿಯಲ್ಲಿನ ಗಂಡಸರು ಮೊದಲ ಮದುವೆಯ ನಂತರ ಎರಡನೇ ಮದುವೆ ಆಗಲೇಬೇಕು. ಇನ್ನು ಈ ಸಂಪ್ರದಾಯದ ಹಿಂದೆ ಒಂದು ಕಥೆಯೂ ಇದೆ ಎಂದು ಹೇಳಲಾಗುತ್ತದೆ.

ಬಹಳ ವರ್ಷಗಳ ಹಿಂದೆ ಈ ಗ್ರಾಮದಲ್ಲಿನ ವ್ಯಕ್ತಿಯೊಬ್ಬರಿಗೆ ಮೊದಲ ಪತ್ನಿಯಿಂದ ಮಕ್ಕಳಾಗಲಿಲ್ಲ. ನಂತರ ಆತ ಎರಡನೇ ಮದುವೆಯಾದಾಗ ಆತನಿಗೆ ಮಗುವಾಗಿದೆ. ಇದಾದ ನಂತರ ಆ ಗ್ರಾಮದಲ್ಲಿ ಇಂತಹ ಇನ್ನೊಂದಷ್ಟು ಘಟನೆಗಳು ನಡೆಯಲು ಪ್ರಾರಂಭಿಸಿದವು. ಅಂದಿನಿಂದ ಎರಡನೇ ಮದುವೆ ಎನ್ನುವುದು ಒಂದು ಸಂಪ್ರದಾಯದಂತೆ ಆಚರಿಸುವ ಪದ್ಧತಿಯು ಆರಂಭವಾಯಿತು ಎಂದು ಹೇಳಲಾಗುತ್ತದೆ.

Leave a Comment