Vijay Devarakonda: ಹೀರೋ ಆಗಿ ಮೂರು ಫ್ಲಾಪ್ ನಂತ್ರ ಈಗ ಅತಿಥಿ ಪಾತ್ರದಲ್ಲಿ ಅಬ್ಬರಿಸಿದ ವಿಜಯ ದೇವರಕೊಂಡ

Written by Soma Shekar

Published on:

---Join Our Channel---

kalki 2898 AD: ತೆಲುಗು ಸಿನಿಮಾ ರಂಗದ ಯುವ ಸ್ಟಾರ್ ನಟರಲ್ಲಿ ವಿಜಯ ದೇವರಕೊಂಡ (Vijay Devarakonda) ಕೂಡಾ ಒಬ್ಬರಾಗಿದ್ದಾರೆ.‌ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಈ ನಟನಿಗೆ ಇತ್ತೀಚಿನ ದಿನಗಳಲ್ಲಿ ಯಾವುದೇ ಸಿನಿಮಾದಲ್ಲೂ ಹೇಳಿಕೊಳ್ಳುವಂತಹ ದೊಡ್ಡ ಸಕ್ಸಸ್ ಸಿಕ್ಕಿಲ್ಲ. ಲೈಗರ್, ಖುಷಿ ಮತ್ತು ಫ್ಯಾಮಿಲಿ ಸ್ಟಾರ್ ಸಿನಿಮಾಗಳಲ್ಲಿ ವಿಜಯ್ ದೇವರಕೊಂಡ ನಾಯಕನಾಗಿ ಕಾಣಿಸಿಕೊಂಡಿದ್ದರು. ಆದರೆ ಈ ಸಿನಿಮಾಗಳು ನಿರೀಕ್ಷಿತ ಗೆಲುವನ್ನು ಪಡೆದುಕೊಳ್ಳುವಲ್ಲಿ ವಿಫಲವಾದವು.

ಆದರೆ ಈಗ ವಿಜಯ ದೇವರಕೊಂಡ ಹೊಸ ಸಿನಿಮಾದಲ್ಲಿ ಅತಿಥಿ ಪಾತ್ರವನ್ನು ಮಾಡುವ ಮೂಲಕ ತನ್ನ ಪಾತ್ರದ ಬಗ್ಗೆ ಬ್ಲಾಕ್‌ಬಸ್ಟರ್ ಟಾಕ್ ಅನ್ನು ಪಡೆದುಕೊಳ್ಳುತ್ತಿದ್ದಾರೆ.‌ ಹೌದು, ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಾಯಕನಾಗಿರುವ, ವೈಜಯಂತಿ ಮೂವೀಸ್ ನ ಪ್ರತಿಷ್ಠಿತ ಸಿನಿಮಾ ಕಲ್ಕಿ 2898AD ಯಲ್ಲಿ (Kalki 2898 AD) ವಿಜಯ ದೇವರಕೊಂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಿನಿಮಾ ನೋಡಿದವರು ಶಾಕ್ ಆಗಿದ್ದಾರೆ.‌

ಕಲ್ಕಿ ಸಿನಿಮಾದಲ್ಲಿ ವಿಜಯ ದೇವರಕೊಂಡ ನಟಿಸಿದ್ದಾರೆ ಎನ್ನುವ ವಿಚಾರ ಇದುವರೆಗೆ ಎಲ್ಲಿ ಕೂಡಾ ಹೊರಗಡೆ ಬಂದಿರಲಿಲ್ಲ. ಆದರೆ ಈಗ ಥಿಯೇಟರ್ ನಲ್ಲಿ ಸಿನಿಮಾ ನೋಡಿದವರಿಗೆ ಸಾಕಷ್ಟು ಜನ ಸ್ಟಾರ್ ಗಳು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಆಶ್ಚರ್ಯದ ಜೊತೆಗೆ ಶಾಕ್ ಕೂಡಾ ನೀಡಿದೆ. ಈ ಸಿನಿಮಾದಲ್ಲಿ ವಿಜಯ ದೇವರಕೊಂಡ ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಅರ್ಜುನ ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ನಾಗ್ ಅಶ್ವಿನ್ (Nag Ashwin) ಅವರು ನಿರ್ದೇಶನ ಮಾಡಿದ್ದ ಮಹಾನಟಿ ಸಿನಿಮಾದಲ್ಲಿಯೂ ವಿಜಯ ದೇವರಕೊಂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಕಲ್ಕಿಯಲ್ಲಿ ನಾಗ್ ಅಶ್ವಿನ್ ಮತ್ತೊಮ್ಮೆ ವಿಜಯ ದೇವರಕೊಂಡ ಅವರನ್ನು ತಮ್ಮ ಸಿನಿಮಾದಲ್ಲಿ ಪ್ರಮುಖ ಪಾತ್ರ ಒಂದರ ಮೂಲಕ ಪ್ರೇಕ್ಷಕರ ಮುಂದೆ ಕರೆ ತಂದಿದ್ದಾರೆ. ಅರ್ಜುನನ ಪಾತ್ರದಲ್ಲಿ ವಿಜಯ ದೇವರಕೊಂಡ ಅವರನ್ನು ನೋಡಿ ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

Leave a Comment