Ravindar : ಮಿಸ್ ಮ್ಯಾಚ್ ಜೋಡಿ ಅಂತಾನೇ ಸೋಶಿಯಲ್ ಮೀಡಿಯಾಗಳಲ್ಲಿ ಜನಪ್ರಿಯತೆಯನ್ನು ಪಡ್ಕೊಂಡವರು ರವೀಂದರ್ (Ravindar) ಮತ್ತು ಮಹಾಲಕ್ಷ್ಮಿ ಜೋಡಿ. ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ಸದ್ದು, ಸುದ್ದಿಯಾಗೋ ಈ ಜೋಡಿ ತಮ್ಮ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡ್ಕೊಂಡು ತಮ್ಮ ಅಭಿಮಾನಿಗಳೊಂದಿಗೆ ತಮ್ಮ ಖುಷಿಯನ್ನು ಶೇರ್ ಮಾಡಿಕೊಳ್ತಾ ಇರ್ತಾರೆ. ಈಗ ಒಂದು ಹೊಸ ವಿಚಾರವಾಗಿ ಇವರು ಮತ್ತೊಮ್ಮೆ ಸುದ್ದಿ ಆಗಿದ್ದಾರೆ.
ರವೀಂದರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡ್ಕೊಂಡ ಒಂದು ಪೋಸ್ಟ್ ಹೊಸದೊಂದು ಚರ್ಚೆಗೆ ಕಾರಣವಾಗಿದೆ. ಹೌದು, ರವೀಂದರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದು, ಅದರಲ್ಲಿ ನನ್ನ ದಿನಗಳು ಹತ್ತಿರವಾಗ್ತಿದೆ ಅನ್ನೋ ಅರ್ಥ ಬರೋ ಹಾಗೆ ಬರ್ಕೊಂಡಿದ್ದು, ತನ್ನನ್ನ ಕೆಟ್ಟ ದಿನಗಳು ಆವರಿಸಿಕೊಂಡಿವೆ ಅಂತ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದಲೂ ರವೀಂದರ್ ಮತ್ತು ಮಹಾಲಕ್ಷ್ಮಿ (Mahalakshmi) ನಡ್ವೆ ಎಲ್ಲಾ ಸರಿಯಿಲ್ಲ, ಅವ್ರು ದೂರವಾಗ್ತಾರೆ ಅನ್ನೋ ಒಂದಷ್ಟು ಸುದ್ದಿಗಳು ಸಹಾ ಹರಿದಾಡಿತ್ತು. ಅಲ್ಲದೇ ಇತ್ತೀಚಿಗಷ್ಟೇ ಮಹಾಲಕ್ಷ್ಮಿ ಕೂಡಾ ತಮ್ಮ ಗಂಡನಿಗೆ ವಾರ್ನ್ ಮಾಡಿದ್ದರು. ಮಹಾಲಕ್ಷ್ಮಿ ತಮಿಳಿನ ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravinder Chandrasekaran) ಜೊತೆ ಮದುವೆಯಾದ ದಿನದಿಂದಲೂ ಕೂಡಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗ್ತಾನೇ ಇದ್ದಾರೆ.
ಈ ಸಲ ರವೀಂದರ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋವನ್ನು ಮಾತ್ರವೆ ಹಾಕ್ಕೊಂಡು ಪೋಸ್ಟ್ ಶೇರ್ ಮಾಡಿದ್ದಾರೆ. ಅದೇ ಕಾರಣದಿಂದಲೇ ಮಹಾಲಕ್ಷ್ಮಿ ಗಂಡನಿಗೆ ಕ್ಲಾಸ್ ತೆಗೊಂಡಿದ್ರು. ಇವರಿಬ್ರು ದೂರಾಗ್ತಿದ್ದಾರೆ ಅಂತ ಸುದ್ದಿಗಳು ಹರಡಿರೋವಾಗ್ಲೇ ರವೀಂದರ್ ಸಿಂಗಲ್ ಫೋಟೋ ಶೇರ್ ಮಾಡಿದ್ದು, ಹರಡಿರೋ ಸುದ್ದಿಗಳಿಗೆ ಇನ್ನೊಂದಷ್ಟು ಪುಷ್ಟಿಯನ್ನು ನೀಡಿತ್ತು.