Sonu Gowda: ಮಂತ್ರಾಲಯದಲ್ಲಿ ಕುಟುಂಬ ಸಮೇತ ರಾಯರ ದರ್ಶನ ಮಾಡಿ ಪುನೀತರಾದ ಸೋನು ಗೌಡ

Written by Soma Shekar

Published on:

---Join Our Channel---

Sonu Gowda: ಕನ್ನಡದ ನಟಿ ಸೋನು ಗೌಡ (Sonu Gowda) ಅವರು ಇತ್ತೀಚಿನ ದಿನಗಳಲ್ಲಿ ದೇಗುಲಗಳ ದರ್ಶನವನ್ನು ಮಾಡುವ ಕಡೆಗೆ ಗಮನವನ್ನು ನೀಡಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಅವರು ಶೃಂಗೇರಿ ಶಾರದಾಂಬೆಯ ದರ್ಶನವನ್ನು ಪಡೆದಿದ್ದರು, ಅದಕ್ಕೂ ಮೊದಲು ಅವರು ಎರಡು ಜ್ಯೋತಿರ್ಲಿಂಗಗಳ ದರ್ಶನವನ್ನು ಸಹಾ ಪಡೆದಿದ್ದಾರೆ. ಆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.

ನಟಿ ಸೋನು ಗೌಡ ಅವರು ಉಜ್ಜಯಿನಿ ಹಾಗೂ ಓಂಕಾರೇಶ್ವರ ಕ್ಷೇತ್ರಕ್ಕೆ ಭೇಟಿಯನ್ನು ನೀಡಿದ್ದರು. ಆ ಸಂದರ್ಭದಲ್ಲಿ ಅವರು ದೇವರಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿದ್ದರು. ಈಗ ಅವರು ತನ್ನ ಕುಟುಂಬದವರೊಟ್ಟಿಗೆ ಗುರುರಾಯರ ಕ್ಷೇತ್ರವಾದ ಮಂತ್ರಾಲಯಕ್ಕೆ ಭೇಟಿಯನ್ನು ನೀಡಿದ್ದಾರೆ.

ತಂದೆ, ತಾಯಿ ಮತ್ತು ತಮ್ಮ ಕುಟುಂಬದವರು ಜೊತೆಗೆ ಸೋನು ಗೌಡ ಅವರು ಮಂತ್ರಾಲಯ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ರಾಯರ ದರ್ಶನವನ್ನು ಮಾಡಿದ್ದಾರೆ. ವಿಶೇಷ ಪೂಜೆಯನ್ನು ಅವರು ಸಲ್ಲಿಸಿದ್ದಾರೆ.

ರಾಯರ ದರ್ಶನವನ್ನು ಮಾಡಿ ಪುನೀತರಾಗಿರುವ ನಟಿ ಸೋನು ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರವಾಸದ ಸುಂದರವಾದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ನೆಟ್ಟಿಗರು ಮೆಚ್ಚುಗೆಗಳನ್ನು ನೀಡಿದ್ದಾರೆ.

ಸೋನು ಅವರು ಸಿದ್ಲಿಂಗು 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸೋನು ಅವರ ತಂದೆ ಪ್ರಸ್ತುತ ಕನ್ನಡ ಕಿರುತೆರೆಯಲ್ಲಿ ಕರಿಮಣಿ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಸೋನು ಅವರು ಸಿನಿಮಾ ಮತ್ತು ಕಿರುತೆರೆ ಎರಡೂ ಕಡೆ ಸಾಕಷ್ಟು ಹೆಸರನ್ನು ಮಾಡಿರುವ ನಟಿಯಾಗಿದ್ದಾರೆ.

ಸೋನು ಗೌಡ ಅವರು ಈ ಹಿಂದೆ ಜೀ ಕನ್ನಡದ ಜನಪ್ರಿಯ ಸೀರಿಯಲ್ ಆದಂತಹ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ರಾಜನಂದಿನಿ ಪಾತ್ರದಲ್ಲಿ ನಟಿಸಿ ಕಿರುತೆರೆಯ ಪ್ರೇಕ್ಷಕರನ್ನು ರಂಜಿಸಿದ್ದರು.

Leave a Comment