Puttakkana Makkalu: ಕನ್ನಡ ಕಿರುತೆರೆಯ ನಂಬರ್ ಒನ್ ಸೀರಿಯಲ್ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದುವ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ , ಟಿ ಆರ್ ಪಿ ವಿಚಾರದಲ್ಲಿ ಬೇರೆಲ್ಲಾ ಸೀರಿಯಲ್ ಗಳನ್ನು ಹಿಂದೆ ಹಾಕಿ ಕಳೆದ ಹಲವು ತಿಂಗಳುಗಳಿಂದಲೂ ನಂಬರ್ ಒನ್ ಸ್ಥಾನದಲ್ಲೇ ಭದ್ರವಾಗಿದೆ. ಸೀರಿಯಲ್ ಕಥೆಯಲ್ಲಿನ ಹೊಸ ಹೊಸ ತಿರುವುಗಳು ಭರ್ಜರಿ ಮನರಂಜನೆಯನ್ನು ನೀಡ್ತಿದೆ. ಪುಟ್ಟಕ್ಕನ ಮಕ್ಕಳು ಸೀರಿಯಲ್ ನ ಪ್ರತಿಯೊಂದು ಪಾತ್ರಕ್ಕೂ ಸಹಾ ತನ್ನದೇ ಆದ ಪ್ರಾಮುಖ್ಯತೆ ಇದ್ದು, ಎಲ್ಲಾ ಪಾತ್ರಗಳು ಕೂಡಾ ಪ್ರೇಕ್ಷಕರನ್ನು ರಂಜಿಸುತ್ತಿವೆ.
ಆದರೆ ಇತ್ತೀಚಿನ ಕೆಲವು ಎಪಿಸೋಡ್ ಗಳನ್ನು ನೋಡಿದ ಮೇಲೆ ನೆಟ್ಟಿಗರು ಒಂದು ಪಾತ್ರದ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಹೌದು, ಪುಟ್ಟಕ್ಕನ ಮಕ್ಕಳಲ್ಲಿ ಗಟ್ಟಿಗಿತ್ತಿ ಹಾಗೂ ಬಹಳ ಧೈರ್ಯವಂತೆ ಎಂದೇ ಹೆಸರನ್ನು ಪಡೆದಿರುವ ಸ್ನೇಹ ಪಾತ್ರದ ಬಗ್ಗೆ ಪ್ರೇಕ್ಷಕರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ ಅಂದ್ರೆ ಅದು ಖಂಡಿತ ಸುಳ್ಳಲ್ಲ. ಪ್ರೇಕ್ಷಕರ ಈ ಅಸಮಾಧಾನಕ್ಕೆ ಕಾರಣವಾದ್ರು ಏನು? ತಿಳಿಯೋಣ ಬನ್ನಿ.
ಸ್ನೇಹ (Sneha) ತಾನು ನೇರ, ದಿಟ್ಟ ಹಾಗೂ ಸತ್ಯದ ಪರ ಎನ್ನುವ ಧಾವಂತದಲ್ಲಿ ಪ್ರತಿ ಹೆಜ್ಜೆಯಲ್ಲೂ ಬಂಗಾರಮ್ಮನ ವಿರುದ್ಧ ನಿಲ್ಲುವುದು ತೀರಾ ಸಾಮಾನ್ಯವಾಗಿದೆ. ಈಗಂತೂ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಅತ್ತೆ ಬಂಗಾರಮ್ಮನ (Bangaramma) ಮೇಲೆ ಪೋಲಿಸ್ ಸ್ಟೇಷನ್ ನಲ್ಲಿ ದೂರನ್ನ ದಾಖಲಿಸಿ, ಜೈಲಿಗೆ ಕಳಿಸಿದ್ದಾಳೆ. ಸಾಲದ ಬಡ್ಡಿ ಕೊಡದ ವ್ಯಕ್ತಿಯೊಬ್ಬ ಆ ತ್ಮ ಹ ತ್ಯೆ ಗೆ ಪ್ರಯತ್ನಿಸಿ, ತನ್ನ ಸಾವಿಗೆ ಬಂಗಾರಮ್ಮ ಕಾರಣ ಅಂತ ಬರೆದಿದ್ದಾನೆ.
ಇದರಿಂದ ಸಿಟ್ಟಾದ ಸ್ನೇಹ ಬಂಗಾರಮ್ಮನಿಗೆ ಬಡ್ಡಿ ವ್ಯವಹಾರ ನಿಲ್ಸೋಕೆ ಹೇಳಿದ್ದಾಳೆ. ಆದ್ರೆ ಬಂಗಾರಮ್ಮ ಇದಕ್ಕೆ ಒಪ್ಪಿಲ್ಲ. ಸ್ನೇಹ ಬಂಗಾರಮ್ಮನ ಮೇಲೆ ದೂರು ಕೊಟ್ಟು, ಪೋಲಿಸರು ನೇರವಾಗಿ ಮನೆಗೆ ಬಂದು ಬಂಗಾರಮ್ಮನ್ನ ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದಾರೆ. ಇದರಿಂದ ಕಂಠಿ ಮತ್ತು ಪುಟ್ಟಕ್ಕ ಕೂಡಾ ಸ್ನೇಹ ಮೇಲೆ ಕೋಪಗೊಂಡಿದ್ದಾರೆ. ಈ ಬೆಳವಣಿಗೆ ನೋಡಿ ಪ್ರೇಕ್ಷಕರು ಬೇಸರ ಗೊಂಡಿದ್ದಾರೆ.
ಸ್ನೇಹಾಗೆ ಪ್ರತಿ ವಿಷಯಕ್ಕೆ ಪೋಲಿಸ್ ಸ್ಟೇಷನ್ ಗೆ ಹೋಗೋದು ಬಿಟ್ರೆ ಬೇರೆ ಏನೂ ಗೊತ್ತಿಲ್ವ, ಅಷ್ಟು ಓದಿದ್ದೀನಿ ಅಂತಾಳೆ ಯಾವ ವಿಚಾರದ ಬಗ್ಗೇನೂ ಸ್ವಲ್ಪ ಸಾವಧಾನವಾಗಿ ಯೋಚನೆ ಮಾಡೋಷ್ಟು ತಾಳ್ಮೆ ಇಲ್ವ.. ಈಗೇನಾದ್ರು ಆ ವ್ಯಕ್ತಿ ಆಸ್ಪತ್ರೇಲಿ ಎಚ್ಚರ ಆದ ಮೇಲೆ ತಾನೇ ತಪ್ಪು ಮಾಡಿಬಿಟ್ಟೆ ಬಂಗಾರಮ್ಮನ ತಪ್ಪಿಲ್ಲ ಅಂದ್ರೆ ಸ್ನೇಹ ಏನ್ ಮಾಡ್ತಾಳೆ ಅಂತ ಪ್ರಶ್ನೆ ಮಾಡಿದ್ದಾರೆ ನೆಟ್ಟಿಗರು. ಒಟ್ನಲ್ಲಿ ಸ್ನೇಹ ಆ್ಯಟಿಟ್ಯೂಡ್ ನೋಡಿ ಬಹಳಷ್ಟು ಜನರು ಅಸಮಾಧಾನಗೊಂಡಿದ್ದಾರೆ.