Kalki 2898 AD: ಕಲ್ಕಿ ಸಿನಿಮಾ ಈ ಹಾಲಿವುಡ್ ಸಿನಿಮಾಗಳಿಂದ ಸ್ಪೂರ್ತಿ ಪಡೆದಿದ್ಯಾ? ನೆಟ್ಟಿಗರು ಹೀಗೆ ಹೇಳಿದ್ಯಾಕೆ?

Written by Soma Shekar

Published on:

---Join Our Channel---

Kalki 2898 AD: ಕಲ್ಕಿ 2898 AD (Kalki 2898 AD) ಬೆಳ್ಳಿ ತೆರೆಯ ಮೇಲೆ ಕಮಾಲ್ ಮಾಡ್ತಿದೆ. ಸಿನಿಮಾ ನೋಡಿದವರು ಇದೊಂದು ಹೊಸ ಅನುಭವ ಎಂದಿದ್ದಾರೆ. ಅದ್ದೂರಿ ತಾರಾಗಣ, ಹಾಲಿವುಡ್ ಸಿನಿಮಾಗಳಂತಹ ವಿಶ್ಯುಯಲ್ ಎಫೆಕ್ಟ್ಸ್ ನೋಡಿ ಸಿನಿ ಪ್ರೇಮಿಗಳು ಫಿದಾ ಆಗಿದ್ದಾರೆ. ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ ಹಾಸನ್, ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿರುವ ಕಲ್ಕಿ ಒಂದು ಸೈ-ಫೈ ಸಿನಿಮಾ ಆಗಿ ಭರ್ಜರಿ ಯಶಸ್ಸಿನ ಕಡೆಗೆ ಸಾಗುತ್ತಿದೆ.

ಈ ಸಿನಿಮಾವನ್ನು ಬೆಳ್ಳಿ ತೆರೆಯ ಮೇಲೆ ನೋಡಿದ ಒಂದಷ್ಟು ಜನ ಸಿನಿ ಪ್ರೇಮಿಗಳು ಸಿನಿಮಾವನ್ನು ಹಾಡಿ ಹೊಗಳುವಾಗಲೇ ಈ ಸಿನಿಮಾ ಹಾಲಿವುಡ್ ನ ಕೆಲವು ಸಿನಿಮಾಗಳಿಂದ ಸ್ಪೂರ್ತಿಯನ್ನು ಪಡೆದಿದೆ ಎನ್ನುವ ಮಾತುಗಳನ್ನು ಸಹಾ ಹೇಳುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ಹಾಗಾದರೆ ಯಾವುದು ಆ ಸಿನಿಮಾಗಳು ಅನ್ನೋದನ್ನ ತಿಳಿಯೋಣ ಬನ್ನಿ.

ಗಾರ್ಡಿಯನ್ಸ್ ಆಫ್ ಗ್ಯಾಲಕ್ಸಿ (Guardians Of Galaxy), ಕಲ್ಕಿಯಲ್ಲಿ ಪ್ರಭಾಸ್ ಬೌಂಟಿ ಹಂಟರ್ ಲುಕ್ ಗಾರ್ಡಿಯನ್ಸ್ ಆಫ್ ಗ್ಯಾಲಕ್ಸಿಯ ಕ್ರಿಸ್ ಪ್ರ್ಯಾಟ್ಸ್ ಪೀಟರ್ ಕ್ವಿಲ್ ಲುಕ್ ನಿಂದ ಸ್ಪೂರ್ತಿಯನ್ನು ಪಡೆದಿದೆ ಎನ್ನಲಾಗಿದೆ.

ಅವೆಂಜರ್ಸ್, ಇನ್ಫಿನಿಟಿ ವಾರ್ (Avengers Infinity War ) ಸಿನಿಮಾದಲ್ಲಿ ವಕಾಂಡ ನಗರವನ್ನು ಒಂದು ಅನಂತವಾದ ಅದೃಶ್ಯ ಗೋಡೆ ರಕ್ಷಣೆ ಮಾಡುವುದನ್ನು ನೋಡಬಹುದು. ಅದರಂತೆ ಕಲ್ಕಿಯಲ್ಲಿ ಶಂಭಾಲ ನಗರಕ್ಕೂ ಸಹಾ ಅಂತದೇ ಒಂದು ರಕ್ಷಣೆ ಇರುವುದನ್ನು ನೋಡಬಹುದು.

ಸ್ಟಾರ್ ವಾರ್ಸ್ (Star Wars), ಸಿನಿಮಾದಲ್ಲಿ ಪಾತ್ರಗಳು ಹೋರಾಟದ ವೇಳೆ ಬಳಸುವ ಬೆಳಕಿನ ಆಯುಧಗಳು ಪ್ರಮುಖ ಆಕರ್ಷಣೆಯಾಗಿದ್ದು, ಕಲ್ಕಿಯಲ್ಲಿ ಸಹಾ ಅಂತಹ ಬೆಳಕಿನ ಆಯುಧಗಳನ್ನು ನಾವು ನೋಡಬಹುದಾಗಿದೆ.

ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್ (Mad Max Fury Road) ಸಿನಿಮಾದಲ್ಲಿನ ಒಂದು ಚೇಸಿಂಗ್ ದೃಶ್ಯಕ್ಕೆ ಕಲ್ಕಿ ಸಿನಿಮಾದಲ್ಲಿನ ಚೇಸಿಂಗ್ ದೃಶ್ಯ ತೀರಾ ನಿಕಟವಾದ ಸಾಮ್ಯತೆಯನ್ನು ಹೊಂದಿದೆ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ.

Leave a Comment