Gayathri Gupta: ಹೀರೋಯಿನ್ ಗಳು ಇಷ್ಟಪಟ್ಟು ಮಂಚಕ್ಕೆ ಹೋಗ್ತಾರೆ; ತೆಲುಗು ನಟಿ ರಿವೀಲ್ ಮಾಡಿದ ಕರಾಳ ಸತ್ಯ

Written by Soma Shekar

Published on:

---Join Our Channel---

Gayathri Gupta: ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ (Casting Couch in Cinema) ಇದೆ ಅಂತ ಈಗಾಗಲೇ ಸಾಕಷ್ಟು ಜನ ನಟಿಯರು ಮಾತನಾಡಿದ್ದಾರೆ. ಸ್ಟಾರ್ ನಟಿಯರೇ ತಮಗೆ ಆದಂತಹ ಅನುಭವಗಳನ್ನು ಸಹಾ ಹಂಚಿಕೊಂಡಿದ್ದಾರೆ. ಹೇಗೆ ಅವಕಾಶ ನೀಡಲು ತಮ್ಮನ್ನು ನಿರ್ಮಾಪಕ, ನಿರ್ದೇಶಕ ಮತ್ತು ನಟರು ಮಂಚಕ್ಕೆ ಆಹ್ವಾನ ನೀಡುತ್ತಾರೆ ಎನ್ನುವ ಸತ್ಯಗಳನ್ನು ಬಾಯಿ ಬಿಟ್ಟಿದ್ದಾರೆ. ಸಿನಿಮಾ ಇಂಡಸ್ಟ್ರಿ ಯಾವುದೇ ಆಗಿದ್ದರೂ ಸಹಾ ಅಲ್ಲಿ ಕಾಸ್ಟಿಂಗ್ ಕೌಚ್ ಅನ್ನೋ ಪಿಡುಗು ಇದೆ ಅನ್ನೋದು ಮಾತ್ರ ಸ್ಪಷ್ಟವಾಗಿದೆ.

ಈಗ ಇಂತದ್ದೇ ವಿಚಾರವನ್ನು ಟಾಲಿವುಡ್ ನಟಿ ಗಾಯತ್ರಿ ಗುಪ್ತಾ (Gayathri Gupta) ಸಹಾ ಹಂಚಿಕೊಂಡಿದ್ದಾರೆ. ಗಾಯತ್ತಿ ಅವರು ಈ ಹಿಂದೆ ಸಾಯಿಪಲ್ಲವಿ ಮತ್ತು ವರುಣ್ ತೇಜ್ ನಟಿಸಿದ್ದ ಸೂಪರ್ ಹಿಟ್ ಸಿನಿಮಾ ಫಿದಾದಲ್ಲಿ ನಾಯಕಿಯ ಸ್ನೇಹಿತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ಅವರು ಟಾಲಿವುಡ್ ನಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆಯನ್ನು ಸಹಾ ಪಡೆದುಕೊಂಡಿದ್ದಾರೆ.

ಸಿನಿಮಾ ರಂಗದಿಂದ ಒಂದಷ್ಟು ಗ್ಯಾಪ್ ನ ನಂತರ ಈಗ ನಟಿಯು ವೆಬ್ ಸಿರೀಸ್ ಒಂದರ ಮೂಲಕ ಕಮ್ ಬ್ಯಾಕ್ ಮಾಡಿದ್ದು, ಈ ವೇಳೆ ಸಂದರ್ಶನವೊಂದರಲ್ಲಿ ನಟಿ ಸಂಚಲನ ಹೇಳಿಕೆಗಳನ್ನು ನೀಡಿದ್ದಾರೆ. ನಟಿಯು ಈ ಹಿಂದೆ ನಾನು ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದಾಗ ಯಾರೂ ಸಹಾ ಬೆಂಬಲವನ್ನು ನೀಡಿರಲಿಲ್ಲ. ಅನಂತರ ಇತರರು ನನ್ನಂತೆ ಹೋರಾಟ ಮಾಡಿದ ಮೇಲೆ ಚಿತ್ರರಂಗ ಸ್ಪಂದಿಸಿ, ಸಮಿತಿಯೊಂದನ್ನು ರಚನೆ ಮಾಡಿತು.

ಆದರೆ ಇಂದಿಗೂ ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಇರೋದು ಸತ್ಯ. ಕೆಲವು ನಾಯಕಿಯರು ತಾವೇ ಸ್ವಇಚ್ಛೆಯಿಂದ ಸೆ ಕ್ಸ್ ಮಾಡುತ್ತಾರೆ. ಕೆಲವರು ಅವಶ್ಯಕತೆಯಿಂದ ಇದನ್ನು ಒಪ್ಪಿಕೊಳ್ಳುತ್ತಾರೆ. ಅಂತಹವರಲ್ಲಿ ಬಹಳಷ್ಟು ಜನ ಮುಗ್ಧ ಹುಡುಗಿಯರು ಎನ್ನುವ ಮಾತುಗಳನ್ನು ಹೇಳಿದ್ದಾರೆ ಗಾಯಿತ್ರಿ. ನಟಿಯ ಹೇಳಿಕೆಗಳು ಈಗ ಟಾಲಿವುಡ್ ನಲ್ಲಿ ಒಂದು ಸಂಚಲನಕ್ಕೆ ಕಾರಣವಾಗಿದೆ.

Leave a Comment