Sarfira: ಫ್ರೀ ಟೀ, ಫ್ರೀ ಸಮೋಸ ಕೊಡ್ತೀವಿ ಅಂದ್ರು ಸಿನಿಮಾ ನೋಡ್ತಿಲ್ಲ ಜನ, ಅಕ್ಷಯ್ ಕುಮಾರ್ ಸಿನಿಮಾಕ್ಕೆ ಎಂತಾ ದುರ್ಗತಿ

Written by Soma Shekar

Published on:

---Join Our Channel---

Sarfira: ಬಾಲಿವುಡ್ ನಲ್ಲಿ (Bollywood) ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ, ಬೇರೆಲ್ಲಾ ನಟರಿಗಿಂತ ಹೆಚ್ಚು ಬ್ಯುಸಿಯಾಗಿರುವ ನಟ ಎಂದರೆ ಅಕ್ಷಯ್ ಕುಮಾರ್ (Akshay Kumar). ಆದರೆ ಇತ್ತೀಚಿನ ವರ್ಷಗಳಲ್ಲಿ ನಟನಿಗೆ ಅದೃಷ್ಟ ಕೈಕೊಟ್ಟ ಹಾಗಿದೆ. ಬಿಡುಗಡೆ ಆದ ಸಿನಿಮಾಗಳೆಲ್ಲಾ ನೆಲಕಚ್ಚುತ್ತಿದೆ. ಗೆಲುವು ಅನ್ನೋದು ನಟನ ಪಾಲಿಗೆ ದೂರದ ಮಾತಾಗಿದೆ. ಈಗ ನಟನ ಹೊಸ ಸಿನಿಮಾ ಸರ್ಫಿರಾ (Sarfira) ತೆರೆಗೆ ಬಂದಿದೆ. ಆದರೆ ಸಿನಿಮಾಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಾಕ್ಸಾಫೀಸಿನಲ್ಲಿ ಸರ್ಫಿರಾ ಕಳಪೆ ಕಲೆಕ್ಷನ್ ಮಾಡಿದೆ. ಕೋಟಿಗಳ ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾ ಈಗ ಹೀನಾಯ ಸೋಲನ್ನು ಕಂಡಿದೆ. ಸಿನಿಮಾ ಕಡೆಗೆ ಪ್ರೇಕ್ಷಕರನ್ನ ಬರುವಂತೆ ಮಾಡಲು ಮಲ್ಟಿಪ್ಲೆಕ್ಸ್ ಗಳಲ್ಲಿ ಹೊಸ ಪ್ಲಾನ್ ಒಂದನ್ನ ಮಾಡಲಾಗಿದೆ. ಅದೇನೆಂದರೆ ಪ್ರೇಕ್ಷಕರಿಗೆ ಉಚಿತವಾಗಿ ಟೀ ಮತ್ತು ಸಮೋಸ ನೀಡುವುದಾಗಿದೆ. ಇದನ್ನು ನೋಡಿದಾಗ ಸಿನಿಮಾ ಸೋತಿದೆ ಎನ್ನುವುದು ಸ್ಪಷ್ಟವಾಗಿದೆ.

ಸರ್ಫಿರಾ ಸಿನಿಮಾ ತಮಿಳು ನಟ ಸೂರ್ಯ (Suriya) ಅಭಿನಯಿಸಿ ಜನ ಮೆಚ್ಚುಗೆ ಪಡೆದು ಸೂರಾರೈ ಪೊಟ್ರು (Soorarai Pottru) ಸಿನಿಮಾದ ಹಿಂದಿ ರಿಮೇಕ್ ಆಗಿದೆ. ಈ ಸಿನಿಮಾ ಈಗಾಗಲೇ ಹಿಂದಿಗೆ ಡಬ್ ಆಗಿದ್ದು ಪ್ರೇಕ್ಷಕರು ಸಿನಿಮಾ ನೋಡಿದ್ದಾರೆ. ಆದರೆ ಮತ್ತೆ ಅದೇ ಸಿನಿಮಾವನ್ನು ಹೊಸದಾಗಿ ರೀಮೇಕ್ ಮಾಡಿದ್ದೇ ದೊಡ್ಡ ತಪ್ಪು ಎನ್ನುವುದು ಅನೇಕರ ಅಭಿಪ್ರಾಯವಾಗಿದೆ. ಸಿನಿಮಾ ಕಥೆ ಗೊತ್ತಿರುವವರು ಚಿತ್ರ ಮಂದಿರಗಳ ಕಡೆಗೆ ತಲೆ ಹಾಕುತ್ತಿಲ್ಲ.

ಸ್ಟಾರ್​ ಗಳ ಸಿನಿಮಾಗಳು ಬಿಡುಗಡೆ ದಿನ ಭರ್ಜರಿ ಕಲೆಕ್ಷನ್ ಮಾಡಬೇಕು. ಆದರೆ ‘ಸರ್ಫಿರಾ’ ಮೊದಲ ದಿನ ಕೇವಲ 2.50 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದರೆ ಇದು ಎರಡನೇ ದಿನ 4.50 ಕೋಟಿ ರೂಪಾಯಿಗಳಾಗಿದ್ದು. ಇದೇ ಕಾರಣದಿಂದ ಭಾನುವಾರ ರಜಾ ದಿನದಂದು ಕಲೆಕ್ಷನ್​ ಹೆಚ್ಚಿಸಬೇಕೆಂದು ಮಲ್ಟಿಪ್ಲೆಕ್ಸ್​ ನವರು ಪ್ರೇಕ್ಷಕರಿಗೆ ಟೀ, ಸಮೋಸಾದ ಆಸೆ ತೋರಿಸಿತ್ತು.

‘ಪಿವಿಆರ್​ ಐನಾಕ್ಸ್​’ ಮಲ್ಟಿಪ್ಲೆಕ್ಸ್​ ಕಡೆಯಿಂದ ಈ ಕುರಿತಾಗಿ ಪೋಸ್ಟ್ ಸಹಾ ಶೇರ್ ಮಾಡಲಾಗಿತ್ತು. ಅದರಲ್ಲಿ ‘ಸರ್ಫಿರಾ” ಸಿನಿಮಾ ನೋಡೋದಕ್ಕೆ ಬರುವಂತಹ ಪ್ರೇಕ್ಷಕರಿಗೆ 2 ಸಮೋಸಾ, ಒಂದು ಟೀ ಹಾಗೂ ಒಂದು ಲಗೇಜ್​ ಟ್ಯಾಗ್​ ಅನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿತ್ತು. ಸ್ಟಾರ್ ನಟನ ಸಿನಿಮಾಕ್ಕೆ ಇಂತಹ ಹೀನಾಯ ಸ್ಥಿತಿ ಎಂದು ತಿಳಿದು ಎಲ್ಲರೂ ಶಾಕ್ ಆಗಿದ್ದಾರೆ.‌

Leave a Comment