Viral Video: ವಿಚ್ಚೇದನದ ನಂತರ ಪತಿಯು ತನ್ನ ಮಾಜಿ ಪತ್ನಿಗೆ ಇಂತಿಷ್ಟು ಎಂದು ಜೀವನಾಂಶವನ್ನು ನೀಡಬೇಕಾಗಿರುವುದು ಕಾನೂನಿನ ನಿಯಮವಾಗಿದೆ. ಆದರೆ ಇಂತಹ ಕಾನೂನನ್ನು ದುರುಪಯೋಗ ಪಡಿಸಿಕೊಂಡ ಮಹಿಳೆಯೊಬ್ಬರಿಗೆ ನ್ಯಾಯಾಧೀಶರು ಮಹಿಳೆ ಮತ್ತು ಅವರ ವಕೀಲರಿಗೆ ಸರಿಯಾಗಿ ಕ್ಲಾಸ್ ತೆಗದುಕೊಂಡ ಘಟನೆಯ ವೀಡಿಯೋ (Viral Video) ಒಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಮಹಿಳೆಯು ತನ್ನ ಬ್ರಾಂಡೆಡ್ ಬಟ್ಟೆಗಳು, ಐಶಾರಾಮೀ ಜೀವನಕ್ಕಾಗಿ ಪತಿ ತನಗೆ ಮಾಸಿಕ ಆರು ಲಕ್ಷ ರೂ. ನೀಡಬೇಕೆಂಬ ಬೇಡಿಕೆ ಇಟ್ಟಿದ್ದರು. ಇದನ್ನು ನೋಡಿದ ನ್ಯಾಯಾಧೀಶೆಯವರು ಅವಳ ಖರ್ಚಿಗೆ ಬೇಕಾದ ಹಣವನ್ನು ಅವಳೇ ಸಂಪಾದಿಸಲಿ, ಗಂಡನಿಂದ ಕೇಳೋದಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕರ್ನಾಟಕ (Karnataka) ಹೈಕೋರ್ಟ್ ನಲ್ಲಿ ಮಹಿಳೆ ಜೀವನಾಂಶವಾಗಿ ಮಾಜಿ ಪತಿಯಿಂದ ಲಕ್ಷ ಲಕ್ಷ ಕೇಳಿರುವುದನ್ನು ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ. ಮಹಿಳೆ ಪರ ವಕೀಲರು ಮಹಿಳೆಯ ಮೊಣಕಾಲು ನೋವು, ಪಿಸಿಯೋಥೆರಪಿ ಇತರೆ ಚಿಕಿತ್ಸೆಗಾಗಿ 4 ಲಕ್ಷ ಮತ್ತು ಆಕೆಯ ಬಟ್ಟೆ, ಬ್ರಾಂಡೆಡ್ ಬಟ್ಟೆಗಳು, ಚಪ್ಪಲಿ ಇತ್ಯಾದಿಗಾಗಿ 50 ಸಾವಿರ ಹಾಗೂ ಪೌಷ್ಟಿಕ ಆಹಾರಕ್ಕಾಗಿ 60 ಸಾವಿರ ಬೇಕಾಗುತ್ತದೆ. ಒಟ್ಟು ಪ್ರತಿ ತಿಂಗಳು 6,16,300ರೂ. ನೀಡಬೇಕೆಂದು ತಿಳಿಸಿದ್ದಾರೆ.
ವಾದ ಆಲಿಸಿದ ನ್ಯಾಯಾಧೀಶರು ತಿಂಗಳಿಗೆ ಅಷ್ಟು ಖರ್ಚು ಮಾಡ್ತಾರಾ? ಅಷ್ಟು ಖರ್ಚು ಮಾಡೋದಾದ್ರೆ ಆಕೆ ಸಂಪಾದನೆ ಮಾಡಲಿ. ಗಂಡನ ಮೇಲೆ ಏಕೆ ಅವಲಂಬಿತವಾಗಬೇಕು. ಆಕೆಗೆ ಕುಟುಂಬ, ಮಕ್ಕಳು ಯಾವುದೇ ಜವಾಬ್ದಾರಿ ಇಲ್ಲ. ಆಕೆ ತನ್ನ ಖರ್ಚಿಗೆ ಕೇಳುತ್ತಿದ್ದು ಇದು ಅಸಮಂಜಸವಾಗಿದೆ ಎಂದು ಹೇಳಿದ್ದಾರೆ. ಈ ವೀಡಿಯೋವನ್ನು CeoVoice ಹೆಸರಿನ X ಖಾತೆಯಲ್ಲಿ ಶೇರ್ ಮಾಡಲಾಗಿದೆ.
Kangana Ranaut : ಕಂಗನಾ ನಿರ್ಮಾಣದ ಎಮರ್ಜೆನ್ಸಿ ಸಿನಿಮಾಕ್ಕೆ ಕಾಡಿದೆ ಬ್ಯಾನ್ ಭೀತಿ, ಸಂಕಷ್ಟದಲ್ಲಿ ನಟಿ