Kannada Serial TRP: ಹೊಸ ಹೊಸ ಕಥೆಗಳ ಮೂಲಕ ಕಿರುತೆರೆಯ ಪ್ರೇಕ್ಷಕರಿಗೆ ಮನರಂಜನೆ ನೀಡಲು ಹೊಸ ಹೊಸ ಸೀರಿಯಲ್ ಗಳು ಕಿರುತೆರೆಗೆ ಎಂಟ್ರಿ ನೀಡುತ್ತಿದ್ದು, ನೋಡುಗರ ಮನಸ್ಸನ್ನ ಗೆಲ್ಲುತ್ತಿದ್ದರೆ ಇನ್ನೊಂದು ಕಡೆ ಹಳೆಯ ಸೀರಿಯಲ್ ಗಳು ಸಹಾ ತಮ್ಮ ಜನಪ್ರಿಯತೆಯನ್ನು ಹಾಗೆ ಉಳಿಸಿಕೊಂಡು ಹೊಸ ಸೀರಿಯಲ್ ಗಳಿಗೆ ಗಟ್ಟಿ ಪೈಪೋಟಿಯನ್ನು ನೀಡುತ್ತಿದೆ. ಆದರೆ ಟಿ ಆರ್ ಪಿ (Kannada Serial TRP) ಮಾಹಿತಿ ಹೊರ ಬಂದಾಗ ಯಾವ ಸೀರಿಯಲ್ ಜನರಿಗೆ ಎಷ್ಟು ಹಿಡಿಸಿದೆ ಎನ್ನುವುದು ಅರ್ಥವಾಗುತ್ತಾರೆ. ಹಾಗಾದರೆ ಈ ವಾರ ಸೀರಿಯಲ್ ಗಳ ಸ್ಥಾನ ಏನೆಂದು ತಿಳಿಯೋಣ ಬನ್ನಿ.
ಎಂದಿನಂತೆ ಉಮಾಶ್ರೀ ಮತ್ತು ಮಂಜು ಭಾ಼ಷಿಣಿ ಅವರು ಪ್ರಮುಖ ಪಾತ್ರದಲ್ಲಿರುವ ಪುಟ್ಟಕ್ಕನ ಮಕ್ಕಳು (Puttakkana Makkalu) ಮೊದಲ ಸ್ಥಾನದಲ್ಲೇ ಮುಂದುವರೆದಿದೆ. ಸೀರಿಯಲ್ ನಲ್ಲಿ ಬಂಗಾರಮ್ಮನ ಜಾಗಕ್ಕೆ ಸಿಂಗಾರಮ್ಮನ ಎಂಟ್ರಿ ಆಗಿದೆ. ಇದೇ ವೇಳೆ ರಾಧಾ ತನ್ನ ಗ್ಯಾಂಗ್ ಜೊತೆ ಸೇರಿ ಮತ್ತೆ ಮತ್ತೆ ಹೊಸ ಹೊಸ ಕುತಂತ್ರಗಳನ್ನು ಮಾಡೋದ್ರಲ್ಲಿ ತೊಡಗಿಕೊಂಡಿದ್ದಾಳೆ.
ಕಳೆದ ಒಂದಷ್ಟು ವಾರಗಳಿಂದಲೂ ಟಾಪ್ ಎರಡರಲ್ಲೇ ಇದ್ದ ಲಕ್ಷ್ಮೀ ನಿವಾಸ ಸೀರಿಯಲ್ ಗೆ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಭರ್ಜರಿ ಟಕ್ಕರ್ ನೀಡಿದ್ದು, ಈ ವಾರ ಶ್ರಾವಣಿ ಸುಬ್ರಹ್ಮಣ್ಯ ಎರಡನೇ ಸ್ಥಾನಕ್ಕೆ ಬಂದಿದೆ. ವಾರದಿಂದ ವಾರಕ್ಕೆ ಜನಮೆಚ್ಚುಗೆ ಪಡೆಯುತ್ತಾ ಶ್ರಾವಣಿ ಸುಬ್ರಹ್ಮಣ್ಯ ಕಡಿಮೆ ಅವಧಿಯಲ್ಲೇ ಎರಡನೇ ಸ್ಥಾನಕ್ಕೆ ಬಂದಿರುವುದು ಅಚ್ಚರಿ ಮೂಡಿಸಿದೆ.
ಪುಟ್ಟಕ್ಕನ ಮಕ್ಕಳಿಗೆ ಗಟ್ಟಿ ಪೈಪೋಟಿ ನೀಡಿ ಮೊದಲ ಸ್ಥಾನಕ್ಕೂ ಲಗ್ಗೆ ಇಟ್ಟಿದ್ದ ಲಕ್ಷ್ಮೀ ನಿವಾಸ ಈ ವಾರ ಮೂರನೇ ಸ್ಥಾನಕ್ಕೆ ಇಳಿದಿದೆ. ಈ ವಾರ ಲಕ್ಷ್ಮೀ ನಿವಾಸಕ್ಕೆ (Lakshmi Nivasa) ಟಿ ಆರ್ ಪಿ ಯಲ್ಲಿ ಸ್ವಲ್ಪ ಇಳಿಮುಖವಾಗಿರುವ ಕಾರಣದಿಂದಾಗಿ ಅದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಹಾಗಿದೆ. ಮುಂದಿನ ವಾರ ಮತ್ತೆ ತನ್ನ ಸ್ಥಾನ ಪಡೆದುಕೊಳ್ಳುತ್ತಾ? ಕಾದು ನೋಡಬೇಕಾಗಿದೆ.
ಸೀತಾ ರಾಮ (SeethaRama) ಸೀರಿಯಲ್ ನಲ್ಲಿ ಇಷ್ಟು ದಿನ ಸೀತಾ ರಾಮ್ ಮದುವೆ ಎಪಿಸೋಡ್ ಗಳು ರಂಜಿಸಿದ್ದವು. ಈಗ ಸೀತಾ ಮತ್ತು ಸಿಹಿ ಇಬ್ಬರೂ ರಾಮ್ ಮನೆಗೆ ಬಂದಿದ್ದಾರೆ. ಹೊಸ ಜೀವನದ ಶುಭಾರಂಭ ಮಾಡಿದ್ದಾರೆ. ಇದೇ ವೇಳೆ ಭಾರ್ಗವಿ ತನ್ನ ಹೊಸ ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನಕ್ಕೆ ಕೈ ಹಾಕಿದ್ದು, ಈ ವಾರ ಸೀತಾ ರಾಮ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
ಇನ್ನು ಈ ವಾರ ಟಿ ಆರ್ ಪಿ ಯಲ್ಲಿ ಬಹುದೊಡ್ಡ ಬದಲಾವಣೆ ಎನ್ನುವಂತೆ ಲಕ್ಷ್ಮೀ ಬಾರಮ್ಮ (Lakshmi Baramma) ಸೀರಿಯಲ್ ಐದನೇ ಸ್ಥಾನದಲ್ಲಿದ್ದು, ಅಮೃತಧಾರೆ ಸೀರಿಯಲ್ ಟಾಪ್ ಐದರ ರೇಸ್ ನಿಂದ ಹೊರ ಬಿದ್ದಿರುವುದು ಸಹಾ ಅಚ್ಚರಿಯನ್ನು ಮೂಡಿಸಿದೆ. ಸದಾ ಟಾಪ್ ಐದರಲ್ಲಿ ಇರುತ್ತಿದ್ದ ಅಮೃತಧಾರೆ ಈ ವಾರ ತನ್ನ ಸ್ಥಾನ ಕಳೆದುಕೊಂಡಿದೆ.