D Mart: ನಿಮ್ಮಿಂದ ಡಿ ಮಾರ್ಟ್ ಗೆ ಎಷ್ಟು ಕೋಟಿಗಳ ಲಾಭವಾಗ್ತಿದೆ ಗೊತ್ತಾ? ಊಹೆಗೆ ಕೂಡಾ ಮಾಡಿರಲ್ಲ ನೀವು

Written by Soma Shekar

Published on:

---Join Our Channel---

D Mart: ಮಧ್ಯಮ ವರ್ಗದ ಕುಟುಂಬಗಳು ಮತ್ತು ಡಿ ಮಾರ್ಟ್ (D Mart) ನಡುವೆ ಇರುವ ಸಂಬಂಧ ಎಂತದ್ದು ಎನ್ನುವುದು ಎಲ್ಲರಿಗೂ ತಿಳಿದಿದೆ. ಮಿಡ್ಲ್ ಕ್ಲಾಸ್ ಕುಟುಂಬಗಳಿಗೆ ಡಿ ಮಾರ್ಟ್ ಅನ್ನೋದು ಒಂದು ಎಮೋಷನ್ ಆಗಿ ಬದಲಾಗಿದೆ. ಬಹಳ ಕಡಿಮೆ ಬೆಲೆಯಲ್ಲಿ ನಿತ್ಯ ಜೀವನದ ವಸ್ತುಗಳು ಇಲ್ಲಿ ದೊರೆಯುವುದರಿಂದ ಜನರಿಗೆ ಡಿ ಮಾರ್ಟ್ ಬಗ್ಗೆ ವಿಶೇಷ ಆಸಕ್ತಿ ಹಾಗೂ ಆಕರ್ಷಣೆ ಎಂದು ಹೇಳಬಹುದು. ದೇಶದಲ್ಲಿ ರಿಟೇಲ್ ಸೂಪರ್ ಮಾರ್ಕೆಟ್ ಚೈನ್ (Retail Super Market Chain) ಆಗಿ ಅಭಿವೃದ್ಧಿ ಹೊಂದಿರುವ ಡಿ ಮಾರ್ಟ್ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಸಾಮಾನ್ಯ ದಿನಗಳಲ್ಲಿ ಮತ್ತು ರಜಾ ದಿನಗಳಲ್ಲಿ ಡಿ ಮಾರ್ಟ್ ಗಳು ಮಧ್ಯಮ ವರ್ಗದ ಕುಟುಂಬಗಳ ಜನರಿಂದ ತುಂಬಿರುತ್ತದೆ.

ಅವೆನ್ಯೂ ಸೂಪರ್ ಮಾರ್ಟ್ಸ್ ಕಂಪನಿ ನಿರ್ವಹಣೆ ಮಾಡುತ್ತಿರುವ ಡಿ ಮಾರ್ಟ್ ಸ್ಟೋರ್ ಗಳ 2023- 24 ಆರ್ಥಿಕ ವರ್ಷದ (Economic Year) ಕೊನೆಯ ತ್ರೈಮಾಸಿಕದ ಫಲಿತಾಂಶ ಹೊರಬಂದಿದೆ. ಜನವರಿಯಿಂದ ಮಾರ್ಚ್ ವರೆಗಿನ ತ್ರೈಮಾಸಿಕ ಅವಧಿಗೆ ಸಂಬಂಧಿಸಿದ ಫಲಿತಾಂಶವನ್ನು ಸಂಸ್ಥೆಯು ಶನಿವಾರ ಬಿಡುಗಡೆ ಮಾಡಿದೆ. ಈ ಸಂಸ್ಥೆಯ ನಿಖರವಾದ ಲಾಭ 563 ಕೋಟಿ ರೂಪಾಯಿಗಳು ಎನ್ನಲಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ತನ್ನ ಆದಾಯ 460 ಕೋಟಿ ರೂಪಾಯಿ ಇತ್ತೆಂದು ಎಂದು ಸಂಸ್ಥೆ ತಿಳಿಸಿದೆ.

ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ 22.4 ಪರ್ಸೆಂಟ್ ಲಾಭ ಹೆಚ್ಚಾಗಿದೆ. ಇನ್ನೊಂದು ಕಡೆ ಕಂಪನಿಯ ಆದಾಯ ಕೂಡಾ 20 % ಹೆಚ್ಚಾಗಿದೆ, ಈಗ ಕಂಪನಿಯ ಆದಾಯ ರೂಪಾಯಿ 12,727 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಹೇಳಲಾಗಿದೆ. ತೆರಿಗೆಗಳು, ಕಂಪನಿ ಲೋನ್, ಇಎಂಐ ಗಳಂತವು ಕೆಳಗೆ ಬಂದಿದೆ, ಮಾರ್ಚ್ ತ್ರೈಮಾಸಿಕದಲ್ಲಿ ಈ ಪ್ರಮಾಣದಲ್ಲಿ ಲಾಭ ಬರುವುದಕ್ಕೆ ಕಾರಣ ಸಾಮಾನ್ಯ ವಸ್ತುಗಳು ಮತ್ತು ಬಟ್ಟೆಗಳ ವ್ಯಾಪಾರ ಹೆಚ್ಚಾಗಿದ್ದು ಎಂದು ಕಂಪನಿ ತಿಳಿಸಿದೆ.

ಕೆಲವೇ ವರ್ಷಗಳ ಹಿಂದೆ ಆರಂಭವಾದ ಡಿ ಮಾರ್ಟ್ ಸ್ಟೋರ್ ಗಳು ಕಳೆದ ಆರ್ಥಿಕ ವರ್ಷದಲ್ಲಿ 9.9 % ವೃದ್ಧಿಯನ್ನ ಕಂಡಿದ್ದು, ಒಟ್ಟು 284 ಡಿ ಮಾರ್ಟ್ ಸ್ಟೋರ್ ಇದೆ ಎನ್ನಲಾಗಿದೆ. ಇದಲ್ಲದೇ ಹೊಸದಾಗಿ 41 ಸ್ಟೋರ್ ಗಳನ್ನು ತೆರೆದಿರುವುದಾಗಿ ಸಿಬ್ಬಂದಿ ತಿಳಿಸಿದ್ದು, ಈಗ ಒಟ್ಟು ಸ್ಟೋರ್ ಗಳ ಸಂಖ್ಯೆ 365 ಕ್ಕೆ ಸೇರಿದೆ. ಪ್ರಧಾನ ಕಚೇರಿಯು ಮುಂಬೈನಲ್ಲಿದ್ದು ದೇಶದ 23 ನಗರಗಳಲ್ಲಿ ಡಿ ಮಾರ್ಟ್ ಸ್ಟೋರ್ ಗಳು ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನಗರಗಳಿಗೆ ಇದನ್ನು ವಿಸ್ತರಿಸುವುದಾಗಿ ಕಂಪನಿ ತಿಳಿಸಿದೆ.

ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಛತ್ತಿಸ್ಗಡ್, ಪಂಜಾಬ್ ರಾಜ್ಯಗಳಲ್ಲಿ 15.15 ಮಿಲಿಯನ್ ಚದರಗಳ ರಿಟೇಲ್ ಬಿಸಿನೆಸ್ ಏರಿಯಾ ಇದೆ. ಇಂತಹ ಸಕ್ಸಸ್ಅನ್ನು ಪಡೆದುಕೊಂಡಿರುವ ಡಿ ಮಾರ್ಟ್ ಕಂಪನಿಯ ಫೌಂಡರ್ ಹೆಸರು ರಾಧಾಕೃಷ್ಣನ್ ಧಮಾನಿ. ಇವರು 2002ರಲ್ಲಿ ಮೊಟ್ಟಮೊದಲ ಸ್ಟೋರ್ ಅನ್ನು ಮುಂಬೈನಲ್ಲಿ ಪ್ರಾರಂಭಿಸಿದರು. ಅದೀಗ ದೇಶ ವ್ಯಾಪಿಯಾಗಿ ಬಹಳಷ್ಟು ನಗರಗಳಲ್ಲಿ, ಪಟ್ಟಣಗಳಲ್ಲಿ ಅತಿ ದೊಡ್ಡ ಸ್ಟೋರ್ ಚೈನ್ ಆಗಿ ರೂಪಾಂತರ ಹೊಂದಿದೆ.

Leave a Comment