Actor Darshan: ರೇಣುಕಾ ಸ್ವಾಮಿನ ಹೀರೋ ಮಾಡೋದು ನಿಲ್ಸಿ, ನಟ ದರ್ಶನ್ ಪರ ದನಿ ಎತ್ತಿದ ಹೇಮಲತಾ

Written by Soma Shekar

Updated on:

---Join Our Channel---

Actor Darshan: ಸ್ಯಾಂಡಲ್ವುಡ್ ನ ಸ್ಟಾರ್ ನಟ ದರ್ಶನ್ (Actor Darshan) ಕೊ ಲೆ ಕೇಸಿನಲ್ಲಿ ಜೈಲು ಸೇರಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿಯನ್ನು (Renukaswamy) ಪಟ್ಟಣಗೆರೆ ಶೆಡ್ ನಲ್ಲಿ ಬ ರ್ಬ ರ ವಾಗಿ ಹತ್ಯೆ ಮಾಡಲಾಗಿದೆ ಎನ್ನುವ ಪ್ರಕರಣದಡಿಯಲ್ಲಿ ನಟ ದರ್ಶನ್ ಎರಡನೇ ಆರೋಪಿ ಎಂದೂ, ದರ್ಶನ್ ಅವರ ಗೆಳತಿ ಪವಿತ್ರ ಗೌಡ ಮೊದಲ ಆರೋಪಿ ಎಂದೂ ಹೇಳಲಾಗಿದ. ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಈಗಾಗಲೇ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವಾಗಿ ಸ್ಯಾಂಡಲ್ ವುಡ್ ನ ಕೆಲವೇ ಕೆಲವು ಸೆಲೆಬ್ರಿಟಿಗಳು ತಮ್ಮ ಅನಿಸಿಕೆಗಳನ್ನ ಹಂಚಿಕೊಂಡಿದ್ದಾರೆ. ಈಗ ಇವೆಲ್ಲವುಗಳ ಬೆನ್ನಲ್ಲೇ ವಿಜೆ ಹಾಗೂ ಆ್ಯಂಕರ್ ಆಗಿರುವ ಹೇಮಲತಾ (Hemalatha) ಅವರು ನಟ ದರ್ಶನ್ ಅವರಿಗೆ ಸಪೋರ್ಟ್ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಅನ್ನ ಶೇರ್ ಮಾಡಿಕೊಂಡು ಒಂದಷ್ಟು ಸಾಲುಗಳನ್ನು ಬರೆದುಕೊಂಡಿದ್ದಾರೆ.

ಹೇಮಲತಾ ತಮ್ಮ ಪೋಸ್ಟ್ ನಲ್ಲಿ, ಕೊನೆಗೂ ನನ್ನನ್ನು ನಾನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಸಾವಿರ ಜನ ಸಾವಿರ ಮಾತನಾಡಲಿ, ಒಮ್ಮೆ ಬೆಳೆದ ಸ್ನೇಹಕ್ಕೆ ಕಡಲಿನಷ್ಟಿರುವ ಪ್ರೀತಿಗೆ ನಾವೆಲ್ಲರೂ ಋಣಿಗಳು, ಸ್ನೇಹವೆಂಬ ಸಂಕೋಲೆಯಲ್ಲಿ ಒಮ್ಮೆ ಸಿಕ್ಕಿಕೊಂಡರೆ ಕೊಂಡಿ ಕಳಚುವುದಿಲ್ಲ. ಅಂದಿಗೂ, ಇಂದಿಗೂ, ಎಂದೆಂದಿಗೂ ಮರೆಯುವುದಿಲ್ಲ, ಬಿಡುವುದಿಲ್ಲ, ಬಿಟ್ಟುಕೊಡುವುದಿಲ್ಲ.

ಈ ಘಟನೆಗೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ಕಾನೂನಿನ ಮುಖಾಂತರ ಅಂತ್ಯವನ್ನಾಡಿ ಎಲ್ಲಾ ಕಳಂಕವನ್ನು ತೊಳೆದುಕೊಂಡು ಹೊರಗೆ ಬನ್ನಿ. ನಿಮ್ಮ ಮೇಲಿರುವ ಪ್ರೀತಿ ಗೌರವ ಎಂದಿಗೂ ಕಮ್ಮಿಯಾಗುವುದಿಲ್ಲ. ರೇಣುಕಾ ಸ್ವಾಮಿಯನ್ನು ಹೀರೋ ಮಾಡುವುದನ್ನು ನಿಲ್ಲಿಸಿ. ಅದಕ್ಕೆ ಅರ್ಥವಿಲ್ಲ ಎಂದು ಹೇಮಲತಾ ಅವರು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಂಡು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

paradise8casino

Leave a Comment