Entertainment

Priyanka Singh: ಒಂದು ನೈಟ್ ಗೆ ಎಷ್ಟು ಅಂದವನಿಗೆ ಬೆಚ್ಚಿ ಬೀಳೋ ಉತ್ತರ ಕೊಟ್ಟ ಬಿಗ್ ಬಾಸ್ ಪ್ರಿಯಾಂಕ

Priyanka Singh: ತೆಲುಗಿನ ಬಿಗ್ ಬಾಸ್ ಸೀಸನ್ ಐದರಲ್ಲಿ (Bigg Boss Telugu 5) ಸ್ಪರ್ಧಿಸಿದ್ದ ಪ್ರಿಯಾಂಕ ಸಿಂಗ್ (Priyanka Singh) ತೃತೀಯ ಲಿಂಗಿ ಅನ್ನೋ ವಿಚಾರವನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ತೃತೀಯ ಲಿಂಗಿಯಾದರೂ ಯಾವುದೇ ನಟಿಗಿಂತ ಅಂದದಲ್ಲಿ ಹಿಂದೆ ಇಲ್ಲ. ಪ್ರಿಯಾಂಕ ಸಿಂಗ್ ನ ಮೊದಲ ಬಾರಿಗೆ ನೋಡಿದವರಿಗೆ ಅವರ ಅಂದವೇ ಆಕರ್ಷಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ತೆಲುಗಿನ ಕಿರುತೆರೆಯ ಪ್ರೇಕ್ಷಕರಿಗೆ ಪ್ರಿಯಾಂಕ ಸಿಂಗ್ ಚಿರಪರಿಚಿತ ಏಕೆಂದರೆ ಮೊದಲು ಸಾಯಿ ತೇಜ ಆಗಿದ್ದ ದಿನಗಳಲ್ಲಿ ಹೆಣ್ಣಿನ ವೇಷ ತೊಟ್ಟು ಪ್ರಿಯಾಂಕ ಜಬರ್ದಸ್ತ್ (Jabardast) ಕಾಮಿಡಿ ಶೋ ನಲ್ಲಿ ಭಾಗವಹಿಸುತ್ತಿದ್ದರು.

ಅನಂತರದ ದಿನಗಳಲ್ಲಿ ಸಾಯಿ ತೇಜ (Sai Teja) ಶಸ್ತ್ರ ಚಿಕಿತ್ಸೆ ಮೂಲಕ ಹೆಣ್ಣಾಗಿ ಬದಲಾಗಿ ಹೆಸರನ್ನ ಪ್ರಿಯಾಂಕ ಸಿಂಗ್ ಎಂದು ಬದಲಿಸಿಕೊಂಡರು. ಸಿನಿಮಾ ರಂಗದಲ್ಲಿ ಮಿಂಚಬೇಕೆಂದು ಹೆಣ್ಣಾಗಿ ಬದಲಾದ ಪ್ರಿಯಾಂಕಾಗೆ ಶಸ್ತ್ರ ಚಿಕಿತ್ಸೆ ನಂತರ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಸಮಸ್ಯೆಗಳು ಎದುರಾಗಿದ್ದು ಮಾತ್ರವೇ ಅಲ್ಲದೇ ಪ್ರಿಯಾಂಕ ಕೆಲವು ದಿನಗಳ ಕಾಲ ಮಾಧ್ಯಮಗಳಿಂದ ದೂರವೇ ಉಳಿದಿದ್ದರು.

ಅಲ್ಲದೇ ಪ್ರಿಯಾಂಕಾಗೆ ಅವಕಾಶಗಳು ದೊರೆಯದೇ ಅವರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು. ಆ ದಿನಗಳಲ್ಲೇ ಪ್ರಿಯಾಂಕಾಗೆ ಬಿಗ್ ಬಾಸ್ ಗೆ ಅವಕಾಶ ಅರಸಿ ಬಂತು. ಬಿಗ್ ಬಾಸ್ ನಂತರ ಇನ್ನಷ್ಟು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡರು ಪ್ರಿಯಾಂಕ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿರುವ ಪ್ರಿಯಾಂಕ ಇತ್ತೀಚಿಗೆ ಇನ್ಸ್ಟಾಗ್ರಾಂ ಲೈವ್ (Instagram Live) ನಲ್ಲಿರುವಾಗ ನಡೆದ ಒಂದು ವಿಷಯ ಈಗ ವೈರಲ್ ಆಗಿದೆ.

ಲೈವ್ ನಲ್ಲಿ ಇರೋವಾಗ ನೆಟ್ಟಿಗರು ಒಂದಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ವೇಳೆ ಒಬ್ಬಾತನು, ನೀನು ನಂಜೊತೆ ಡೇಟಿಂಗ್ ಮಾಡ್ತೀಯಾ? ಒಂದು ರಾತ್ರಿಗೆ ಎಷ್ಟು ತಗೊಳ್ತೀಯಾ? ಅಂತ ಕೇಳಿದ್ದಾನೆ. ಇದನ್ನ ನೋಡಿದ ಪ್ರಿಯಾಂಕ ಕೆಂಡಾಮಂಡಲವಾಗಿದ್ದಾರೆ. ಅಲ್ಲದೇ ಲೈವ್ ನಲ್ಲೇ ಕೆಟ್ಟದಾಗಿ ಪ್ರಶ್ನೆ ಕೇಳಿದವನಿಗೆ ಶಾಕ್ ಆಗುವಂತಹ ಉತ್ತರವನ್ನು ಸಹಾ ನೀಡಿದ್ದಾರೆ ಪ್ರಿಯಾಂಕ.

ನನಗೆ ಏನು ಹೇಳಬೇಕು ಅಂತ ಗೊತ್ತಾಗ್ತಿಲ್ಲ. ಒಂದು ಕೆಲಸ ಮಾಡು ನಿಮ್ಮ ಅಪ್ಪ ನಿಮ್ಮ ಅಮ್ಮನ ಜೊತೆ ಆ ಕೆಲಸವನ್ನ ಮಾಡೋಕೆ ಎಷ್ಟು ಕೊಟ್ರೋ ಅದನ್ನ ಕೇಳಿ ತಿಳ್ಕೊಂಡು, ಅಷ್ಟನ್ನೇ ನನಗೂ ಕೊಡು ಅನ್ನೋ ಮಾತನ್ನ ಹೇಳಿದ್ದಾರೆ. ಪ್ರಿಯಾಂಕ ಶೇರ್ ಮಾಡಿದ ಆ ವ್ಯಕ್ತಿಯ ಪ್ರಶ್ನೆಯ ಸ್ಕ್ರೀನ್ ಶಾಟ್ ಮತ್ತು ಪ್ರಿಯಾಂಕ ಕೊಟ್ಟ ಖಡಕ್ ಉತ್ತರ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದೆ.

Soma Shekar

Recent Posts

Sai Pallavi: ಮಾಡಲ್ಲ, ಮಾಡಲ್ಲ ಅಂತಾನೇ ಗ್ರೀನ್ ಸಿಗ್ನಲ್ ಕೊಟ್ಟಿದ್ಯಾಕೆ? ಶಾಕ್ ನಲ್ಲಿ ಸಾಯಿಪಲ್ಲವಿ ಫ್ಯಾನ್ಸ್

Sai Pallavi: ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಸಾಯಿ ಪಲ್ಲವಿ (Sai Pallavi) ಈಗ ಪ್ಯಾನ್ ಇಂಡಿಯಾ ಸ್ಟಾರ್…

59 mins ago

Rashmika Mandanna: ಅಟಲ್ ಸೇತುವನ್ನು ಹೊಗಳಿದ ರಶ್ಮಿಕಾ ಮೇಲೆ ಸಿಡಿದೆದ್ದ ಕೇರಳ ಕಾಂಗ್ರೆಸ್ ಘಟಕ

Rashmika Mandanna: ಸೌತ್ ಬ್ಯೂಟಿ ರಶ್ಮಿಕಾ (Rashmika Mandanna) ಮತ್ತೊಮ್ಮೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಈ ಬಾರಿ ನಟಿ ಯಾವುದೇ ಸಿನಿಮಾದ…

3 hours ago

Prabhas: ಅವರಿಬ್ಬರು ಸಲಿಂಗಕಾಮಿಗಳು, ಲಂಡನ್ ನಲ್ಲಿ ನನ್ನ ಗಂಡನ ಜೊತೆ, ಸುಚಿತ್ರಾ ಶಾಕಿಂಗ್ ಹೇಳಿಕೆ

Suchithra : ಗಾಯಕಿ ಸುಚಿತ್ರಾ ರಾಮದುರೈ (Suchithra) ಅವರು ಮೊನ್ನೆ ಮೊನ್ನೆಯಷ್ಟೇ ತಮ್ಮ ಮಾಜಿ ಪತಿ ತಮಿಳು ನಟ ಕಾರ್ತಿಕ್…

17 hours ago

Prabhas: ವಿಶೇಷ ವ್ಯಕ್ತಿ, ವೈರಲ್ ಆಗ್ತಿದೆ ಪ್ರಭಾಸ್ ಪೋಸ್ಟ್, ಥ್ರಿಲ್ ಆದ ಫ್ಯಾನ್ಸ್ , ಶೀಘ್ರದಲ್ಲೇ ತಿಳಿಸ್ತೀನಿ ಅಂದ ನಟ

Prabhas : ಬಾಹುಬಲಿ (Bahubali) ಸಿನಿಮಾ ಖ್ಯಾತಿಯ ನಟ ಪ್ರಭಾಸ್ (Prabhas) ವಿಚಾರ ಬಂದಾಗಲೆಲ್ಲಾ ಅಲ್ಲಿ ಒಂದು ವಿಷಯ ಹೆಚ್ಚು…

18 hours ago

Puttakkana Makkalu: ಸಹನಾ ಸತ್ತಿಲ್ಲ, ಕೊನೆಗೂ ಸಿಕ್ಕೇ ಬಿಡ್ತು ಸುಳಿವು; ಸುಮ ಮಾತಿಗೆ ಎಲ್ಲರೂ ಶಾಕ್ !

Puttakkana Makkalu: ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಪುಟ್ಟಕ್ಕನ ಮಕ್ಕಳು (Puttakkana Makkalu) ಕಳೆದ ಕೆಲವು ದಿನಗಳಿಂದಲೂ ಸಹಾ ಸಹನಾ…

21 hours ago

Kangana Ranaut: ಎಮೆರ್ಜೆನ್ಸಿ ಸಿನಿಮಾಕ್ಕಾಗಿ ಕಾಯ್ತಿದ್ದ ಫ್ಯಾನ್ಸ್ ಗೆ ದೊಡ್ಡ ಶಾಕ್ ಕೊಟ್ಟ ಕಂಗನಾ ರಣಾವತ್

Kangana Ranaut: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಸದ್ಯಕ್ಕೆ ರಾಜಕೀಯದ ವಿಚಾರವಾಗಿ ಭರ್ಜರಿ ಸುದ್ದಿಯಲ್ಲಿದ್ದಾರೆ. ಮೊನ್ನೆಯಷ್ಟೇ ನಟಿ…

23 hours ago

This website uses cookies.