South Stars: ಸ್ಟಾರ್ ನಟರ ವಿಚಾರ ಬಂದಾಗ ಸಹಜವಾಗಿಯೇ ಎಲ್ಲರ ಗಮನವನ್ನು ಸೆಳೆಯುವ ಒಂದು ವಿಷಯ ಏನಂದ್ರೆ ಅದು ಅವರ ಸಂಭಾವನೆ ಆಗಿರುತ್ತೆ. ಯಾವ ನಟ ಎಷ್ಟು ಸಂಭಾವನೆ ಪಡೀತಾರೆ ಅನ್ನೋದನ್ನ ತಿಳಿಯೋ ಕುತೂಹಲ ಅವರ ಅಭಿಮಾನಿಗಳಿಗೆ ಮಾತ್ರವೇ ಅಲ್ಲದೇ ಸಿನಿ ಪ್ರೇಮಿಗಳಲ್ಲೂ ಸಹಾ ಇರುತ್ತೆ.. ಹಾಗಾದರೆ ಟಾಲಿವುಡ್ ನ ಈ ಸ್ಟಾರ್ ಗಳು (south stars) ಪಡೆಯೋ ಸಂಭಾವನೆ ಎಷ್ಟು ತಿಳಿಯೋಣ ಬನ್ನಿ. ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಶುರುವಾದ ಮೇಲೆ ಸಹಜವಾಗಿಯೇ ನಾಯಕ ನಟರು ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಅದರಲ್ಲೂ ಟಾಲಿವುಡ್ ನ ಸ್ಟಾರ್ ಗಳ ಸಿನಿಮಾ ಹಿಟ್ ಆದರೆ ಅವರ ಮುಂದಿನ ಸಿನಿಮಾಕ್ಕೆ ಅವರ ಸಂಭಾವನೆ ದುಪ್ಪಟ್ಟಾದರೂ ಅಲ್ಲಿ ಅಚ್ಚರಿಯೇನಿಲ್ಲ.
ಬಾಹುಬಲಿಯಂತ ದೊಡ್ಡ ಹಿಟ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಪ್ರಭಾಸ್ (Prabhas) ಅವರು ತಮ್ಮ ಸಿನಿಮಾವೊಂದಕ್ಕೆ ಬರೋಬ್ಬರಿ 100 ರಿಂದ 200 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆಯುತ್ತಾರೆ.
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಪುಷ್ಪ ಸಿನಿಮಾ ಮೂಲಕ ಐಕಾನ್ ಸ್ಟಾರ್ ಎಂದು ಬದಲಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆಲುವನ್ನು ಪಡೆದುಕೊಂಡ ನಟನಾಗಿದ್ದಾರೆ. ಪುಷ್ಪ ಸಿನಿಮಾ ನಂತರ ಈ ನಟನ ಸಂಭಾವನೆ ಸಿನಿಮಾವೊಂದಕ್ಕೆ 100 ರಿಂದ 150 ಕೋಟಿ ರೂ. ಗಳಾಗಿದೆ.
ವಯಸ್ಸು ಏರಿದರೂ ಕೂಡಾ ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ಬೇಡಿಕೆ ಕಡಿಮೆಯಾಗಿಲ್ಲ, ಅಭಿಮಾನಿಗಳ ಅಭಿಮಾನಕ್ಕೆ ಕೊರತೆಯೇನಿಲ್ಲ. ಚಿರಂಜೀವಿ ಅವರು ಸಿನಿಮಾವೊಂದಕ್ಕೆ ಪ್ರಸ್ತುತ 50 ರಿಂದ 7೦ ಕೋಟಿ ಗಳ ವರೆಗೆ ಸಂಭಾವನೆಯನ್ನು ಪಡೆಯುತ್ತಾರೆ.
ತ್ರಿಬಲ್ ಆರ್ ಸಿನಿಮಾದ ಮೂಲಕ ಜಾಗತಿಕ ಸ್ಟಾರ್ ಆಗಿರುವ ರಾಮ್ ಚರಣ್ (Ram Charan) ಸಹಾ ಬಹುಬೇಡಿಕೆಯ ನಟನಾಗಿದ್ದಾರೆ. ಈ ಸಿನಿಮಾದ ನಂತರ ಅವರ ಸಂಭಾವನೆ ಕೂಡಾ ದುಪ್ಪಟ್ಟಾಗಿದ್ದು ಸಿನಿಮಾವೊಂದಕ್ಕೆ ಅವರು 80 ರಿಂದ 100 ಕೋಟಿಗಳವರೆಗೆ ಸಂಭಾವನೆ ಪಡೆಯುತ್ತಾರೆ.
ತ್ರಿಬಲ್ ಆರ್ ಸಿನಿಮಾದ ನಂತರ ಜೂ. ಎನ್ ಟಿ ಆರ್ ಬಾಲಿವುಡ್ ಗೂ ಎಂಟ್ರಿಯನ್ನು ನೀಡಿದ್ದಾರೆ. ಹೃತಿಕ್ ರೋಷನ್ ಜೊತೆಗೆ ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಪ್ರಸ್ತುತ ಜೂ. ಎನ್ ಟಿ ಆರ್ ಸಿನಿಮಾವೊಂದಕ್ಕೆ 100 ಕೋಟಿ ರೂ.ಗಳ ಸಂಭಾವನೆಯನ್ನು ಪಡೆಯುತ್ತಿದ್ದಾರೆ.
ಸೂಪರ್ ಸ್ಟಾರ್ ಮಹೇಶ್ ಬಾಬು ಇನ್ನೂ ಪ್ಯಾನ್ ಇಂಡಿಯಾ ಸಿನಿಮಾ ಮಾಡಿಲ್ಲ. ಈಗ ರಾಜಮೌಳಿ ಜೊತೆ ಮಾಡುತ್ತಿರುವ ಸಿನಿಮಾ ಪ್ಯಾನ್ ಇಂಡಿಯಾ ಆಗಲಿದ್ದು, ಮಹೇಶ್ ಬಾಬು ತಮ್ಮ ಸಿನಿಮಾವೊಂದಕ್ಕೆ 80-100 ಕೋಟಿ ರೂ.ಗಳ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ.
ನಟ ಪವನ್ ಕಲ್ಯಾಣ್ ಪ್ರಸ್ತುತ ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಿದ್ದು, ಆಗೊಮ್ಮೆ ಈಗೊಮ್ಮೆ ಎನ್ನುವಂತೆ ಸಿನಿಮಾಗಳಲ್ಲೂ ನಟಿಸುತ್ತಾರೆ. ಸಿನಿಮಾ ಕಡಿಮೆ ಮಾಡಿದರೂ ಬೇಡಿಕೆಗೆ ಕೊರೆತೆ ಇಲ್ಲ ಎನ್ನುವಂತೆ ಸಿನಿಮಾವೊಂದಕ್ಕೆ 60-80 ಕೋಟಿ ಸಂಭಾವನೆ ಪಡೆಯುತ್ತಾರೆ.