Janhvi Kapoor: ತೆಲುಗಿನಲ್ಲಿ ನಾಯಕಿಯರೇ ಇಲ್ವಾ? ಫಸ್ಟ್ ಸಿನಿಮಾ ಬಂದೇ ಇಲ್ಲ, ಆದ್ರೂ ಜಾನ್ವಿ ತೆಲುಗಲ್ಲಿ ಬ್ಯುಸಿ ನಟಿ

Written by Soma Shekar

Published on:

---Join Our Channel---

Janhvi Kapoor: ದಕ್ಷಿಣ ಸಿನಿಮಾ ರಂಗದಲ್ಲಿ ಮೊದಲಿನಿಂದಲೂ ಬಾಲಿವುಡ್ (Bollywood) ನಟಿಯರಿಗೆ ಮಣೆ ಹಾಕುವ ಪರಿಪಾಠ ಇದೆ. ಬಾಲಿವುಡ್ ನಲ್ಲಿ ಹೆಸರು ಮಾಡಲು ಸಾಧ್ಯವಾಗದ ನಟಿಯರೂ ದಕ್ಷಿಣದಲ್ಲಿ ಸ್ಟಾರ್ ನಟಿಯರಾದ ಉದಾಹರಣೆಗಳು ಬೇಕಾದಷ್ಟಿದೆ. ಸ್ಟಾರ್ ನಟನ ಹೊಸ ಸಿನಿಮಾ ಎಂದಾಗ ಮೊದಲು ನಾಯಕಿಗಾಗಿ ಬಾಲಿವುಡ್ ಕಡೆಗೆ ನೋಡೋ ನಿರ್ಮಾಪಕರು ಮತ್ತು ನಿರ್ದೇಶಕರು ಕಡಿಮೆ ಏನಿಲ್ಲ.

ಈಗಲೂ ಅಂತದ್ದೇ ಟ್ರೆಂಡ್ ಎನ್ನುವಂತೆ ನಟಿ ಶ್ರೀದೇವಿ ಅವರ ಮಗಳು ಜಾನ್ವಿ ಕಪೂರ್ (Janhvi Kapoor) ಟಾಲಿವುಡ್ ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ನಟಿ ಜಾನ್ವಿ ಕಪೂರ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು ಬಾಲಿವುಡ್ ಸಿನಿಮಾ ಮೂಲಕ. ಬಾಲಿವುಡ್ ನಲ್ಲಿ ಜಾನ್ವಿಗೆ ದೊಡ್ಡ ಗೆಲುವು ಸಿಗಲಿಲ್ಲ, ಸ್ಟಾರ್ ಗಳ ಜೊತೆಗೆ ನಟಿಸಲೂ ಇಲ್ಲ.

ಆದರೆ ಟಾಲಿವುಡ್ ನಲ್ಲಿ ಶ್ರೀದೇವಿ ಹೆಸರಿನ ಕಾರಣದಿಂದಲೇ ಜಾನ್ವಿಗೆ ಮೊದಲನೇ ಸಿನಿಮಾದಲ್ಲೇ ಜೂ. ಎನ್ ಟಿ ಆರ್ (Jr NTR) ಜೊತೆಗೆ ನಟಿಸುವ ಅವಕಾಶ ಸಿಕ್ಕಿತು. ಈ ಸಿನಿಮಾ ಬಿಡುಗಡೆಗೆ ಮೊದಲೇ ರಾಮ್ ಚರಣ್ (Ram Charan) ಜೊತೆಗೆ ಮತ್ತೊಂದು ಅವಕಾಶ ಸಿಕ್ಕಾಗಿದೆ.

ಇನ್ನೂ ಮೊದಲ ಸಿನಿಮಾ ಬಿಡುಗಡೆಗೆ ಮೊದಲೇ ಈಗ ಮತ್ತೊಂದು ಅವಕಾಶ ಜಾನ್ವಿಯನ್ನ ಅರಸಿ ಬಂದಿದೆ. ಹೌದು, ಟಾಲಿವುಡ್ ನ ಸಿಂಪಲ್ ಸ್ಟಾರ್ ನಾನಿಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆನ್ನುವ ಹೊಸ ಸುದ್ದಿಯೊಂದು ಈಗ ಸದ್ದು ಮಾಡಿದೆ. ಈ ಬೆಳವಣಿಗೆಗಳನ್ನು ನೋಡಿದಾಗ ಜಾನ್ವಿ ಟಾಲಿವುಡ್ ನಲ್ಲೇ ನೆಲೆಯೂರುವ ಲಕ್ಷಣಗಳು ಕಾಣಿಸುತ್ತಿವೆ.

ನವ ನಟಿಯರಿಗೆ ಸ್ಟಾರ್ ಗಳ ಜೊತೆಗೆ ಸಿನಿಮಾ ಸಿಗುವುದು ವಿರಳ, ಆದರೆ ಜಾನ್ವಿಗೆ ಟಾಲಿವುಡ್ ನಲ್ಲಿ ಜಾಕ್ ಪಾಟ್ ಹೊಡೆದಂತಾಗಿದೆ. ದಸರ ಸಿನಿಮಾ ನಿರ್ದೇಶಕ ಶ್ರೀಕಾಂತ್ ಮತ್ತು ನಾನಿ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾಕ್ಕೆ ಸಿದ್ಧತೆಗಳು ನಡೆಯುತ್ತಿದ್ದು ಅಭಿಮಾನಿಗಳು ಖುಷಿಯಾಗಿದ್ದಾರೆ.

ಈ ಸಿನಿಮಾದಲ್ಲಿ ಜಾನ್ವಿ ನಾನಿಗೆ ನಾಯಕಿಯಾಗಲಿದ್ದಾರೆನ್ನುವ ಮಾತುಗಳು ಕೇಳಿ ಬಂದಿದೆ. ಸಾಲು ಸಾಲು ಅವಕಾಶಗಳನ್ನು ಪಡೆಯುತ್ತಿರುವ ಜಾನ್ವಿ ತಮ್ಮ ಅಮ್ಮನಂತೆ ತೆಲುಗು ಸಿನಿಮಾ ರಂಗದಲ್ಲಿ ಹೆಸರನ್ನು ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ. ‌

Leave a Comment