Allu Arjun: ಕಾಮನ್ ಮ್ಯಾನ್ ತರ ರಸೇಲಿ ನಡ್ಕೊಂಡ ಕೆಫೆಗೆ ಬಂದ ಅಲ್ಲು ಅರ್ಜುನ್; ನಟನ ಸರಳತೆಗೆ ಫ್ಯಾನ್ಸ್ ಫಿದಾ

Written by Soma Shekar

Published on:

---Join Our Channel---

Allu Arjun: ಟಾಲಿವುಡ್‌ ಸಿನಿಮಾಗಳ ಐಕಾನ್ ಸ್ಟಾರ್ ಖ್ಯಾತಿಯ ನಟ ಅಲ್ಲು ಅರ್ಜುನ್ (Allu Arjun) ಪ್ರಸ್ತುತ ತಮ್ಮ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ 2 (Pushpa 2) ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ಸಿನಿಮಾದ ಕೆಲಸಗಳ ನಡುವೆಯೇ ಈಗ ಅಲ್ಲು ಅರ್ಜುನ್ ಅವರು ಕಾಮನ್ ಪರ್ಸನ್ ತರ ನಡೆದುಕೊಂಡು ಬರ್ತಿರೋ ಫೋಟೋಗಳು ಭರ್ಜರಿ ವೈರಲ್ ಆಗಿವೆ.‌

ಸಾಮಾನ್ಯವಾಗಿ ಸ್ಟಾರ್ ಗಳು ಪಬ್ಲಿಕ್ ನಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಅದರಲ್ಲೂ ಕೆಲವು ಸ್ಟಾರ್ ಗಳು ಯಾವುದೇ ಗತ್ತು, ಗರ್ವ ಇಲ್ಲದೇ ಅಭಿಮಾನಿಗಳ ಮನಸ್ಸನ್ನು ಗೆದ್ದು ಬಿಡುತ್ತಾರೆ. ಈಗ ಅಲ್ಲು ಅರ್ಜುನ್ ಸಹಾ ಕೋಟಿ ಕೋಟಿ ಗಳಿಸುವ ಸ್ಟಾರ್ ಹೀರೋ ಆದರೂ ಯಾವುದೇ ಸ್ಟಾರ್ ಡಂ ತೋರ್ಪಡಿಸದೇ ರಸ್ತೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ನಡೆದುಕೊಂಡು ಬಂದಿದ್ದಾರೆ.

ಟೀ ಶರ್ಟ್ ಶಾರ್ಟ್ ಧರಿಸಿ ಬರುತ್ತಿರುವ ಅಲ್ಲು ಅರ್ಜುನ್ ವೀಡಿಯೋ ನೋಡಿದ ನೆಟ್ಟಿಗರು ಅದು ನಿಜವಾಗ್ಲೂ ಅವರೇನಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ‌ಕಾಲ್ನಡಿಗೆಯಲ್ಲಿ ಬರುತ್ತಿರುವ ಅಲ್ಲು ಅರ್ಜುನ್ ಅವರ ಸಿಂಪ್ಲಿಸಿಟಿಯನ್ನು ನೋಡಿದ ಅಭಿಮಾನಿಗಳು ಮತ್ತು ನೆಟ್ಟಿಗರು ಖುಷಿಪಟ್ಟಿದ್ದಾರೆ. ನಟನ ಸರಳತೆ ಯನ್ನು ಹಾಡಿ ಹೊಗಳಿದ್ದಾರೆ.

ಇನ್ನೂ ಕೆಲವರು ಅದು ಅಲ್ಲು ಅರ್ಜುನ್ ಹೌದೋ ಅಲ್ಲವೋ ಎನ್ನುವ ಅನುಮಾನ ಹೊರ ಹಾಕುವಾಗಲೇ ಅಭಿಮಾನಿಗಳು‌ ಸೋಶಿಯಲ್ ಮೀಡಿಯಾಗಳಲ್ಲಿ ಸಿಂಪ್ಲಿಸಿಟಿಗೆ ನಮ್ಮ ಹೀರೋ ಬಾಪ್ ಎಂದು ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ. ಸದ್ಯಕ್ಕೆ ನಟ ಪುಷ್ಪ 2 ಕಡೆಗೆ ಗಮನ ನೀಡಿದ್ದು, ಅಭಿಮಾನಿಗಳು ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

Bollywood Actors: ಬಾಲಿವುಡ್ ನ ಈ ಸೆಲೆಬ್ರಿಟಿಗಳು ಹೊಂದಿರೋದು ವಿದೇಶಿ ಪೌರತ್ವ; ದೊಡ್ಡ ಲಿಸ್ಟೇ ಇದೆ


Leave a Comment