Prashanth Sambargi: ಸಸ್ಯಾಹಾರಿ ನಟಿಗೆ ಮಾಂಸ ತಿನ್ನಿಸಿ ದುರ್ಯೋಧನನ ಹಾಗೆ ನಗ್ತಿದ್ದ ಎಂದ ಪ್ರಶಾಂತ್ ಸಂಬರ್ಗಿ

Written by Soma Shekar

Published on:

---Join Our Channel---

Prashanth Sambargi: ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಸದ್ಯಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊ ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು ಅವರ ವಿಚಾರಣೆ ಕಳೆದ ಕೆಲವು ದಿನಗಳಿಂದಲೂ ನಡೆಯುತ್ತಲಿದೆ.‌ ಒಂದು ಕಡೆ ತನಿಖೆ ನಡೆಯುತ್ತಿದ್ದರೆ ಮತ್ತೊಂದು ಕಡೆ ಕೆಲವೊಂದು ಮಾದ್ಯಮಗಳ ಸುದ್ದಿಗಳಲ್ಲಿ ಹೊಸ ಹೊಸ ಆರೋಪಗಳ ವಿಚಾರವಾಗಿ ಸುದ್ದಿಗಳಾಗುತ್ತಿವೆ. ಇವೆಲ್ಲವುಗಳ ನಡುವೆ ಬಿಗ್ ಬಾಸ್ ನ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರ್ಗಿ (Prashanth Sambargi) ದರ್ಶನ್ ಕುರಿತಾಗಿ ಒಂದಷ್ಟು ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಸ್ಪರ್ಧಿಯಾಗಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ, ಸಾಮಾಜಿಕ ಹೋರಾಟಗಾರ ಎಂಬುದಾಗಿ ಗುರ್ತಿಸಿಕೊಂಡಿರುವ ಪ್ರಶಾಂತ್ ಸಂಬರ್ಗಿ ಈಗಾಗಲೇ ನಟ ದರ್ಶನ್ ಕುರಿತಾಗಿ ಒಂದಷ್ಟು ಹೇಳಿಕೆಗಳನ್ನು ನೀಡಿ ಚರ್ಚೆಗೆ ಕಾರಣರಾಗಿದ್ದಾರೆ, ಈಗ ಅವರ ಮತ್ತೊಂದು ಹೇಳಿಕೆ ವೈರಲ್ ಆಗ್ತಿದೆ.

ಹಿಂ ಸೆ ಮತ್ತು ಕೊ ಲೆ ಮಾಡೋ ಮೊದಲು ಅಮಾಯಕ ರೇಣುಕಾ ಸ್ವಾಮಿ ನಾನು ಲಿಂಗಾಯತ ಹಾಗೂ ಸಸ್ಯಾಹಾರಿ ಎಂದು ಗೋಗರೆದರೂ ಸಹಾ ಕೇಳದೇ ಚಿಕನ್ ಪೀಸ್ ಅನ್ನು ಅವನ ಬಾಯಿಗೆ ತುರುಕಿದನು ಈ ರೌಡಿ ಬಾಸ್. ಅದೇ ರೀತಿ ಮೂರು ವರ್ಷಗಳ ಹಿಂದೆ ಒಬ್ಬ ಖ್ಯಾತ ಕನ್ನಡ ಚಲನಚಿತ್ರ ನಟಿ ಇವನೊಂದಿಗೆ ಸಿನಿಮಾ ಮಾಡುತ್ತಿದ್ದಳು.

ಈ ವೇಳೆಯಲ್ಲಿ ತಾನು ಸಸ್ಯಾಹಾರಿ ಮತ್ತು ಸಾತ್ವಿಕ ಊಟ ಬೇಕು ಎಂದು ಎಂದು ಕೇಳಿದಾಗಲೂ ಅವಳ ಮಾತನ್ನು ಲೆಕ್ಕಿಸದೇ ಈ ದೈತ್ಯಾಕಾರನ ಸೂಚನೆಯಂತೆ ಮಧ್ಯಾಹ್ನದ ಊಟದಲ್ಲಿ ಮಾಂಸವನ್ನು ಬೆರೆಸಿ ನೀಡಲಾಯಿತು. ಇವಳು ಅದನ್ನು ತಿನ್ನುವಾಗ ಈ ದುರಾತ್ಮ‌ ದುರ್ಯೋಧನನಂತೆ ಗಹಗಹಿಸಿ ನಕ್ಕನಂತೆ ಎಂದು ಹೇಳಿದ್ದಾರೆ.

Leave a Comment