SeethaRama Serial : ಸಿಹಿಯ ನಿಜವಾದ ಅಪ್ಪನ ಎಂಟ್ರಿ, ಮೇಘಶ್ಯಾಮ್ ಸಿಹಿಗೆ ಏನಾಗಬೇಕು ?

Written by Soma Shekar

Published on:

---Join Our Channel---

SeethaRama Serial : ಸೀತಾರಾಮ ಸೀರಿಯಲ್ (SeethaRama Serial) ಯಾಕೋ ನಿಧಾನಗತಿಯಲ್ಲಿ ಸಾಗ್ತಿದೆ, ಯಾಕೋ ಬೋರ್ ಹೊಡಿಸ್ತಿದೆ ಅಂತೆಲ್ಲಾ ಪ್ರೇಕ್ಷಕರು ಫೀಲ್ ಆಗೋವಾಗ್ಲೇ ಕಥೆಯಲ್ಲಿ ಹೊಸ ಪಾತ್ರಗಳ ಎಂಟ್ರಿ ಆಗಿದೆ. ಅದರಲ್ಲೂ ಕಥೆಗೆ ಹೊಸ ತಿರುವನ್ನೇ ನೀಡುತ್ತೇನೋ ಅನ್ನೋ ಒಂದು ಪಾತ್ರ ಈಗ ಎಲ್ಲರ ಗಮನವನ್ನು ಸೆಳೆದಿದೆ. ಅದೇ ಡಾ. ಮೇಘಶ್ಯಾಮ್ ಪಾತ್ರ. ಈ ಪಾತ್ರ ಎಂಟ್ರಿ ಕೊಟ್ಟಾಗಿನಿಂದ ಪ್ರೇಕ್ಷಕರ ಮನಸ್ಸಿನಲ್ಲಿರೋ ಒಂದೇ ಅನುಮಾನ ಈ ಪಾತ್ರಕ್ಕೂ, ಸಿಹಿ ಗೂ ಏನೋ ನಂಟಿದೆ ಅನ್ನೋದೇ ಆಗಿದೆ.

ಭಾರ್ಗವಿಯ ಕುತಂತ್ರದಿಂದ ಸಿಹಿ ಈಗ ಒಲ್ಲದ ಮನಸ್ಸಿನಿಂದಲೇ ಬೋರ್ಡಿಂಗ್ ಸ್ಕೂಲ್ ಗೆ ಸೇರಿದ್ದಾಳೆ. ಮೇಘಶ್ಯಾಮ್ ಡಾಕ್ಟರ್ ಆಗಿದ್ದು ಶಾಲೆಯ ಮಕ್ಕಳನ್ನು ನೋಡೋಕೆ ಬಂದ ವೇಳೆ ಅವರಿಗೆ ಸಿಹಿಯ ಪರಿಚಯವಾಗಿದೆ. ಇದನ್ನು ನೀಡಿದ ಕೂಡಲೇ ಪ್ರೇಕ್ಷಕರು ಬಹುಶಃ ಇವರೇ ಸಿಹಿಯ ಅಸಲಿ ತಂದೆ ಇರಬಹುದು ಎನ್ನುವ ಊಹೆಗಳನ್ನು ಮಾಡೋದಕ್ಕೆ ಶುರು ಮಾಡಿದ್ದಾರೆ.

ಅನೇಕರು ತಾವು ಮಾಡಿರುವ ಗೆಸ್ ನಿಜವಾಗಲಿದೆ ಅನ್ನೋ ನಿರೀಕ್ಷೆಯಲ್ಲಿ ಇದ್ದಾರೆ. ಅಲ್ಲದೇ ಸಿಹಿ ಬಹುಶಃ ಶಾಲಿನಿ-ಮೇಘಶ್ಯಾಮ್ ಅವರ ಮಗಳಾಗಿರಬಹುದು. ಮಗು ಮೇಲೆ ಮಮಕಾರವಿಲ್ಲದ ಶಾಲಿನಿ ಅನಂತಲಕ್ಷ್ಮೀಗೆ ಹೇಳಿ ಮಗುವನ್ನು ಅನಾಥಾಶ್ರಮಕ್ಕೆ ನೀಡಿರಬಹುದು. ಅಲ್ಲಿಂದಲೇ ವೈದ್ಯರ ನೆರವಿನಿಂದ ಸೀತಾ ಸಿಹಿಯನ್ನು ಮಗಳಾಗಿ ಪಡೆದಿರುಬಹುದೆಂದು ಊಹಿಸಿದ್ದಾರೆ.

ಒಟ್ನಲ್ಲಿ ಸಿಹಿ ಜನ್ಮ ರಹಸ್ಯ ಯಾವಾಗ ಹೊರ ಬರುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಪ್ರೇಕ್ಷಕರು. ಇನ್ನೊಂದೆಡೆ ಸಿಹಿ ಪಾತ್ರಧಾರಿ ಡಿಕೆಡಿ ಸ್ಪರ್ಧಿಯಾಗಿರೋ ಕಾರಣ ಸೀರಿಯಲ್ ನಲ್ಲಿ ಟೈಮಿಂಗ್ ಕಡಿಮೆ ಮಾಡೋದಕ್ಕೆ ಬೋರ್ಡಿಂಗ್ ಸ್ಕೂಲ್ ಅನ್ನೋ ತಿರುವು ನೀಡಲಾಗಿದೆ ಅನ್ನೋ ಅನುಮಾನ ಗಳು ಸಹಾ ಅನೇಕರಲ್ಲಿ ಇದೆ. ಮುಂದೇನಾಗುತ್ತಾ ಕಾದು ನೋಡಬೇಕಾಗಿದೆ.

Sandalwood News: ವಿಶಿಷ್ಟ ಥೀಮ್ ನಲ್ಲಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ ಹರ್ಷಿಕಾ ಮತ್ತು ಮಿಲನಾ

Leave a Comment