Brundavana Serial: ಕನ್ನಡ ಕಿರುತೆರೆಯಲ್ಲಿ ಬೃಂದಾವನ ಸೀರಿಯಲ್ (Brundavana Serial) ತನ್ನದೇ ಆದ ಒಂದು ಸ್ಥಾನವನ್ನು ಪಡೆದುಕೊಂಡು ಜನಪ್ರಿಯತೆಯನ್ನು ಪಡೆದುಕೊಂಡಿದೆ. 36 ಜನ ಇರುವ ಒಂದು ತುಂಬು ಕುಟುಂಬದ ಕಥೆ ಇದು ಎಂದು ಸೀರಿಯಲ್ ನ ಆರಂಭದಲ್ಲಿ ಪ್ರೊಮೊಗಳಲ್ಲಿ ತೋರಿಸಲಾಗಿತ್ತು. ಬಿಗ್ ಬಾಸ್ ಮನೆಗೂ ಎಂಟ್ರಿ ನೀಡಿದ್ದ ಸೀರಿಯಲ್ ಕಲಾವಿದರ ತಂಡವನ್ನು ನೋಡಿ ಪ್ರೇಕ್ಷಕರು ಸಹಾ ಅಚ್ಚರಿಯನ್ನು ಪಟ್ಟಿದ್ದರು. ಆದರೆ ಈಗ ಸೀರಿಯಲ್ ಮುಗಿಯಲಿದೆ ಎನ್ನುವ ಸುದ್ದಿ ಹರಿದಾಡಿದೆ.
ಬೃಂದಾವನ ಸೀರಿಯಲ್ ಆರಂಭವಾಗಿ ಕೇವಲ ಐದು ತಿಂಗಳು ಮಾತ್ರ ಆಗಿದೆ. ಆದರೆ ಸೀರಿಯಲ್ ಈಗ ಅಂತಿಮ ಘಟ್ಟವನ್ನು ತಲುಪಿದೆ ಎನ್ನುವುದು ಅಭಿಮಾನಿಗಳಿಗೆ ಖಂಡಿತ ಬೇಸರವನ್ನು ಮೂಡಿಸಿದೆ. ಬೃಂದಾವನ ಸೀರಿಯಲ್ ಆರಂಭದಲ್ಲೇ ನಾಯಕನ ವಿಚಾರವಾಗಿ ಎಡವಿತ್ತು. ಆರಂಭದಲ್ಲಿ ಗಾಯಕ ವಿಶ್ವನಾಥ್ ಹಾವೇರಿ (Vishwanath Haveri) ಅವರು ನಾಯಕನಾಗಿ ಕಾಣಿಸಿಕೊಂಡಿದ್ದರು.
ಆದರೆ ಅವರು ಚಿಕ್ಕ ಹುಡುಗನಂತೆ ಕಾಣ್ತಿದ್ದಾರೆ ಅಂತ ಟೀಕೆಗಳು ಬಂದ ನಂತರ ವಿಶ್ವನಾಥ್ ಅವರ ಪಾತ್ರಕ್ಕೆ ಸೋಶಿಯಲ್ ಮೀಡಿಯಾ ಮೂಲಕ ಹೆಸರನ್ನು ಮಾಡಿದ್ದ ವರುಣ್ ಆರಾಧ್ಯ (Varun Aradhya) ನಾಯಕನಾಗಿ ಎಂಟ್ರಿಯನ್ನು ನೀಡಿದರು. ಇದಕ್ಕೂ ಸಹಾ ಒಂದಷ್ಟು ಪರ ವಿರೋಧ ಮಾತುಗಳು ಕೇಳಿ ಬಂದು, ಬೃಂದಾವನ ಸೀರಿಯಲ್ ಚರ್ಚೆಗಳಿಗೆ ಕಾರಣವಾಗಿತ್ತು.
ಇನ್ನು ಮುವತ್ತಾರು ಜನ ಇರುವ ಕೂಡು ಕುಟುಂಬದ ಕಥೆ ಎಂದು ಹೇಳಲಾಗಿತ್ತಾದರೂ ಸೀರಿಯಲ್ ನಲ್ಲಿ ಕಾಣಿಸುತ್ತಿದ್ದುದ್ದು ಕೆಲವರು ಮಾತ್ರವೇ ಅನ್ನೋದು ವಾಸ್ತವ. ಉಳಿದವರು ಕಥೆಯಲ್ಲೇ ಇಲ್ಲ ಅಂದ್ಮೇಲೆ ಪ್ರೊಮೊದಲ್ಲಿ ತೋರಿಸಿದ್ದು ಸುಮ್ಮನೆ ಅಷ್ಟೇನಾ ಎನ್ನುವ ಮಾತುಗಳು ಸಹಾ ಹೇಳಿ ಬಂದವು. ಈಗ ಇವೆಲ್ಲವುಗಳ ನಡುವೆ ಸೀರಿಯಲ್ ಮುಗೀತಿದೆ ಅನ್ನೋ ಸುದ್ದಿ ಮತ್ತೊಂದು ಚರ್ಚೆಗೆ ಕಾರಣವಾಗಿದೆ.