Chitral Rangaswamy: ಚಿತ್ರದುರ್ಗದ ರೇಣುಕಾ ಸ್ವಾಮಿ (Renuka Swamy) ಪ್ರಕರಣ ಇಡೀ ದೇಶದಲ್ಲಿ ದೊಡ್ಡ ಸುದ್ದಿಯಾಗಿದೆ. ರೇಣುಕಾ ಸ್ವಾಮಿ ಪವಿತ್ರ ಗೌಡ (Pavithra Gowda) ಅವರಿಗೆ ಬಹಳ ಕೆಟ್ಟದಾಗಿ ಮೆಸೇಜ್ ಗಳನ್ನು ಕಳುಹಿಸಿದ್ದನು ಎನ್ನುವ ಕಾರಣಕ್ಕೆ ನಟ ದರ್ಶನ್ (Darshan) ಅವರ ಸೂಚನೆಯಂತೆ ಅವರ ಆಪ್ತರು ರೇಣುಕಾ ಸ್ವಾಮಿಯನ್ನು ಕರೆತಂದು ಥಳಿಸಿದ್ದರು ಈ ವೇಳೆ ಆತ ಮೃತಪಟ್ಟಿದ್ದಾನೆ ಎನ್ನುವುದು ಪೊಲೀಸರು ಹೇಳಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ 16 ಜನ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಮಾಧ್ಯಮಗಳಲ್ಲಿ ಈ ಕುರಿತಾಗಿ ಪ್ರತಿದಿನವೂ ಸಾಕಷ್ಟು ಸುದ್ದಿಗಳಾಗಿವೆ ಮತ್ತು ಚರ್ಚೆಗಳು ಆಗುತ್ತಿವೆ.
ಇವೆಲ್ಲವುಗಳ ಬೆನ್ನಲ್ಲೇ ಬಿಗ್ ಬಾಸ್ ಖ್ಯಾತಿಯ ಬಾಡಿ ಬಿಲ್ಡರ್ ಚಿತ್ರಾಲ್ ರಂಗಸ್ವಾಮಿ (Chitral Rangaswamy) ರೇಣುಕಾ ಸ್ವಾಮಿ ಕುರಿತಾಗಿ ಹೊಸ ವಿಚಾರವೊಂದನ್ನು ಹೇಳಿದ್ದು, ತಮಗೂ ಕೂಡ ರೇಣುಕಾ ಸ್ವಾಮಿಯ ಫೇಕ್ ಅಕೌಂಟ್ ನಿಂದ ಕೆಟ್ಟದಾಗಿ ಮೆಸೇಜ್ ಗಳು ಬಂದಿತ್ತು ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ. ಚಿತ್ರಾಲ್ ರಂಗಸ್ವಾಮಿ ಬಿಗ್ ಬಾಸ್ ಕನ್ನಡ ಸೀಸನ್ ಹತ್ತರಲ್ಲಿ ದೊಡ್ಮನೆಯನ್ನ ಪ್ರವೇಶಿಸುವ ಪ್ರಯತ್ನ ಮಾಡಿದ್ದರು.
ಆದರೆ ವೇದಿಕೆಯಲ್ಲಿ ಲೈವ್ ಆಡಿಯನ್ಸ್ ಕಡೆಯಿಂದ ನಿರೀಕ್ಷಿತ ಮಟ್ಟದ ವೋಟುಗಳು ಸಿಗದ ಕಾರಣ ವೇದಿಕೆಯಿಂದಲೇ ಶೋನಿಂದ ಹೊರಗೆ ಬಂದಿದ್ದರು. ಅನಂತರ ಮಾದ್ಯಮಗಳಲ್ಲಿ ಅವರು ಆಯೋಜಕರ ಕುರಿತಾಗಿ ಸಾಕಷ್ಟು ಬೇಸರವನ್ನು ಹೊರಹಾಕಿದ್ದರು. ಆ ವೀಡಿಯೋಗಳು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಅವರು ಇನ್ಸ್ಟಾಗ್ರಾಮ್ ನಲ್ಲಿ ಒಂದು ವೀಡಿಯೋ ಮಾಡಿ ರೇಣುಕಾ ಸ್ವಾಮಿ ಘಟನೆಯ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಎಲ್ಲರಿಗೂ ನಮಸ್ಕಾರ, ಸದ್ಯ ಯಾವ ವಿಚಾರ ಚರ್ಚೆಯಲ್ಲಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಎಲ್ಲರಿಗೂ ಬೇಸರವಾಗಿದೆ. ನಾನು ಯಾರಿಗೂ ಸಪೋರ್ಟ್ ಮಾಡೋದಕ್ಕೆ ಬಂದಿಲ್ಲ. ಆ ದೇವರು ರೇಣುಕಾ ಸ್ವಾಮಿ ಕುಟುಂಬಕ್ಕೆ ಧೈರ್ಯವನ್ನು ಕೊಡಲಿ. ಆದರೆ ರೇಣುಕಾ ಸ್ವಾಮಿ ಇದಕ್ಕೂ ಮುನ್ನ ಇದೇ ರೀತಿ ಕೆಲವರಿಗೆ ಕೆಟ್ಟ ಮೆಸೇಜ್ ಕಳಿಸಿದ್ದರು. ಮಾರ್ಚ್ ನಲ್ಲಿ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಗೌತಮ್ಕೆಎಸ್_1990 ಎನ್ನುವ ಹೆಸರಿನಲ್ಲಿ ರೇಣುಕಾ ಸ್ವಾಮಿ ಅವರದು ಫೇಕ್ ಅಕೌಂಟಿತ್ತು ಎಂದು ನಾನು ಒಂದು ನ್ಯೂಸ್ ನಲ್ಲಿ ನೋಡಿದೆ. ಈ ಅಕೌಂಟ್ ನಿಂದ ಅದೇ ರೀತಿಯ ಕೆಟ್ಟ ಮೆಸೇಜ್ ಗಳನ್ನು ಇನ್ನು ಸಾಕಷ್ಟು ಜನರಿಗೆ ಕಳಿಸಿದ್ದರಂತೆ. ನನಗೆ ಆಶ್ಚರ್ಯ ಆಯ್ತು ನಾನು ಅದರ ಸ್ಕ್ರೀನ್ ಶಾಟ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡರೆ ತಪ್ಪಾಗಿತ್ತೋ, ಹಾಗಾಗಿ ಹಾಕಲಿಲ್ಲ.
ನನಗೆ ಆ ರೀತಿ ಮ ರ್ಮಾಂ ಗದ ಚಿತ್ರ ಆಗಲೀ, ಬೆತ್ತಲೆ ಚಿತ್ರವಾಗಲೀ, ಅಥವಾ ಹಸ್ತ ಮೈಥುನ ವೀಡಿಯೋ ಆಗಲೀ ಬಂದರೆ ಕೂಡಲೆ ಅಕೌಂಟ್ ಬ್ಲಾಕ್ ಮಾಡ್ತೀನಿ. ನನಗೆ ಈ ಅಕೌಂಟ್ ನೋಡಿದಾಗ ಎಲ್ಲೋ ನೋಡಿದ್ದೀನಲ್ಲ ಅನಿಸಿತು. ನನ್ನ ಇನ್ಸ್ಟಾಗ್ರಾಮ್ ಬ್ಲಾಕ್ ಲಿಸ್ಟ್ ನಲ್ಲಿ ನೋಡಿದಾಗ ಈ ಅಕೌಂಟ್ ಇದೆ ಎಂಬುದಾಗಿ ಚಿತ್ರಾಲ್ ರಂಗಸ್ವಾಮಿಯವರು ತಮ್ಮ instagram ಅಕೌಂಟ್ ನ ಬ್ಲಾಕ್ ಲಿಸ್ಟ್ ನ ಸ್ಕ್ರೀನ್ ಶಾಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.
ಇಷ್ಟು ದಿನ ನಾನು ಸುಮ್ಮನೆ ಇದ್ದೆ. ಆದರೆ ಇದನ್ನು ನೋಡಿದ ಮೇಲೆ ಹೇಳಬೇಕು ಎಂದು ಬಂದೆ. ಭಯ ಅನಿಸಿತು, ಬೇಸರವಾಗುತ್ತದೆ. ಅಂತಹ ಸುಂದರ ಹೆಂಡತಿ ಇರರುವಾಗ ಈ ರೀತಿ ಸರೀನಾ ? ಎನಿಸುತ್ತದೆ. ನನಗೆ ಪ್ರತಿದಿನ ಇಂತಹ ಸಾಕಷ್ಟು ಕೆಟ್ಟ ಮೆಸೇಜ್, ಟ್ರೋಲ್ ಎದುರಾಗುತ್ತವೆ ಎನ್ನುವ ಮಾತುಗಳನ್ನು ಸಹಾ ಅವರ ಹೇಳಿದ್ದಾರೆ.