Actor Suriya: ತೆಲುಗು ಸಿನಿಮಾ ರಂಗದಲ್ಲಿ ಸ್ಟಾರ್ ನಿರ್ದೇಶಕನಾಗಿ ಹೆಸರನ್ನು ಪಡೆದುಕೊಂಡಿರುವ ರಾಜಮೌಳಿ (Rajamouli) ನಿರ್ದೇಶನದ ಯಾವುದೇ ಸಿನಿಮಾಗಳೂ ಸೋಲನ್ನು ಖಂಡಿಲ್ಲ. ಅದ್ದೂರಿ ಸಿನಿಮಾಗಳನ್ನು ನಿರ್ದೇಶನ ಮಾಡುವ ಮೂಲಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜಮೌಳಿ ಹೆಸರನ್ನು ಪಡೆದುಕೊಂಡಿದ್ದಾರೆ. ರಾಜ ಮೌಳಿ ಅವರ ನಿರ್ದೇಶನದ ಸಿನಿಮಾದಲ್ಲಿ ಒಂದು ಅವಕಾಶ ಸಿಕ್ಕರೆ ಸಾಕೆಂದು ದಕ್ಷಿಣದ ಸಿನಿಮಾ ರಂಗದಿಂದ ಹಿಡಿದು ಬಾಲಿವುಡ್ ನಟರವರಿಗೆ ಎಲ್ಲರೂ ಕಾಯ್ತಾರೆ.
ದಕ್ಷಿಣದ ಸಿನಿಮಾಗಳೆಂದರೆ ಮೂಗು ಮುರಿಯುತ್ತಿದ್ದ ಬಾಲಿವುಡ್ ಸ್ಟಾರ್ ಗಳು ಇವತ್ತು ರಾಜಮೌಳಿ ಸಿನಿಮಾ ಅಂದ್ರೆ ತಕ್ಷಣ ಓಕೆ ಅಂತ ಹೇಳ್ತಾರೆ. ಅತಿಥಿ ಪತ್ರಗಳಲ್ಲಿ ನಟಿಸಲೂ ಹಿಂದೇಟು ಹಾಕುವುದಿಲ್ಲ. ಆದರೆ ತಮಿಳಿನ ಸ್ಟಾರ್ ನಟ ಸೂರ್ಯ (Actor Suriya) ಮಾತ್ರ ರಾಜಮೌಳಿ ಅವರ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ನಿರಾಕರಿಸಿದ್ದ ವಿಚಾರವನ್ನು ಸೂರ್ಯ ಸ್ವತಃ ಹೇಳಿಕೊಂಡು ಪಶ್ಚಾತ್ತಾಪ ಪಟ್ಟಿದ್ದುಂಟು.
ಜೀವನದಲ್ಲಿ ಎಲ್ಲರೂ ಕೂಡಾ ತಪ್ಪುಗಳನ್ನು ಮಾಡುತ್ತಾರೆ. ನಾನೂ ತಪ್ಪು ಮಾಡಿದ್ದೇನೆ. ರಾಜಮೌಳಿ ಅವರ ನಿರ್ದೇಶನದ ಸಿನಿಮಾ ಒಂದರಲ್ಲಿ ನಟಿಸುವುದಕ್ಕೆ ನಾನು ಹಿಂದೇಟು ಹಾಕಿದ್ದೆ. ಅದು ಬಹಳ ದೊಡ್ಡ ತಪ್ಪಾಗಿತ್ತು. ಮುಂದೆ ನಿಮ್ಮ ಸಿನಿಮಾದಲ್ಲಿ ನಟಿಸುವ ಅವಕಾಶ ಇದ್ದರೆ ಹೇಳಿ ಮಾಡ್ತೀನಿ, ಬಾಹುಬಲಿ ಸಿನಿಮಾದಲ್ಲಿ ಸಣ್ಣ ಪಾತ್ರೆ ಇದ್ದರೂ ಹೇಳಿ ನಟಿಸೋಕೆ ಸಿದ್ದ ಎನ್ನುವ ಮಾತುಗಳನ್ನ ಹೇಳಿದ್ದರು.
ಇಷ್ಟಕ್ಮೂ ಸೂರ್ಯ ನಿರಾಕರಿಸಿದ ಸಿನಿಮಾ ಯಾವುದು ಎಂದರೆ, ರಾಜಮೌಳಿ ನಿರ್ದೇಶನದಲ್ಲಿ ತೆಲುಗು ನಟ ನಿತಿನ್ ನಾಯಕನಾಗಿ ಕಾಣಿಸಿಕೊಂಡಿದ್ದ ಸೈ (Sye) ಸಿನಿಮಾ ತೆರೆಗೆ ಬಂದು ಬರೋಬ್ಬರಿ 20 ವರ್ಷಗಳ ಕಾಲ ಕಳೆದಿದೆ. ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸುವ ಅವಕಾಶ ಸೂರ್ಯ ಅವರಿಗೆ ದಕ್ಕಿತ್ತು. ಆದರೆ ಕೆಲವು ಕಾರಣಗಳಿಂದ ಸೂರ್ಯ ಆ ಸಿನಿಮಾವನ್ನ ಮಾಡಲು ಒಪ್ಪಿಕೊಂಡಿರಲಿಲ್ಲ.
ಸೈ ಸಿನಿಮಾ ತೆಲುಗಿನಲ್ಲಿ ಬ್ಲಾಕ್ಬಸ್ಟರ್ ಸಿನಿಮಾಗಳ ಸಾಲಿಗೆ ಸೇರಿತು. ಅಲ್ಲದೇ ಯುವ ನಟ ನಿತಿನ್ ಅವರಿಗೆ ಈ ಸಿನಿಮಾ ದೊಡ್ಡ ಮಟ್ಟದ ಹೆಸರು ಮತ್ತು ಜನಪ್ರಿಯತೆಯನ್ನು ತಂದು ಕೊಟ್ಟಿದ್ದು ಮಾತ್ರವೇ ಅಲ್ಲದೇ ಅವರ ಕೆರಿಯರ್ ನಲ್ಲೊಂದು ಮೈಲಿಗಲ್ಲಿನಂತಹ ಸಿನಿಮಾ ಆಗಿ ಬದಲಾಯಿತು. ಇಂತಹ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದು ಸೂರ್ಯ ಅವರ ಬ್ಯಾಡ್ ಲಕ್ ಆಗಿತ್ತು.