Anchor Anasuya: ಪುರುಷರಿಗೆ ಸವಾಲ್ ಅಂತ ವೇದಿಕೆ ಮೇಲೆ ಜಾಕೆಟ್ ಬಿಚ್ಚಿದ ಅನಸೂಯ, ಶಾಕ್ ನಲ್ಲಿ ನೆಟ್ಟಿಗರು

Written by Soma Shekar

Published on:

---Join Our Channel---

Anchor Anasuya: ತೆಲುಗಿನ ಬೋಲ್ಡ್ ನಟಿ, ಸ್ಟಾರ್ ನಿರೂಪಕಿ ಅನಸೂಯಾ ಭಾರದ್ವಾಜ್ (Anchor Anasuya) ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಬೆಳ್ಳಿ ತೆರೆಯಲ್ಲಿ ನಟಿಯಾಗಿ, ಕಿರುತೆರೆಯಲ್ಲಿ ನಿರೂಪಕಿಯಾಗಿ ಅನಸೂಯ ಪಡೆದಿರುವ ಜನಪ್ರಿಯತೆ ಅಷ್ಟಿಷ್ಟಲ್ಲ. ತೆಲುಗಿನಲ್ಲಿ ಒಬ್ಬ ಸ್ಟಾರ್ ನಟಿಯಷ್ಟೇ ಹೆಸರನ್ನು ಇವರು ಮಾಡಿದ್ದಾರೆ. ಪ್ರಸ್ತುತ ಅನಸೂಯಾ ಪುಷ್ಪ 2 (Pushpa 2) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಟಿ ಸಾಮಾನ್ಯವಾಗಿ ತಾವು ತೊಡುವ ಡ್ರೆಸ್ ಗಳ ವಿಚಾರವಾಗಿ ಟ್ರೋಲ್ ಆಗುತ್ತಲೇ ಇರುತ್ತಾರೆ.

ಆದರೆ ಈಗ ನಟಿ ಶೋ ಒಂದರಲ್ಲಿ ಡ್ಯಾನ್ಸ್ ಮಾಸ್ಟರ್ ಶೇಖರ್ (Shekhar Master) ಜೊತೆಗೆ ಪೈಪೋಟಿಗಿಳಿದು ತಾವು ಧರಿಸಿದ್ದ ಜಾಕೆಟ್ ಅನ್ನು ತೆಗೆದಿದ್ದಾರೆ. ತೆಲುಗು ಕಿರುತೆರೆಯಲ್ಲಿ ಕಿರ್ರಾಕ್ ಬಾಯ್ಸ್, ಕಿಲಾಡಿ ಗರ್ಲ್ಸ್ (Kirrak Boys Khiladi Girls) ಎನ್ನುವ ಹೊಸ ರಿಯಾಲಿಟಿ ಶೋ ಆರಂಭವಾಗಿದ್ದು, ಶೋ ನ ಪ್ರೊಮೋ ಬಿಡುಗಡೆ ಆಗಿದ್ದು ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದ್ದು ಪ್ರೊಮೋ ಅಂತೂ ಭರ್ಜರಿ ವೈರಲ್ ಆಗ್ತಿದೆ. ಇದಕ್ಕೆ ಕಾರಣವಾಗಿದ್ದು ಅನಸೂಯ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

ಈ ಹೊಸ ಶೋನಲ್ಲಿ ಕಿರ್ರಾಕ್ ಬಾಯ್ಸ್ ಟೀಮ್ ಗೆ ಶೇಖರ್ ಮಾಸ್ಟರ್, ಕಿಲಾಡಿ ಗರ್ಲ್ಸ್ ಟೀಂಗೆ ಅನಸೂಯ ಲೀಡರ್ಸ್ ಆಗಿದ್ದು , ವೇದಿಕೆ ಮೇಲೆ ಟೀಮ್ ಲೀಡರ್ಸ್ ಒಬ್ಬರಿಗೊಬ್ಬರು ಚಾಲೆಂಜ್ ಗಳನ್ನು ಕೊಟ್ಟು ಅದನ್ನು ಡೇರ್ ಆಗಿ ಮಾಡುತ್ತಿದ್ದರು, ಈ ವೇಳೆ ಒಂದು ಸಂದರ್ಭದಲ್ಲಿ ಶೇಖರ್ ಮಾಸ್ಟರ್ ತಮ್ಮ ಶರ್ಟ್ ಅನ್ನು ಬಿಚ್ಚಿದರು ಇದಕ್ಕೆ ಸವಾಲ್ ಆಗಿ ಅನಸೂಯ ತಾವು ಧರಿಸದ್ದ ಬ್ಲೇಜರ್ ತೆಗೆದಿದ್ದಾರೆ.

ಅನಸೂಯ ಹೀಗೆ ಡೇರಿಂಗ್ ಆಗಿ ಬ್ಲೇಜರ್ ತೆಗೆದ ದೃಶ್ಯವನ್ನು ನೋಡಿದ ನೆಟ್ಟಿಗರು ಮತ್ತು ವೀಕ್ಷಕರು ಶಾಕ್ ಆಗಿದ್ದಾರೆ. ನಟಿಯ ಈ ವರ್ತನೆಗೆ ಪರ ಮತ್ತು ವಿರೋಧ ಮಾತುಗಳು ಕೇಳಿ ಬರುತ್ತಿದೆ. ಇತ್ತೀಚಿಗೆ ನಟಿ ಯಾವುದೇ ಹೊಸ ಸಿನಿಮಾಗಳನ್ನು ಮಾಡುತ್ತಿಲ್ಲ. ಸದ್ಯಕ್ಕೆ ಪುಷ್ಪ 2 ಬಿಟ್ಟರೆ ಬೇರೆ ಯಾವುದೇ ಸಿನಿಮಾ ನಟಿಯ ಕೈಯಲ್ಲಿ ಇಲ್ಲ. ಈಗ ಕಿರ್ರಾಕ್ ಬಾಯ್ಸ್ ಮತ್ತು ಕಿಲಾಡಿ ಗರ್ಲ್ಸ್ ಮೂಲಕ ಮತ್ತೆ ನಟಿ ಕಿರುತೆರೆಗೆ ಎಂಟ್ರಿಯನ್ನು ನೀಡಿದ್ದಾರೆ.

Leave a Comment