Amruthadhaare: ಗೌತಮ್ ಭೂಮಿಕಾ ಮೊದಲ ರಾತ್ರಿಗೆ ಸಜ್ಜು; ಅಜ್ಜಿ ಮತ್ತು ಆನಂದ್ ಪ್ಲಾನ್ ಸಕ್ಸಸ್ ಆಗುತ್ತಾ?

Written by Soma Shekar

Published on:

---Join Our Channel---

Amruthadhaare: ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ಅಜ್ಜಿಯ ಮಾಸ್ಟರ್ ಪ್ಲಾನ್ ನಿಂದಾಗಿ ಗೌತಮ್ ಭೂಮಿಕಾ ಮೊದಲ ರಾತ್ರಿಗೆ ಎಲ್ಲಾ ಸಿದ್ಧತೆಗಳು ನಡೆದಾಗಿದೆ. ಅದರಲ್ಲೂ ಗೌತಮ್ ಸ್ನೇಹಿತ ಆನಂದ್ ತನ್ನ ಗೆಳೆಯನಿಗೆ ಅವನದ್ದೇ ಒಂದು ಕುಟುಂಬ ಇರಬೇಕು, ಸದಾ ಚಿಕ್ಕಮ್ಮ ಮತ್ತು ಚಿಕ್ಕಮ್ಮನ ಮಕ್ಕಳ ಬಗ್ಗೆ ಮಾತ್ರ ಆಲೋಚನೆ ಮಾಡೋ ಅವನಿಗೆ ತನ್ನ ಕುಟುಂಬ ಇರಬೇಕು, ಬೇರೆ ಎಲ್ಲರ ಹಾಗೆ ಜೀವನವನ್ನು ಎಂಜಾಯ್ ಮಾಡಬೇಕು ಅನ್ನೋದು ಆನಂದ್ ಮನಸ್ಸಿನಲ್ಲಿರುವ ಆಸೆಯಾಗಿದೆ.

ಆನಂದ್ ಸ್ನೇಹಿತನ ಕುರಿತಾಗಿ ತೋರುವ ಪ್ರೀತಿ, ಕಾಳಜಿ ಹಾಗೂ ಆಪ್ಯಾಯತೆಯನ್ನು ನೋಡಿ ಗೌತಮ್ ಅವರ ಅಜ್ಜಿ ಆನಂದ್ ನನ್ನ ಮೆಚ್ಚಿಕೊಂಡು ಈ ಕಾಲದಲ್ಲಿ ನಿನ್ನಂತಹ ಸ್ನೇಹಿತ ಪಡೆಯೋದಕ್ಕೆ ಗುಂಡು ಅದೃಷ್ಟ ಮಾಡಿದ್ದಾನೆ ಅಂತ ಹೇಳ್ತಾರೆ. ಅಜ್ನಿಯ ಮಾತಿಗೆ ಆನಂದ್ ನನ್ನ ಗೆಳೆಯ ಎಲ್ಲರ ತರ ಖುಷಿಯಾಗಿ ಇರಬೇಕು ಅನ್ನೋ ಆಸೆ ಅಷ್ಟೇ ಅಂತ ಹೇಳಿ ಮೊದಲ ರಾತ್ರಿಗೆ ಗೌತಮ್ ರೆಡಿ ಆಗಿದ್ದಾನೋ ಇಲ್ವೋ ಅಂತ ನೋಡೋಕೆ ಹೋಗ್ತಾ‌ನೆ.

ಗೌತಮ್ ಬಳಿ ಬಂದ ಆನಂದ್, ಹೆದರಬೇಡ ಗೆಳೆಯ, ನಾಚಿಕೆ ಪಟ್ಕೊಂಡು ಹೊರಗಡೆ ಬಂದ್ರೆ ಅಜ್ಜಿ ಹತ್ರ ಫಿಟ್ಟಿಂಗ್ ಇಡ್ತೀನಿ ಅಂತ ಎಚ್ಚರಿಕೆ ಕೊಟ್ಟು ಗೆದ್ದು ಬಾ ಗೆಳೆಯ ಅಂತ ಹೇಳಿ ಕೈಗೆ ಮಲ್ಲಿಗೆ ಹೂ ಸುತ್ತಿ ಕಳಿಸಿದ್ದಾನೆ. ಇನ್ನೊಂದು ಕಡೆ ಭೂಮಿಕಾನ ನೋಡಿದ ನಲ್ಲಿ ನೀವು ಇಷ್ಟು ನಾಚಿಕೊಳ್ಳೋದನ್ನ ನೋಡಿದ್ದು ಇದೇ ಮೊದಲ ಸಲ ಅಂತ ಹೇಳಿದ್ದಾಳೆ. ಮಲ್ಲಿಗೆ ಮಾತಿಗೆ ಭೂಮಿಕಾ ಇನ್ನಷ್ಟು ನಾಚಿ ನೀರಾಗಿದ್ದಾಳೆ.

ಭೂಮಿಕಾ ಹಾಲಿನ ಗ್ಲಾಸ್ ಹಿಡಿದು ಕೋಣೆಗೆ ಬಂದಿದ್ದಾಳೆ. ಗೌತಮ್ ಮುಜುಗರ ನೋಡಿ ನೀವು ನಂಜೊತೆ ಕಂಫೋರ್ಟ್ ಇಲ್ವಾ, ನನ್ನನ್ನ ಹೆಂಡ್ತಿ ಅಂತ ಸ್ವೀಕರಿಸಿಲ್ವಾ? ನಾನು ಹತ್ರ ಬಂದ್ರೆ ನಿಮಗೆ ಏನೂ ಅನಿಸಲ್ವಾ ಅಂತ ಕೇಳಿದ್ದು, ಗೌತಮ್ ಇಲ್ಲ ಹಾಗೇನಿಲ್ಲ ಎಂದಿದ್ದಾನೆ. ಒಟ್ನಲ್ಲಿ ಅಜ್ಜಿ ಮಾಡಿದ ಮಾಸ್ಟರ್ ಪ್ಲಾನ್ ನಿಂದ ಕೊನೆಗೂ ಗೌತಮ್ ಭೂಮಿಕಾ ಹತ್ರ ಆಗ್ತಾ ಇದ್ದಾರೆ. ಇದೆಲ್ಲಾ ಗೊತ್ತಾದ್ರೆ ಶಕುಂತಲಾ ಕೋಪದಿಂದ ಸಿಡಿದು ಇನ್ನೇನು ಹೊಸ ಕುತಂತ್ರ ಮಾಡ್ತಾಳೋ ಗೊತ್ತಿಲ್ಲ.

Leave a Comment