Amruthadhaare: ಗೌತಮ್ ಭೂಮಿಕಾನ ಬೇರೆ ಮಾಡೋಕೆ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ ಶಕುಂತಲಾ

Written by Soma Shekar

Published on:

---Join Our Channel---

Amurthadhaare : ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ಮತ್ತೊಮ್ಮೆ ಶಕುಂತಲಾ ಪ್ಲಾನ್ ಫ್ಲಾಪ್ ಆಗಿದೆ‌. ಗೌತಮ್ ಮತ್ತು ಭೂಮಿಕಾಗೆ ಪ್ರಾಣಾಪಾಯ ತರಲು ಸಂಚನ್ನು ಹೂಡಿ ಅಗರನ್ನ ಚಿಕ್ಕಮಗಳೂರಿಗೆ ಕಳಿಸಿದ್ದ ಶಕುಂತಲಾ ದೇವಿಗೆ (Shakunatala Devi) ತಾನು ಮಾಡಿದ ಸಂಚಿನಿಂದ ಏನೂ ಪ್ರಯೋಜನ ಆಗ್ಲಿಲ್ಲ ಅದೆಲ್ಲಾ ವ್ಯರ್ಥವಾಗಿದೆ ಅಂತ ಗೊತ್ತಾದ ಕೂಡಲೇ ಹೊಸ ನಾಟಕಕ್ಕೆ ಸಜ್ಜಾಗಿದ್ದಾಳೆ. ಗೌತಮ್ ನ ಎಮೋಷನಲ್ ಮಾಡೋಕೆ ತನ್ನ ಸಹೋದರನ ಜೊತೆ ಸರ್ಕೊಂಡು ಹೊಸ ಪ್ಲಾನ್ ಮಾಡಿದ್ದಾಳೆ..

ಭೂಮಿಕಾಳನ್ನ ದುಷ್ಟರ ವಲಯದಿಂದ ಸುರಕ್ಷಿತವಾಗಿ ಕರೆ ತಂದಿದ್ದಾನೆ ಗೌತಮ್. ಅಲ್ಲದೇ ಇಬ್ಬರೂ ತಮ್ಮ ಮನಸ್ಸಿನ ಮಾತುಗಳನ್ನು, ಒಬ್ಬರ ಮೇಲೆ ಮತ್ತೊಬ್ಭರಿಗೆ ಇರೋ ಪ್ರೀತಿಯನ್ನು ಹಂಚಿಕೊಂಡಿದ್ದಾರೆ. ಆದರೆ ಈಗ ಮತ್ತೆ ಹೇಗಾದ್ರೈ ಮಾಡಿ ಅವರಿಬ್ಬರನ್ನ ಒಂದಾಗದ ಹಾಗೆ, ಸಂತೋಷದ ಕ್ಷಣಗಳನ್ನ ಕಳೆಯದ ಹಾಗೆ ಮಾಡೋಕೆ ಶಕುಂತಲಾ ದೇವಿ ಮತ್ತೊಮ್ಮೆ ತನ್ನ ಬುದ್ಧಿ ತೋರಿಸಿದ್ದಾಳೆ.

ಗೌತಮ್ ಗೆ ಕಾಲ್ ಮಾಡೋ ಮಾವ ನಿಮ್ಮ ಅಮ್ಮ ತಲೆ ಸುತ್ತಿ ಬಿದ್ದಿದ್ದಾಳೆ. ಅವಳಿಗೆ ಇದ್ದಕ್ಕಿದ್ದ ಹಾಗೆ ಹುಷಾರಿಲ್ಲದೇ ಆಗಿದೆ ಅಂತ ಹೇಳ್ತಾನೆ. ಇದನ್ನ ಕೇಳಿ ಗೌತಮ್ ಗಾಬರಿ ಆಗಿದ್ದಾನೆ. ಅಮ್ಮ ಎಂತಹ ಪಾತಕಿ ಅಂತ ಗೊತ್ತಿಲ್ಲದ ಗೌತಮ್ ಕಳವಳದಿಂದ ಕೂಡಲೇ ಬೆಂಗಳೂರಿಗೆ ವಾಪಸ್ ಬರೋದಿಕ್ಕೆ ನಿರ್ಧಾರವನ್ನು ಮಾಡಿದ್ದಾನೆ. ಭೂಮಿಕಾಗೆ ಈ ವಿಚಾರವನ್ನ ಹೇಳಿದ್ದಾನೆ.

ಗೌತಮ್ ಹೇಳಿದ ವಿಚಾರ ಕೇಳಿ ಭೂಮಿಕಾಗೆ ಅನುಮಾನ ಬಂದಿದೆ. ಹುಷಾರಾಗಿದ್ದ ಅತ್ತೆಗೆ ಈಗ ಏನಾಯ್ತು. ಇದೆಲ್ಲಾ ಅವರ ಪ್ಲಾನ್ ಅಂತ ಮಲ್ಲಿಗೆ ಫೋನ್ ಮಾಡಿ ಕೇಳಿದಾಗ ಮಲ್ಲಿ ಅತ್ತೆ ಆರೋಗ್ಯವಾಗಿ, ಚೆನ್ನಾಗೇ ಇದ್ದಾರೆ ಅಂತ ಹೇಳಿದ್ದಾಳೆ. ಅಲ್ಲಿಗೆ ಭೂಮಿಕಾ ಅನುಮಾನ ನಿಜವಾಗಿದೆ. ಇದೇ ವೇಳೆ ಇಲ್ಲಿ ಮನೆಗೆ ಡಾಕ್ಟರ್ ಎಂಟ್ರಿ ಆಗಿದೆ‌. ಶಕುಂತಲಾ ದೇವಿಯ ಆರೋಗ್ಯ ಪರೀಕ್ಷೆ ಮಾಡೋಕೆ ಬಂದಿರೋದಾಗಿ ಹೇಳ್ತಾರೆ.

ಆ ಡಾಕ್ಟರ್ ನ ಭೂಮಿಕಾನೇ ಕಳಿಸಿರಬಹುದು ಅನಿಸುತ್ತೆ. ಡಾಕ್ಟರ್ ಅವರಿಗೆ ಸಮಸ್ಯೆ ಏನಿಲ್ಲ ಅಂದ ಮೇಲೆ ಗೌತಮ್ ಮತ್ತು ಭೂಮಿಕಾ ಚಿಕ್ಕಮಗಳೂರಿನಲ್ಲೇ ಇನ್ನೊಂದು ಸ್ವಲ್ಪ ದಿನ ಉಳಿಯೋ ಹಾಗೆ ಆಗಬಹುದು. ಒಟ್ನಲ್ಲಿ ಈಗ ಶಕುಂತಲಾ ಮಾಡಿರೋ ಪ್ಲಾನ್ ನ ಭೂಮಿಕಾ ಮತ್ತೆ ಫ್ಲಾಪ್ ಮಾಡಿ ಅತ್ತೆಗೆ ನಿರಾಶೆಯನ್ನು ಉಂಟು ಮಾಡ್ತಾಳಾ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment