Sandalwood News : ಸ್ಯಾಂಡಲ್ವುಡ್ ನ (Sandalwood News) ಸ್ಟಾರ್ ಕಪಲ್ಸ್ ಆಗಿರುವ ಹರ್ಷಿಕಾ ಪೂಣಚ್ಚ-ಭುವನ್ ಪೊನ್ನಣ್ಣ (Harshika Poonacha) ಮತ್ತು ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ (Darling Krishna Milana Nagaraj) ಇವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಹರ್ಷಿಕಾ ಪೂಣಚ್ಚ ಮತ್ತು ಮಿಲನಾ ನಾಗರಾಜ್ ಇಬ್ಬರೂ ಸಹಾ ತುಂಬು ಗರ್ಭಿಣಿಯಾಗಿದ್ದು, ಬಹಳ ವಿಶೇಷವಾಗಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ.
![](https://news9kannada.com/wp-content/uploads/2024/08/vijay-karnataka-112660380.jpg)
ಹರ್ಷಿಕಾ ಪೂಣಚ್ಚ ಅವರು ರವಿವರ್ಮ ಪೇಂಟಿಂಗ್ನಿಂದ ಸ್ಫೂರ್ತಿಯನ್ನು ಪಡೆದಿದ್ದು ಸುಂದರವಾದ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.
![](https://news9kannada.com/wp-content/uploads/2024/08/vijay-karnataka-112660377.jpg)
ಹರ್ಷಿಕಾ ಅವರ ಪೋಟೋ ರವಿವರ್ಮನ ಕಲಾಕೃತಿಯಷ್ಟೇ ಸುಂದರವಾಗಿದ್ದು, ನೋಡಿದ ಕೂಡಲೇ ನೋಡುಗನ ಮನಸ್ಸನ್ನು ಗೆಲ್ಲುವಂತೆ ಇದೆ.
![](https://news9kannada.com/wp-content/uploads/2024/08/vijay-karnataka-112660376.jpg)
ರೆಟ್ರೋ ಸ್ಟೈಲ್ ನಲ್ಲಿ ಹರ್ಷಿಕಾ ಪರ್ಫೆಕ್ಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆಗಳನ್ನು ನೀಡುತ್ತಾ ನಟಿಗೆ ಶುಭ ಹಾರೈಸುತ್ತಿದ್ದಾರೆ.
![](https://news9kannada.com/wp-content/uploads/2024/08/vijay-karnataka-112660368.jpg)
ಡಾರ್ಲಿಂಗ್ ಕೃಷ್ಣ ಅವರು ತಮ್ಮ ಪತ್ನಿ ಮಿಲನಾ ನಾಗಾರಾಜ್ ಅವರ ಸೀಮಂತವನ್ನು ಬಹಳ ಅದ್ದೂರಿಯಾಗಿ ಕೆಲವೇ ದಿನಗಳ ಹಿಂದೆಯಷ್ಟೇ ಸಾಂಪ್ರದಾಯಿಕವಾಗಿ ನೆರವೇರಿಸಿದ್ದರು.
![](https://news9kannada.com/wp-content/uploads/2024/08/vijay-karnataka-112660372.jpg)
ಈಗ ಅದರ ಬೆನ್ನಲ್ಲೇ ಮಿಲನಾ ಅವರು ಬಹಳ ಸುಂದರವಾದ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿ ಅಭಿಮಾನಿಗಳ ಗಮನವನ್ನು ಸೆಳೆದಿದ್ದಾರೆ.
![](https://news9kannada.com/wp-content/uploads/2024/08/vijay-karnataka-112660369.jpg)
ಕ್ಯಾಂಡಲ್ ಲೈಟ್ ಕ್ವೀನ್ ಥೀಮ್ ನಲ್ಲಿ ಮಿಲನಾ ನಾಗರಾಜ್ ಅವರ ಬೇಬಿ ಬಂಪ್ ಫೋಟೋ ಶೂಟ್ ನಡೆದಿದ್ದು ಸುಂದರವಾದ ಫೋಟೋಗಳಿಗೆ ಮೆಚ್ಚುಗೆಗಳು ಹರಿದು ಬರುತ್ತಿದೆ.
![](https://news9kannada.com/wp-content/uploads/2024/08/vijay-karnataka-112660368-1.jpg)
ಮದುವೆಯಾದ ಮೂರು ವರ್ಷಗಳ ನಂತರ ಇದೀಗ ಬರುವ ಸೆಪ್ಟೆಂಬರ್ ನಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಳ್ಳುತ್ತಿದ್ದಾರೆ.