Actor Chethan: ನಿಜ ಜೀವನದ ಖಳನಾಯಕರನ್ನು ಸೃಷ್ಟಿಸಿದ್ದು ನಾವು; ದರ್ಶನ್ ಪ್ರಕರಣದ ಬಗ್ಗೆ ನಟ ಚೇತನ್ ಮಾತು

Written by Soma Shekar

Published on:

---Join Our Channel---

Actor Chethan: ನಿನ್ನೆಯಿಂದಲೂ ಮಾದ್ಯಮಗಳಲ್ಲಿ ನಟ ದರ್ಶನ್ (Darshan) ಅವರ ಸುದ್ದಿಗಳೇ ಹರಿದಾಡುತ್ತಿದೆ. ದರ್ಶನ್ ಮತ್ತು ಗ್ಯಾಂಗ್ ಕೊ ಲೆ ಆ ರೋಪದ ಮೇಲೆ ಬಂಧಿತರಾಗಿದ್ದಾರೆ. ಮಾದ್ಯಮಗಳಲ್ಲಿ ದೊಡ್ಡ ಚರ್ಚೆಗಳೇ ನಡೆಯುತ್ತಿದೆ. ನಟ ದರ್ಶನ್ ವಿಚಾರಣೆ ವೇಳೆಯಲ್ಲಿ ಮೊದಲು ನನಗೇನು ಗೊತ್ತಿಲ್ಲ ಎಂದಿದ್ದರು ಎನ್ನಲಾಗಿದೆ. ಆದರೆ ಅನಂತರ ನಾನು ಹೆದರಿಸಲು ಅಷ್ಟೇ ಹೇಳಿದ್ದೆ ಎಂದೂ, ತದನಂತರ ಕಪಾಳಕ್ಕೆ ಹೊಡೆದಿದ್ದೆ ಎಂದು ಮೂರು ರೀತಿಯಲ್ಲಿ ಹೇಳಿದ್ದಾರೆಂದು ಮಾದ್ಯಮಗಳಲ್ಲಿ ಸುದ್ದಿಗಳಾಗಿವೆ.

ಇದೇ ವಿಚಾರವಾಗಿ ನಟ ಮತ್ತು ಹೋರಾಟಗಾರನಾಗಿ ಗುರ್ತಿಸಿಕೊಂಡಿರುವ ಚೇತನ್ (Actor Chethan) ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ನಟ ತಮ್ಮ ಪೋಸ್ಟ್ ನಲ್ಲಿ, ನಟ ದರ್ಶನ್ ಮತ್ತು ಆತನ ಸಹಚರರ ವಿರುದ್ಧ ಕೊಲೆ ಆರೋಪಗಳು ಗಂಭೀರವಾಗಿವೆ. ನಮ್ಮ ರಾಜ್ಯ ಪೊಲೀಸರು ಅದಕ್ಕೆ ಅನುಗುಣವಾಗಿ ತನಿಖೆ ನಡೆಸುತ್ತಾರೆ ಎಂದು ನಾವು ನಂಬುತ್ತೇವೆ.

ಅಲ್ಲದೇ ಚಲನಚಿತ್ರ ತಾರೆಯರು ಸುಮಾರು ಒಂದು ಶತಮಾನದಿಂದ ಅವರು ಪಡೆದಿರುವ ಜೀವನಕ್ಕಿಂತ ದೊಡ್ಡ ಸ್ಥಾನಮಾನಕ್ಕೆ ಅರ್ಹರಲ್ಲ. ಇಂತಹ ನಿಜ-ಜೀವನದ ಖಳನಾಯಕರನ್ನು ಸೃಷ್ಟಿಸಿದವರು ನಾವು ಒಂದು ಸಮಾಜವಾಗಿ ತಪ್ಪಿತಸ್ಥರು ಎ‌ಂದು ಬರೆದುಕೊಳ್ಳುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು, ಚೇತನ್ ಅವರ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಸದ್ಯಕ್ಕಂತೂ ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು, ದರ್ಶನ್ ಅವರ ಅಭಿಮಾನಿಗಳು ಮಾತ್ರ ನಟನ ಪರವಾಗಿ ಪೋಸ್ಟ್ ಗಳನ್ನು ಮಾಡುತ್ತಾ, ನಟನ ವಿರುದ್ಧವಾಗಿ ಕಾಮೆಂಟ್ ಮಾಡುವವರ ಬಗ್ಗೆ ಕೆಟ್ಟದಾಗಿ ಪ್ರತಿಕ್ರಿಯೆಗಳನ್ನು ನೀಡುತ್ತಿರುವುದು ಕಂಡು ಬರುತ್ತಿದೆ. ಈ ವಿಚಾರದಲ್ಲಿ ಮುಂದೇನಾಗಲಿದೆ ಎನ್ನುವುದೇ ಈಗ ಎಲ್ಲರ ಪ್ರಶ್ನೆಯಾಗಿದೆ.

Leave a Comment