Amruthadhaare: ಗೌತಮ್ ಭೂಮಿಕಾ ನಡುವೆ ಶುರುವಾಯ್ತು ಪ್ರೇಮ ಕಥೆ, ಭಾವುಕರಾದ ಸುಮಧುರ ಕ್ಷಣ

Written by Soma Shekar

Published on:

---Join Our Channel---

Amruthadhaare Serial: ಅಮೃತಧಾರೆ ಸೀರಿಯಲ್ (Amruthadhaare Serial) ಸದ್ಯಕ್ಕಂತೂ ಪ್ರೇಕ್ಷಕರ ವಿಶೇಷ ಮೆಚ್ಚುಗೆಯನ್ನು ಪಡೆದಿರುವ ಸೀರಿಯಲ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಗೌತಮ್ ದೀವಾನ್ ಆಗಿ ರಾಜೇಶ್ ನಟರಂಗ (Rajesh Nataranga) ಮತ್ತು ಭೂಮಿಕಾ ಸದಾಶಿವ್ ಆಗಿ ನಟಿ ಛಾಯಾ ಸಿಂಗ್ (Chaya Singh) ಅವರ ಪ್ರಬುದ್ಧ ಅಭಿನಯ ಪ್ರೇಕ್ಷಕರ ಮೇಲೆ ಮೋಡಿ ಮಾಡಿದೆ. ಮತ್ತೊಂದು ಕಡೆ ಸೀರಿಯಲ್ ನ ಹೊಸ ಟ್ವಿಸ್ಟ್ ಗಳು ಇನ್ನಷ್ಟು ಕುತೂಹಲವನ್ನು ಮೂಡಿಸುತ್ತಿದೆ.

ಗೌತಮ್ ಮತ್ತು ಭೂಮಿಕಾ ಅವರೊಟ್ಟಿಗೆ ಆನಂದ್ ಮತ್ತು ಅಪರ್ಣಾ ಎಲ್ಲಾ ಚಿಕ್ಕಮಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಜಮೀನಿನ ತಕರಾರನ್ನ ನಿಭಾಯಿಸಿ ಅದಕ್ಕೊಂದು ಪರಿಹಾರ ಹುಡುಕಲು ಬಂದ ಗೌತಮ್ ಗೆ ಜೊತೆಯಾಗಿ ಹನಿಮೂನ್ ಅನ್ನೋ ತಂತ್ರ ಹೂಡಿ ಭೂಮಿಕಾನ ಜೊತೆಯಲ್ಲಿ ಕಳಿಸಿದ್ದಾಳೆ ಶಕುಂತಲಾ ದೇವಿ.

ಶಕುಂತಲಾ ಮತ್ತು ಜೈದೇವ್ ಭೂಮಿಕಾ ಮತ್ತು ಗೌತಮ್ ಗೆ ತೊಂದರೆ ಕೊಡೋಕೆ ಎಲ್ಲಾ ಪ್ಲಾನ್ ಮಾಡಿದ್ರು. ಆದರೆ ಗೌತಮ್ ಎಲ್ಲದನ್ನ ಎದುರಿಸಿ ಭೂಮಿಕಾನ ಸುರಕ್ಷಿತವಾಗಿ ವಾಪಸ್ ಕರ್ಕೊಂಡು ಬಂದಾಗಿದೆ. ಬೆಟ್ಟದ ಮೇಲೆ ಭೂಮಿಕಾಗೆ ಪ್ರೀತಿಯ ವಿಷಯ ಹೇಳುವಾಗಲೇ ಭೂಮಿಕಾ ಕಿಡ್ನಾಪ್ ಆಗಿದ್ರಿಂದ ಆ ವಿಷಯ ಪೂರ್ತಿ ಆಗಿರಲಿಲ್ಲ. ಆದರೆ ಈಗ ಗೌತಮ್ ಮನಸ್ಸಿನ ಮಾತನ್ನ ಹೇಳಿದ್ದಾನೆ.

ಆನಂದ್ ಮತ್ತು ಅಪರ್ಣಾ ಗೌತಮ್ ಮತ್ತು ಭೂಮಿಕಾಗೆ ಸ್ಪೆಷಲ್ ಡಿನ್ನರ್ ಅರೇಂಜ್ ಮಾಡಿದ್ದಾರೆ. ಅಲ್ಲಿ ಗೌತಮ್ ನಾನು ನಿಮ್ಮನ್ನ ತುಂಬಾ ಹಚ್ಕೊಂಡು ಬಿಟ್ಟಿದ್ದೀನಿ ಅಂತ ಹೇಳ್ಕೊಂಡು ಭಾವುಕನಾದರೆ, ಮತ್ತೊಂದು ಕಡೆ ಭೂಮಿಕಾ ಗುಲಾಬಿಯನ್ನು ನೀಡಿ, ಮೊಣಕಾಲೂರಿ ಗೌತಮ್ ಗೆ ಲವ್ ಪ್ರಪೋಸ್ ಮಾಡಿದ್ದಾಳೆ. ಒಟ್ನಲ್ಲಿ ಇಬ್ಬರೂ ತಮ್ಮ ಮನಸ್ಸಿನ ಮಾತುಗಳನ್ನ ಹೇಳಿಕೊಂಡು ಭಾವುಕರಾಗಿದ್ದಾರೆ.

Leave a Comment