Priyamani: ಈದ್ ಮುಬಾರಕ್ ಹೇಳಲು ಮುಸ್ಲಿಂ ಹುಡುಗಿಯಂತೆ ಅಂದವಾಗಿ ಮಿಂಚಿದ ನಟಿ ಪ್ರಿಯಾಮಣಿ

Written by Soma Shekar

Published on:

---Join Our Channel---

Priyamani: ಬಹುಭಾಷಾ ನಟಿಯಾಗಿ ತಮ್ಮ ಅಂದ ಮತ್ತು ಅಭಿನಯದ ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ ಪ್ರಿಯಾಮಣಿ (Priyamani) ದಕ್ಷಿಣ ಸಿನಿಮಾ ರಂಗದಲ್ಲಿ ತುಂಬಾ ಫೇಮಸ್. ದಕ್ಷಿಣ ಸಿನಿಮಾಗಳಲ್ಲಿ ಹೆಸರನ್ನು ಮಾಡಿರುವ ಈ ನಟಿಯು ಬಾಲಿವುಡ್ ನ ಸಿನಿಮಾಗಳು ಮತ್ತು ವೆಬ್ ಸಿರೀಸ್ ಗಳಲ್ಲೂ ನಟಿಸುವ ಮೂಲಕ ಹಿಂದಿ ಭಾಷೆಯಲ್ಲೂ ಗುರುತಿಸಿಕೊಂಡಿದ್ದಾರೆ.

ನಟಿ ಪ್ರಿಯಾಮಣಿ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಾಲಷ್ಟು ಸಕ್ರಿಯರಾಗಿದ್ದಾರೆ. ಆಗಾಗ ವಿಶೇಷ ಫೋಟೋ ಶೂಟ್ ಗಳ ಅಂದವಾದ ಫೋಟೋಗಳನ್ನು ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ನಟಿ ಖುಷಿಯನ್ನು ನೀಡುತ್ತಾರೆ.

ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಮತ್ತೊಮ್ಮೆ ನಟಿ ಹೊಸ ಲುಕ್ ನಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಪ್ರಿಯಾಮಣಿ ಮುಸ್ಲಿಂ ಹುಡುಗಿ ರೀತಿಯಲ್ಲಿ ಅಲಂಕರಿಸಿಕೊಂಡು ವಿಶೇಷ ಲುಕ್ ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.

ನಟಿಯು ಹಸಿರು ಉಡುಗೆ ತೊಟ್ಟಿದ್ದು, ಅದಕ್ಕೆ ತಕ್ಕಂತಹ ಆಭರಣಗಳನ್ನು ಧರಿಸಿ ಅಂದವಾಗಿ ಕಂಡಿದ್ದು, ನಟಿಯು ಶೇರ್ ಮಾಡಿರುವಂತಹ ಹೊಸ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್‌ ಆಗುತ್ತಿವೆ. 

ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ನಟಿಯು ಸದ್ಯ ಅಭಿಮಾನಿಗಳಿಗೆ ಈದ್ ಮುಬಾರಕ್ ಶುಭಾಶಯಗಳನ್ನು ಹೇಳಿದ್ದು, ಅವರ ಅಭಿಮಾನಿಗಳು ನಟಿಯ ಪೋಸ್ಟ್ ನೋಡಿ ಖುಷಿಯಾಗಿದ್ದಾರೆ.

ನಟಿಯು ಹಂಚಿಕೊಂಡ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮತ್ತು ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಾ ಈದ್ ಮುಬಾರಕ್, ನಿಮಗೂ ರಂಜಾನ್ ಹಬ್ಬದ ಶುಭಾಶಯಗಳು ಎಂದೆಲ್ಲಾ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಬಹುಭಾಷಾ ನಟಿಯಾಗಿದ್ದರೂ ನಟಿ ಪ್ರಿಯಾಮಣಿ ಅವರು ಹೆಚ್ಚು ಹೆಸರನ್ನು ಮಾಡಿರುವುದು ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ. ತೆಲುಗಿನಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ ಗೆ ಜಡ್ಜ್ ಸಹಾ ಆಗಿದ್ದಾರೆ ಪ್ರಿಯಾಮಣಿ.

Leave a Comment