Bigg Boss OTT 3: ಲೈಟ್ ಆಫ್, ಖುಲ್ಲಂ‌ ಖುಲ್ಲಾ ರೊಮ್ಯಾನ್ಸ್; ಬಿಗ್ ಬಾಸ್ ಮನೇಲಿ ಇದೆಂತ ಅಸಹ್ಯ ಎಂದ ನೆಟ್ಟಿಗರು

Written by Soma Shekar

Published on:

---Join Our Channel---

Bigg Boss OTT 3: ಹಿಂದಿ ಬಿಗ್ ಬಾಸ್ (Bigg Boss OTT 3) ರಿಯಾಲಿಟಿ ಶೋ ಟಿವಿಯಲ್ಲೇ ಆಗಲೀ, ಓಟಿಟಿಯಲ್ಲೇ ಆಗಲೀ ಪ್ರಸಾರ ಆರಂಭಿಸಿದ ಮೇಲೆ ಸಾಕಷ್ಟು ಸುದ್ದಿಯಾಗುತ್ತದೆ. ಚರ್ಚೆಗಳಿಗೆ ಕಾರಣವಾಗುತ್ತದೆ ಮತ್ತು ವಿವಾದಗಳನ್ನು ಸಹಾ ಹುಟ್ಟು ಹಾಕುತ್ತದೆ. ಪ್ರಸ್ತುತ ಹಿಂದಿ ಬಿಗ್ ಬಾಸ್ ನ ಓಟಿಟಿಯ ಮೂರನೇ ಸೀಸನ್ ನಡೆಯುತ್ತಿದ್ದು, ಬಿಗ್ ಬಾಸ್ ಮನೇಲಿ ನಡೀತಿರೋ ಬೆಳವಣಿಗೆಗಳು ಶಾಕಿಂಗ್ ಎನಿಸಿದೆ. ಟಿ ಆರ್ ಪಿ ಗಾಗಿ ಇದೆಲ್ಲಾ ನಡೀತಿದೆ ಅನ್ನೋದು ಅನೇಕರ ಅಭಿಪ್ರಾಯ.

ಯೂಟ್ಯೂಬರ್, ಇಬ್ಬರು ಹೆಂಡಿರ ಮುದ್ದಿನ ಗಂಟ ಅರ್ಮಾನ್ ಮಲಿಕ್ (Arman Malik) ತಮ್ಮ ಪತ್ನಿಯರ ಜೊತೆಗೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲೂ ಅವರ ಒಬ್ಬ ಪತ್ನಿ ಈಗಾಗಲೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದು, ಅರ್ಮಾನ್ ಈಗ ಮತ್ತೊಬ್ಬ ಹೆಂಡತಿಯ ಜೊತೆಗೆ ಖುಲ್ಲಂ ಖುಲ್ಲಾ ರೋಮ್ಯಾನ್ಸ್ ಮಾಡ್ಕೊಂಡು ಸುದ್ದಿಯಾಗಿದ್ದಾರೆ.

ಅರ್ಮಾನ್ ತಮ್ಮ ಎರಡನೇ ಹೆಂಡತಿ ಕೃತಿಕಾ (Krutika) ಜೊತೆಗೆ ಸರಸ, ಸಲ್ಲಾಪದಲ್ಲಿ ತೊಡಗಿರುವ ವೀಡಿಯೋ ತುಣುಕುಗಳು ವೈರಲ್ ಆಗಿದ್ದು ಇದು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಬಾತ್ ರೂಂ ಮತ್ತು ಸ್ಮೋಕಿಂಗ್ ಝೋನ್ ಹೊರತಾಗಿ ಎಲ್ಲಾ ಕಡೆ ಕ್ಯಾಮರಾ ಇರುತ್ತೆ ಅನ್ನೋದು ಎಲ್ಲಾ ಸ್ಪರ್ಧಿಗಳಿಗೆ ಗೊತ್ತಿರುವ ವಿಚಾರವಾಗಿದೆ. ಈ ವಿಚಾರ ಸ್ಪರ್ಧಿಯಾಗಿರುವ ಅರ್ಮಾನ್ ಮಲಿಕ್ ಗೆ ಸಹಾ ಗೊತ್ತೇ ಇದೆ.

ಆದರೂ ಅರ್ಮಾನ್ ಮಲಿಕ್ ಬಿಗ್ ಬಾಸ್ ಮನೆಯಲ್ಲಿ ಲೈಟ್ ಗಳು ಆಫ್ ಆದ ಮೇಲೆ ಹಾಸಿಗೆ ಮೇಲೆ ಎರಡನೇ ಪತ್ನಿಯ ಜೊತೆಗೆ ರೊಮ್ಯಾಂಟಿಕ್ ಮೂಡ್ ಗೆ ಜಾರಿದ್ದು ಈ ದೃಶ್ಯಗಳನ್ನು ನೋಡಿದ ನೆಟ್ಟಿಗರು ಇವರಿಗೆಲ್ಲಾ ನಾಚಿಕೆ ಅನ್ನೋದೇ ಇಲ್ವಾ ಅಂತ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಬಿಗ್ ಬಾಸ್ ಓಟಿಟಿಯ ಈ ಹೊಸ ಸೀಸನ್ ಅನ್ನು ಅನಿಲ್ ಕಪೂರ್ ನಿರೂಪಣೆ ಮಾಡ್ತಿದ್ದು, ಅನೇಕರು ಸಲ್ಮಾನ್ ಖಾನ್ ಅವರನ್ನ ಮಿಸ್ ಮಾಡಿಕೊಳ್ತಿದ್ದಾರೆ. ಅದೇ ಕಾರಣಕ್ಕೆ ಶೋನ ಟಿ ಆರ್ ಪಿ ಹೆಚ್ಚಿಸಲು ಬಿಗ್ ಬಾಸ್ ಶೋ ಒಳಗೆ ಸ್ಪರ್ಧಿಗಳ ಕೈಯಲ್ಲಿ ಇಂತಹ ಕೆಲಸಗಳನ್ನು ಮಾಡಿಸಲಾಗುತ್ತಿದೆ ಎನ್ನುವ ಮಾತುಗಳು ಸಹಾ ಹರಿದಾಡಿದೆ.

Leave a Comment