Amruthadhaare: ಮಲ್ಲಿಗೆ ಸ್ಕೆಚ್ ಹಾಕಿದ ಜೈದೇವ್, ಆದ್ರೆ ಆಗಿದ್ದು ಮಾತ್ರ ಬೇರೆ, ಮಹಿಮಾ ಎಂಟ್ರಿ ಶಕುಂತಲಾ ಶಾಕ್

Written by Soma Shekar

Published on:

---Join Our Channel---

Amruthadhaare: ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿನ ಹೊಸ ಟ್ವಿಸ್ಟ್ ಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿದೆ. ಮಲ್ಲಿಯನ್ನು ಮುಗಿಸಲು ಜೈದೇವ್ ಮಾಡಿದ್ದ ಪ್ಲಾನ್ ಫ್ಲಾಪ್ ಆಗಿದೆ, ಮಲ್ಲಿ ಕಥೆ ಮುಗಿಯಿತ ಅನ್ನೋ ಖುಷಿಯಲ್ಲಿ ಇದ್ದ ಶಕುಂತಲಾ ದೇವಿಗೆ ಶಾಕ್ ಆಗಿದೆ. ಭೂಮಿಕಾ ಗೌತಮ್ ಚಿಕ್ಕಮಗಳೂರಿನ ಕಡೆ ಹೋದ ಕೂಡಲೇ ಜೈದೇವ್ ತನ್ನ ಅಸಲಿತ್ತನ್ನ ಅಮ್ಮನ ಮುಂದೆ ಒಟ್ಟು ಮೆಚ್ಚುಗೆಯನ್ನು ಪಡೆದುಕೊಂಡಿದ್ದ.

ಅಲ್ಲದೇ ಮಲ್ಲಿಯನ್ನ ಮುಗಿಸೋಕೆ ಮಾಡಿರೋ ಪ್ಲಾನ್ ಬಗ್ಗೆ ಹೇಳಿದ್ದ. ಜೈದೇವ್ (Jaidev) ಮಾಡಿದ ಪ್ಲಾನ್ ಪ್ರಕಾರನೇ ಮಲ್ಲಿ ಫೈಲ್ ತಗೊಂಡು ವಿಲನ್ ಗಳು ಇದ್ದ ಕಡೆಗೆ ಬರ್ತಾಳೆ. ಅಲ್ಲಿ ರೌಡಿಗಳು ಹೊಸ ನಾಟಕ ಆಡಿ ಮಲ್ಲಿ ಹೊಟ್ಟೆಯಲ್ಲಿರೋ ಮಗುವಿಗೆ ತೊಂದರೆ ಮಾಡಲು ಪ್ರಯತ್ನ ಮಾಡ್ತಾರೆ. ಆದರೆ ಮಲ್ಲಿ ಅವರಿಂದ ತಪ್ಪಿಸಿಕೊಂಡು ಓಡಿ ಬರ್ತಾಳೆ. ಜೈದೇವ್ ಗೆ ಕಾಲ್ ಮಾಡಿದ ಶಕುಂತಲಾಗೆ ಜೈದೇವ್ ಮಲ್ಲಿ ಓಡಿ ಹೋದ್ಲು ಆದ್ರೆ ಸಿಕ್ಕಿಹಾಕಿಕೊಳ್ತಾಳೆ ಅಂತ ಭರವಸೆ ಕೊಡ್ತಾನೆ.

ಶಕುಂತಲಾ ಮತ್ತು ಮಾವ ಇಬ್ರು ಖುಷಿಯಲ್ಲಿದ್ದಾರೆ. ಮಲ್ಲಿ ಕಥೆ ಇಲ್ಲಿಗೆ ಮುಗೀತು ಅನ್ನೋ ಸಂತೋಷ ಶಕುಂತಲಾ ದೇವಿ ಮುಖದಲ್ಲಿ ಕಾಣುವಾಗಲೇ ಅವರ ಖುಷಿಗೆ ಸಿಡಿಲು ಬಡಿದ ಹಾಗೆ ಮಲ್ಲಿ ಜೀವಂತವಾಗಿ ಅವರ ಕಣ್ಮುಂದೆ ಬಂದು ನಿಂತಿದ್ದಾಳೆ ಮತ್ತು ಗಾಯಗೊಂಡ ಜೈದೇವ್ ನ ಕೂಡಾ ತನ್ನ ಜೊತೆಗೆ ಕರ್ಕೊಂಡು ಬಂದಿದ್ದಾಳೆ.

ಎಲ್ಲಾ ಗೊತ್ತಿದ್ರು ನಾಟಕೀಯವಾಗಿ ಏನಾಯ್ತು ಅಂತ ಕೇಳ್ತಾಳೆ ಶಕುಂತಲಾ. ಆಗ ಮಲ್ಲಿ ಸರಿಯಾದ ಸಮಯಕ್ಕೆ ಅವರು ಬಂದ್ರು ಎಂದಾಗ ಶಕುಂತಲಾ ಯಾರದು ಅಂತ ತಿಳಿಯೋ ತವಕದಲ್ಲಿ ಇರುವಾಗ್ಲೇ ಮಹಿಮಾ ನಾನೇ ಅಂತ ಅಲ್ಲಿ ಹಾಜರಾಗಿದ್ದಾಳೆ. ನಡೆದ ಘಟನೆಯನ್ನೆಲ್ಲಾ ಮಲ್ಲಿ ಹೇಳ್ತಾಳೆ. ಹೇಗೆ ಮಹಿಮಾ ಪೋಲಿಸರ ಜೊತೆಗೆ ಬಂದು ತಮ್ಮ ಪ್ರಾಣ ಉಳಿಸಿದರು ಅಂತ ವಿವರಿಸ್ತಾಳೆ.

ಶಕುಂತಲಾ ಮನಸ್ಸಿನಲ್ಲಿ ಮಹಿಮಾಗೆ ಹಿಡಿ ಶಾಪ ಹಾಕ್ತಾಳೆ. ಭೂಮಿಕಾ ಕಾಲ್ ಮಾಡಿದಾಗ ಮಹಿಮಾ ಎಲ್ಲರೂ ಸೇಫ್ ಅನ್ನೋ ಮಾತನ್ನ ಹೇಳಿದ್ದಾಳೆ. ಮನೆಯಲ್ಲಿ ಅವರಮ್ಮ ಥ್ಯಾಂಕ್ಸ್ ಹೇಳಿದಾಗ ಜೋರಾಗಿ ಹೇಳು ಅಂತ ವ್ಯಂಗ್ಯ ಮಾಡ್ತಾಳೆ. ಒಟ್ನಲ್ಲಿ ಅಮ್ಮ ಮಗ ಇಬ್ಬರೂ ಮಾಡಿದ ಪ್ಲಾನ್ ಫೇಲ್ ಆಗಿದೆ. ಮಲ್ಲಿ ಸೇಫ್ ಆಗಿ ಮನೆಯನ್ನ ಸೇರ್ಕೊಂಡಿದ್ದಾಳೆ.

Leave a Comment