Kalki 2898 AD: ಕಲ್ಕಿ ಸಿನಿಮಾದಲ್ಲಿ ನಾಯಕಿ ಆಗೋ ಸೂಪರ್ ಚಾನ್ಸ್ ಮಿಸ್ ಮಾಡ್ಕೊಂಡ ಸ್ಟಾರ್ ನಟಿ ಯಾರು?

Written by Soma Shekar

Published on:

---Join Our Channel---

Kalki 2898 AD: ಕಲ್ಕಿ 2898 AD (Kalki 2898 AD) ಸದ್ಯಕ್ಕಂತೂ ಎಲ್ಲೆಡೆ ಭರ್ಜರಿ ಸುದ್ದಿಯನ್ನು ಮಾಡುತ್ತಿರುವ ಸಿನಿಮಾ ಆಗಿದೆ. ಪ್ರಭಾಸ್ (Prabhas) ನಾಯಕನಾಗಿರುವ ಈ ಸಿನಿಮಾ ಮೇಲೆ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಸಿನಿಮಾ ಬಿಡುಗಡೆಯ ನಂತರ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ಖಂಡಿತ ಖುಷಿಯಾಗಿದ್ದಾರೆ. ಕಲ್ಕಿ ಸಿನಿಮಾದ ಮೇಕಿಂಗ್ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ.‌ ಈ ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ಕಮಲ ಹಾಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದೇ ಸಿನಿಮಾದ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡ ಸ್ಟಾರ್ ಗಳ ಒಂದು ದಂಡೇ ಇದೆ ಅನ್ನೋದು ಸಿನಿಮಾ ನೋಡಿದ ಮೇಲೆ ಅನೇಕರಿಗೆ ಗೊತ್ತಾಗಿದೆ ಹಾಗೂ ಇದು ಸಿಕ್ಕಾಪಟ್ಟೆ ಅಚ್ಚರಿಯನ್ನ ಸಹಾ ಮೂಡಿಸಿದ್ದು ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಕಲ್ಕಿ ಸಿನಿಮಾದಲ್ಲಿ ನಾಯಕಿಯಾದ ದೀಪಿಕಾ ಪಡುಕೋಣೆ (Deepika Padukone) ಸಹಾ ಈಗ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಸುದ್ದಿಯಾಗುತ್ತಿದ್ದಾರೆ. ಆದರೆ ಈ ಸಿನಿಮಾದಲ್ಲಿ ನಾಯಕಿಯಾಗುವ ಒಂದು ಅದ್ಭುತ ಅವಕಾಶವನ್ನ ಮಿಸ್ ಮಾಡ್ಕೊಂಡಿದ್ದಾರೆ ಅನ್ನೋ ಸುದ್ದಿ ಈಗ ಹೊರಗೆ ಬಂದಿದೆ.

ಈ ಸುದ್ದಿ ಕೇಳಿ ಫ್ಯಾನ್ಸ್ ಖಂಡಿತ ಸಿಕ್ಕಾಪಟ್ಟೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹರಿದಾಡ್ತಾ ಇರೋ ಸುದ್ದಿಗಳ ಪ್ರಕಾರ ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ (Pooja Hegde) ನಾಯಕಿಯಾಗಬೇಕಿತ್ತಂತೆ. ಆದರೆ ಇದಕ್ಕೂ ಮುನ್ನ ಪೂಜಾ ಮತ್ತು ಪ್ರಭಾಸ್ ಜೋಡಿಯಾಗಿ ನಟಿಸಿದ ಬಹುಕೋಟಿ ಮೌಲ್ಯದಲ್ಲಿ ನಿರ್ಮಾಣವಾಗಿದ್ದ ಅದ್ದೂರಿ ಸಿನಿಮಾ ರಾಧೇ ಶ್ಯಾಮ್ ಕಂಡ ಸೋಲಿನ ಕಾರಣದಿಂದಾಗಿ ಕಲ್ಕಿ ಚಿತ್ರತಂಡ ಪೂಜಾ ಹೆಗ್ಡೆ ಬೇಡ ಎಂದು ನಿರ್ಧಾರವನ್ನು ಮಾಡಿದ್ದರು ಎನ್ನುವ ಮಾತುಗಳು ಕೇಳಿ ಬಂದಿದೆ.

ಈ ವಿಷಯ ಎಷ್ಟು ನಿಜವೋ , ಎಷ್ಟು ಸುಳ್ಳೋ ಗೊತ್ತಿಲ್ಲವಾದರೂ ಒಂದು ವೇಳೆ ಪೂಜಾ ಹೆಗ್ಡೆ ಈ ಸಿನಿಮಾ ಮಾಡಿದ್ದರೆ ಖಂಡಿತ ನಟಿಗೆ ಒಂದು ದೊಡ್ಡ ಬ್ರೇಕ್ ಸಿಗುತ್ತಿತ್ತು ಎನ್ನುವುದನ್ನು ಖಚಿತವಾಗಿ ಹೇಳಬಹುದು. ಸೌತ್ ಸಿ‌ನಿಮಾಗಳಲ್ಲಿ ಸತತ ಸೋಲುಗಳಿಂದ ಕೇವಲ ಬಾಲಿವುಡ್ ಕಡೆಗೆ ಗಮನ ನೀಡಿರುವ ಪೂಜಾ ಗೆ ಮತ್ತೆ ಟಾಲಿವುಡ್ ನಲ್ಲಿ ತಮ್ಮ ಮೋಡಿ ಮಾಡೋದಕ್ಕೆ ಕಲ್ಕಿ ಖಂಡಿತ ನೆರವನ್ನ ನೀಡ್ತಾ ಇತ್ತು.

Leave a Comment