Anushka Shetty: ಒಂದೇ ಸಿನಿಮಾದಲ್ಲಿ ಅನುಷ್ಕಾ ಮತ್ತು ಶಿವಣ್ಣ; ಥ್ರಿಲ್ಲಿಂಗ್ ಅಪ್ಡೇಟ್ ನಿಂದ ಅಚ್ಚರಿಯಲ್ಲಿ ಫ್ಯಾನ್ಸ್

Written by Soma Shekar

Published on:

---Join Our Channel---

Anushka Shetty: ಟಾಲಿವುಡ್ ನಲ್ಲಿ ನಿರ್ಮಾಣವಾಗ್ತಿರೋ ಒಂದು ಸಿನಿಮಾದ ಕುರಿತಾಗಿ ದಿನಕ್ಕೊಂದು ಹೊಸ ಸುದ್ದಿ ಹೊರಗೆ ಬರ್ತಿದೆ ಮತ್ತು ಇದು ಸಿಕ್ಕಾಪಟ್ಟೆ ಚರ್ಚೆಗೂ ಕಾರಣವಾಗ್ತಿದೆ. ಹೌದು, ತೆಲುಗಿನ ಹಿರಿಯ ನಟ ಮೋಹನ್ ಬಾಬು ಅವರ ಪುತ್ರ, ನಟ, ನಿರ್ಮಾಪಕ ವಿಷ್ಣು ಮಂಚು (Vishnu Manchu) ನಿರ್ಮಾಣ ಮಾಡುತ್ತಿರುವ ಭಕ್ತ ಕಣ್ಣಪ್ಪ (Bhakta Kannappa) ಸಿನಿಮಾದ ಕುರಿತಾಗಿ ಹೊಸ ಹೊಸ ಅಪ್ಡೇಟ್ ಗಳು ಹೊರ ಬಂದು ಸಿಕ್ಕಾಪಟ್ಟೆ ಉತ್ಸುಕತೆಯನ್ನ ಮೂಡಿಸುತ್ತಿದೆ. ಭಕ್ತ ಕಣ್ಣಪ್ಪ ಸಿನಿಮಾದಲ್ಲಿ ಬಾಲಿವುಡ್ ನಿಂದ ಹಿಡಿದು ದಕ್ಷಿಣ ಸಿನಿಮಾಗಳ ಸ್ಟಾರ್ ಗಳು ನಟಿಸುತ್ತಿದ್ದಾರೆ ಎನ್ನುವುದು ವಿಶೇಷವಾಗಿದೆ. ಅದ್ದೂರಿ ತಾರಾಗಣ ಮತ್ತು ಭಾರೀ ಬಜೆಟ್ ಸಿನಿಮಾದ ಪ್ರಮುಖ ಆಕರ್ಷಣೆಯಾಗಿದೆ.

ಈಗ ಈ ಸಿನಿಮಾದ ತಾರಾಗಣಕ್ಕೆ ಮತ್ತೊಂದು ಹೊಸ ಹೆಸರು ಸೇರ್ಪಡೆಯಾಗಿದೆ. ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ (Anushka Shetty) ಭಕ್ತ ಕಣ್ಣಪ್ಪ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನಲಾಗಿದೆ. ಇಷ್ಟು ದಿನಗಳ ಕಾಲ ಭಕ್ತ ಕಣ್ಣಪ್ಪ ಸಿನಿಮಾದಲ್ಲಿ ನಟ ಪ್ರಭಾಸ್ ಅವರು ಶಿವನ ಪಾತ್ರವನ್ನು ಮಾಡುತ್ತಿದ್ದು, ಪಾರ್ವತಿ ಪಾತ್ರದಲ್ಲಿ ಬಾಲಿವುಡ್ ಬೆಡಗಿ ಕಂಗನಾ ರಣಾವತ್ ಅವರು ನಟಿಸಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು.

ಆದರೆ ಈಗ ಬಂದಿರುವ ಹೊಸ ಅಪ್ಡೇಟ್ ಗಳ ಪ್ರಕಾರ ಅನುಷ್ಕಾ ಶೆಟ್ಟಿ ಭಕ್ತ ಕಣ್ಣಪ್ಪ ಸಿನಿಮಾದಲ್ಲಿ ಪಾರ್ವತಿ ಪಾತ್ರವನ್ನು ಮಾಡಲಿದ್ದಾರೆ ಎನ್ನಲಾಗಿದ್ದು, ಇದನ್ನು ಕೇಳಿದ ಪ್ರಭಾಸ್ (Prabhas) ಮತ್ತು ಅನುಷ್ಕಾ ಶೆಟ್ಟಿ ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ತಮ್ಮ ನೆಚ್ಚಿನ ನಟ ನಟಿಯನ್ನು ಶಿವ ಪಾರ್ವತಿ ರೂಪದಲ್ಲಿ ನೋಡಬಹುದು ಎಂದು ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ.

ಭಕ್ತ ಕಣ್ಣಪ್ಪ ಸಿನಿಮಾದಲ್ಲಿ ಮಲೆಯಾಳಂ ನಿಂದ ಮೋಹನ್ ಲಾಲ್, ಸ್ಯಾಂಡಲ್ವುಡ್ ನಿಂದ ಶಿವಣ್ಣ ಅವರು ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಅವರು ಟಾಲಿವುಡ್ ಸಿನಿಮಾಕ್ಕೆ ಭಕ್ತ ಕಣ್ಣಪ್ಪ ಮೂಲಕ ಎಂಟ್ರಿಯನ್ನು ನೀಡುತ್ತಿದ್ದಾರೆ ಎನ್ನುವುದು ಸಹಾ ಸುದ್ದಿಯಾಗಿದೆ. ಈ ಸಿನಿಮಾದ ಬಗ್ಗೆ ಈಗ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿದ್ದು, ಇನ್ನಷ್ಟು ಅಪ್ಡೇಟ್ ಗಳಿಗಾಗಿ ಅಭಿಮಾನಿಗಳು ಕಾದಿದ್ದಾರೆ.

Leave a Comment