Darshan: ಅಪ್ಪಂದಿರ ದಿನದಂದು ದರ್ಶನ್ ಪುತ್ರ ವಿನೀಶ್ ವಿಶೇಷ ಪೋಸ್ಟ್ ; ಅಪ್ಪನಿಗಾಗಿ ಸಂದೇಶ ಕೊಟ್ಟ ಮಗ

Written by Soma Shekar

Published on:

---Join Our Channel---

Darshan: ರೇಣುಕಾಸ್ವಾಮಿ ಕೊ ಲೆ (Renuka Swamy Murder) ಪ್ರಕರಣದಲ್ಲಿ ನಟ ದರ್ಶನ್ (Darshan) ಅವರು ಪೋಲಿಸದ ವಶದಲ್ಲಿದ್ದಾರೆ.‌ ಹದಿಮೂರು ಜನ ಆರೋಪಿಗಳನ್ನ ಪೊಲೀಸರು ಮತ್ತೆ ಐದು ದಿನಗಳ ಅವಧಿಗೆ ಕಸ್ಟಡಿಗೆ ಪಡೆದಿದ್ದು, ತನಿಖೆ ಮುಂದುವರೆಸಲಾಗುತ್ತಿದೆ.‌ ಇವೆಲ್ಲವುಗಳ ನಡುವೆಯೇ ಒಂದು ಜೂನ್ 16, ವಿಶ್ವ ಅಪ್ಪಂದಿರ ದಿನ ?World Father’s Day). ಈ ವಿಶೇಷ ದಿನದಂದು ನಟ ದರ್ಶನ್ ಅವರ ಮಗ ವಿನೀಶ್ ಸೋಶಿಯಲ್ ಮೀಡಿಯಾದಲ್ಲಿ ತಂದೆಯಂದಿರ ದಿನದ ಶುಭ ಕೋರಿದ್ದಾರೆ.

ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಯ ಮಗ ವಿನೀಶ್ (Vinish). ಇಂದು ತಂದೆಯಂದಿರ ದಿನದಂದು ತನ್ನ ಅಪ್ಪನಿಗೆ ಶುಭಾಶಯವನ್ನು ಕೋರಿದ್ದಾರೆ ವಿನೀಶ್. ಆದರೆ ವಿಪರ್ಯಾಸವೇನೆಂದರೆ ಅಪ್ಪನಿಗೆ ನೇರವಾಗಿ ಶುಭಾಶಯ ಹೇಳಲಾಗದ ಪರಿಸ್ಥಿತಿ. ‌ಕೊ ಲೆ ಕೇಸ್ ನಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಅಪ್ಪನಿಗೆ ವಿನೀಶ್ ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯ ಕೋರಿದ್ದಾರೆ.

ವಿನೀಶ್ ತನ್ನ ಇನ್ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ, ಹ್ಯಾಪಿ ಫಾದರ್ಸ್ ಡೇ ಅಪ್ಪ. ನಾನು ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ತಾ ಇದ್ದೀನಿ, ಐ ಲವ್ ಯು. ಯಾವಾಗಲೂ ನೀವೇ ನನ್ನ ಹೀರೊ” ಎಂದು ಬರೆದುಕೊಂಡಿದ್ದಾರೆ. ‌ವಿನೀಶ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರೈವೇಟ್ ಮಾಡಿರುವ ಕಾರಣ ಅವರನ್ನು ಹಿಂಬಾಲಿಸುವವರು ಮಾತ್ರವೇ ಅವರ ಪೋಸ್ಟ್ ಅನ್ನು ನೋಡಬಹುದಾಗಿದೆ.

ಕೆಲವೇ ದಿನಗಳ ಹಿಂದ ಅವರ ಪ್ರೊಫೈಲ್ ಪಬ್ಲಿಮ್ ಇದ್ದಾಗ ವಿನೀಶ್ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡು ತಮ್ಮ ತಂದೆಯ ಬಗ್ಗೆ ಕೆಟ್ಟ ಪದಗಳನ್ನು ಬಳಸಿದವರಿಗೆ ಧನ್ಯವಾದಗಳನ್ನು ಹೇಳಿದ್ದರು. ಅಲ್ಲದೇ ಟೀಕಿಸುವ ಭರದಲ್ಲಿ ಹದಿನೈದು ವರ್ಷದ ಮಗನನ್ನ ಪರಿಗಣಿಸಲೇ ಇಲ್ಲ ಎನ್ನುವ ಬೇಸರವನ್ನು ಸಹಾ ವ್ಯಕ್ತಪಡಿಸಿದ್ದರು. ಆ ಪೋಸ್ಟ್ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಸುದ್ದಿಯಾಗಿತ್ತು.

Leave a Comment